ಗಂಗಾವತಿ: ಗಾಲಿ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಸ್ಥಾಪಿಸಿ ಗಂಗಾವತಿಯಿಂದ ಸ್ಪರ್ಧೆ ಮಾಡಲು ನಿರ್ಧರಿಸಿದಾಗಿನಿಂದ ಗಂಗಾವತಿ ಸೇರಿ ವಿವಿಧ ನಗರಗಳ ಬಿಜೆಪಿ ಮುಖಂಡರು ಗಾಲಿ ಜನಾರ್ದನರೆಡ್ಡಿಯನ್ನು ಬೆಂಬಲಿಸಿ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದಾರೆ.
ಗಂಗಾವತಿಯಲ್ಲಿ ಶಾಸಕ ಪರಣ್ಣ ಮುನವಳ್ಳಿ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಸರಕಾರದ ವಿವಿಧ ಹುದ್ದೆಗೆ ನಾಮನಿರ್ದೇಶನಗೊಂಡಿದ್ದ ಕೆಲವರು ಸೇರಿ ಹತ್ತಕ್ಕೂ ಹೆಚ್ಚು ಬಿಜೆಪಿ ಪ್ರಮುಖರು ಮಂಗಳವಾರ ಗಾಲಿ ಜನಾರ್ದನರೆಡ್ಡಿ ಸಮ್ಮುಖದಲ್ಲಿ ರೆಡ್ಡಿ ಪಕ್ಷವನ್ನು ಸೇರ್ಪಡಗೊಂಡರು.
ನಗರಯೋಜನಾ ಪ್ರಾಧಿಕಾರದ ಸದಸ್ಯ ಮನೋಹರಗೌಡ, ವಿರೇಶ ಸುಳೆಕಲ್,ವೀರೇಶ ಬಲ್ಕುಂದಿ,ಹೊಸಮಲಿ ರಮೇಶ ನಾಯಕ, ಚಳಗೇರಿ ನಾಗರಾಜ, ಆದೋನಿ ಶಿವು, ಚನ್ನವೀರನಗೌಡ ಕೋರಿ,ಯಮನೂರ ಚೌಡ್ಕಿ, ದುರುಗಪ್ಪ ಆಗೋಲಿ ಸೇರಿ ವಿವಿಧ ಸಂಘಟನೆಗಳ ಅಧ್ಯಕ್ಷರು ಕಾರ್ಯಕರ್ತರು ರೆಡ್ಡಿ ಬೆಂಬಲಿಸಿ ಪಕ್ಷ ಸೇರ್ಪಡೆಗೊಂಡಿದ್ದಾರೆ.