ನವೂ ಬೇಡ, ಭವಿಷ್ಯವೂ ಬೇಡ. ಕೇವಲ ವರ್ತಮಾನ ಕಾಲದ ಅಧಿಕಾರ ಮತ್ತು ಹಣ ಸಂಗ್ರಹದಲ್ಲಿ ತೊಡಗಿದ್ದೇವೆ ಎಂದು ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಖೇದ ವ್ಯಕ್ತಪಡಿಸಿದರು.
Advertisement
ವಿದ್ಯೋದಯ ಟ್ರಸ್ಟ್ ಸಹಯೋಗದಲ್ಲಿ ವಿದ್ಯೋದಯ ಪ.ಪೂ.ಕಾಲೇಜು ಆವರಣದಲ್ಲಿ ಸೋಮವಾರ ಆರಂಭಗೊಂಡ ಭಾರತೀಯ ಪ್ರಾಚೀನ ವಿಜ್ಞಾನ ಮತ್ತು ಪುರಾತತ್ವ ಸಂಘದ ಎರಡು ದಿನಗಳ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಸಾಹಿತ್ಯ, ವಸ್ತುಗಳ ಅಧ್ಯಯನ ಮಾಡಿದರೆ ಸಾಕಷ್ಟು ಮಾಹಿತಿ ಸಿಗುತ್ತವೆ. ಇದು ಭವಿಷ್ಯ ನಿರ್ಮಾಣಕ್ಕೆ ಸಹಕಾರಿ ಎಂದರು. ಶ್ರೀಶೈಲಂ ತೆಲುಗು ವಿ.ವಿ.ಯ ಡಾ| ಪಿ. ಚೆನ್ನ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಎನ್. ನಾಗರಾಜ ಬಲ್ಲಾಳ್ ಸ್ವಾಗತಿಸಿ ಪ್ರೊ| ಟಿ. ಮುರುಗೇಶಿ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಅಧ್ಯಕ್ಷ ಡಾ| ಟಿ. ಸತ್ಯಮೂರ್ತಿ ವರದಿ ವಾಚಿಸಿ
ದರು. ಸಮಿತಿ ಮತ್ತು ಸಂಘದ ಕಾರ್ಯದರ್ಶಿಗಳಾದ ಕೆ. ಗಣೇಶ ರಾವ್, ಡಾ| ಎಂ.ಡಿ. ಸಂಪತ್ ಮೊದ ಲಾದವರು ಉಪಸ್ಥಿತರಿದ್ದರು.