ದಾವಣಗೆರೆ: ರಾಷ್ಟ್ರ, ರಾಜ್ಯ ನಾಯಕರು ಅವಕಾಶ ನೀಡಿದರೆ ರಾಜ್ಯ ರಾಜಕಾರಣಕ್ಕೆ ಬರಲು ಸಿದ್ಧ ಎಂದು ಕೇಂದ್ರದ ಮಾಜಿ ಸಚಿವ, ದಾವಣಗೆರೆ ಸಂಸದ ಡಾ| ಜಿ.ಎಂ.ಸಿದ್ದೇಶ್ವರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರ, ರಾಜ್ಯ ನಾಯಕರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹೇಳಿದರೆ ಸ್ಪರ್ಧಿಸುತ್ತೇನೆ. ವಿಧಾನಸಭೆಗೆ ಸ್ಪರ್ಧಿಸುವಂತೆ ಹೇಳಿದರೆ ಸ್ಪರ್ಧಿಸುತ್ತೇನೆ. ಏನೂ ಬೇಡ ಮನೆಯಲ್ಲೇ ಇರಿ ಎಂದರೂ ಮನೆಯಲ್ಲೇ ಇರುತ್ತೇನೆ. ನನಗೆ ಮತ್ತು ನಮ್ಮ ಅಪ್ಪಾಜಿ ಒಳಗೊಂಡಂತೆ ನಮ್ಮ ಮನೆತನಕ್ಕೆ 7 ಬಾರಿ ಎಂಪಿ ಟಿಕೆಟ್ ನೀಡಲಾಗಿದೆ.
6 ಬಾರಿ ಗೆದ್ದಿದ್ದೇವೆ. ಹಾಗಾಗಿ ಪಕ್ಷ, ರಾಷ್ಟ್ರ , ರಾಜ್ಯ ನಾಯಕರು ಹೇಳಿದಂತೆ ನಾನು ನಡೆದುಕೊಳ್ಳುತ್ತೇನೆ. ರಾಜ್ಯ ರಾಜಕಾರಣಕ್ಕೆ ಬರುವುದಕ್ಕೆ ಇಷ್ಟ ಇಲ್ಲ. ಆದರೆ, ಪಕ್ಷ ಹೇಗೆ ಹೇಳುತ್ತದೋ ಹಾಗೆಯೇ ನಡೆದುಕೊಳ್ಳುತ್ತೇನೆ. ಪಕ್ಷಕ್ಕೆ ವ್ಯತಿರಿಕ್ತವಾಗಿ ಏನೂ ಮಾಡಲು ಹೋಗಲ್ಲ ಎಂದರು.