Advertisement
ತಾ.ಪಂ. ಇಒಗಳು, ಪಿಡಿಒಗಳು, ಸ್ಥಳೀಯ ಶಾಸಕರು ಸೇರಿ ಹಂಚಿಕೆಯಾದ ಮನೆಗಳನ್ನು ಪರಿಶೀಲಿಸಿ ಅವರಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಜಿ.ಪಂ. ಸಿಇಒಗೆ ಕಳುಹಿಸಲು ನಿರ್ದೇಶಿಸಲಾಗಿದೆ. ಸಿಇಒ ಒಪ್ಪಿಗೆ ದೊರೆತ ಮನೆಗಳಿಗೆ ಅನುದಾನ ನೀಡಲಾಗುವುದು. ಮುಂದಿನ 15 ದಿನಗಳೊಳಗೆ ಈ ಪ್ರಕ್ರಿಯೆ ನಡೆಯಬೇಕು ಎಂದು ಸೂಚನೆ ನೀಡಿರುವುದಾಗಿ ಹೇಳಿದರು.
ವಸತಿ ಯೋಜನೆಯಲ್ಲಿ ಹಲವೆಡೆ ಅವ್ಯವಹಾರ ನಡೆದಿರುವುದು ಗೊತ್ತಾಗಿರುವ ಹಿನ್ನೆಲೆಯಲ್ಲಿ ಹಿಂದಿನ ಸರಕಾರದ ಅವಧಿಯಲ್ಲಿ ಹಂಚಿಕೆ ಮಾಡಲಾದ ಹಲವು ವಸತಿ ಯೋಜನೆಗಳಿಗೆ ನೀಡಬೇಕಾಗಿದ್ದ ಅನುದಾನಕ್ಕೆ ತಡೆ ನೀಡಲಾಗಿದೆ. ದಾಖಲೆ ಪ್ರಕಾರ ಕಳೆದ ಐದಾರು ವರ್ಷಗಳಲ್ಲಿ 45 ಲಕ್ಷ ಮನೆಗಳಿಗೆ ಹಣ ವಿತರಣೆಯಾಗಿದೆ ಎನ್ನುತ್ತದೆ. ಆದರೆ ಇಷ್ಟೊಂದು ಮನೆಗಳನ್ನು ನಿರ್ಮಿಸಲು ಹೇಗೆ ಸಾಧ್ಯ ಎಂಬ ಅನುಮಾನದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಸಚಿವರು ವಿವರಿಸಿದರು. ವಸತಿ ಯೋಜನೆಗೆ ಆ್ಯಪ್
ಮನೆ ಹಂಚಿಕೆಯಾದ ಪ್ರದೇಶ, ಅವುಗಳ ನಿರ್ಮಾಣ ಹಂತ ಸೇರಿದಂತೆ ಪ್ರತಿಯೊಂದನ್ನು ತಿಳಿಯುವ ನಿಟ್ಟಿನಲ್ಲಿ ವಸತಿ ಯೋಜನೆಯನ್ನು ಆ್ಯಪ್ ಮೂಲಕ ನಿರ್ವಹಿಸುವ ಉದ್ದೇಶವಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಅನುಷ್ಠಾನದ ಜವಾಬ್ದಾರಿಯನ್ನು ನಗರಗಳಲ್ಲಿ ಜಿಲ್ಲಾಧಿಕಾರಿ ಹಾಗೂ ಗ್ರಾಮಾಂತರದಲ್ಲಿ ಜಿ.ಪಂ. ಸಿಇಒಗೆ ವಹಿಸಲು ನಿರ್ಧರಿಸಲಾಗಿದೆ ಎಂದರು.
Related Articles
ಪ್ರಸ್ತುತ ವಿವಿಧ ವಸತಿ ಯೋಜನೆಗಳಿಗೆ ರಾಜ್ಯದ 70 ಸಾವಿರ ರೂ. ಹಾಗೂ ಕೇಂದ್ರದ 50 ಸಾವಿರ ರೂ. ಸೇರಿ ಒಟ್ಟು 1.20 ಲಕ್ಷ ರೂ. ನೀಡಲಾಗುತ್ತಿದೆ. ಆದರೆ ಮನೆ ನಿರ್ಮಾಣಕ್ಕೆ ಈ ಮೊತ್ತ ಸಾಲದು ಎಂಬುದನ್ನು ಮನಗಂಡು ಪ್ರತಿ ಮನೆಗಳಿಗೆ ಕನಿಷ್ಠ 2.5 ಲಕ್ಷ ರೂ. ನೀಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗುವುದು. ಈಗ ನಾಲ್ಕು ಕಂತುಗಳಲ್ಲಿ ಬಿಡು ಗಡೆಯಾಗುವ ಹಣವನ್ನು ಎರಡು ಕಂತುಗಳಿಗೆ ಇಳಿ ಸುವ ಉದ್ದೇಶವಿದೆ ಎಂದು ಸಚಿವರು ತಿಳಿಸಿದರು.
Advertisement