Advertisement

ವಿಶ್ವಸಂಸ್ಥೆಯ ಉಗ್ರ ನಿಷೇಧ ಸಮಿತಿಗಿಲ್ಲ ಕಿಮ್ಮತ್ತು

12:39 PM Aug 11, 2022 | Team Udayavani |

ವಿಶ್ವಸಂಸ್ಥೆ: ಸೂಕ್ತ ಸಾಕ್ಷ್ಯಾಧಾರಗಳು ಇದ್ದರೂ ಕೂಡ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಪಾಕಿಸ್ತಾನದ ಉಗ್ರ ಅಬ್ದುಲ್‌ ರೆಹಮಾನ್‌ ಮಕ್ಕಿಯನ್ನು ನಿಷೇಧಿತ ಪಟ್ಟಿಗೆ ಸೇರಿಸಲು ಚೀನ ಆಕ್ಷೇಪ ಮಾಡಿದೆ. ಇದು ಆ ದೇಶದ ದ್ವಂದ್ವ ನಿಲುವನ್ನು ತೋರಿಸುತ್ತದೆ ಎಂದು ಭಾರತ ಕಟುವಾಗಿ ಆಕ್ಷೇಪಿಸಿದೆ.

Advertisement

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಮಾತನಾಡಿದ ಭಾರತದ ಶಾಶ್ವತ ರಾಯಭಾರಿಯ ಪ್ರತಿನಿಧಿ ರುಚಿರಾ ಕಾಂಭೋಜ್‌ “ಪಾಕಿಸ್ತಾನದ ಉಗ್ರನನ್ನು ನಿಷೇಧಿತ ಪಟ್ಟಿಗೆ ಸೇರಿಸಲು ಚೀನ ತಡೆಯೊಡ್ಡಿದೆ. ಇದರಿಂದಾಗಿ ವಿಶ್ವಸಂಸ್ಥೆಯ 1267- ಅಲ್‌ ಖೈದಾ ನಿಷೇಧ ಸಮಿತಿಯ ಮೇಲಿನ ವಿಶ್ವಾಸಾರ್ಹತೆಯೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು ಟೀಕಿಸಿದ್ದಾರೆ.

ಗಮನಾರ್ಹವೆಂದರೆ, ಮಂಗಳವಾರ ತಡರಾತ್ರಿ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯ ಅಧ್ಯಕ್ಷತೆಯನ್ನು ಚೀನಾವೇ ವಹಿಸಿಕೊಂಡಿತ್ತು. ಅದೇ ಸಂದರ್ಭದಲ್ಲಿ ಚೀನ ವಿರುದ್ಧವೇ ಭಾರತ ಹರಿಹಾಯ್ದಿದೆ.
ಪ್ರಬಲ ಸಾಕ್ಷ್ಯಗಳನ್ನು ನೀಡಿದ್ದರೂ ಪಾಕಿಸ್ತಾನದ ಉಗ್ರನ ಸೇರ್ಪಡೆಗೆ ತಡೆಯೊಡ್ಡಿದ್ದ ಕ್ರಮ ಸಮರ್ಥನೀಯ ಅಲ್ಲ ಎಂದು ಅವರು ವಾದಿಸಿದ್ದಾರೆ.

ಇದರಿಂದಾಗಿಯೇ ಅಂತಾರಾಷ್ಟ್ರೀಯ ಭದ್ರತೆ ಮತ್ತು ಶಾಂತಿಗೆ ಧಕ್ಕೆಯಾಗಿ ಪರಿಣಮಿಸಲಿದೆ ಎಂದು ಅವರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next