Advertisement

ಕ್ಯಾಚ್ ಸಿಕ್ಕರೂ ಔಟ್ ಇಲ್ಲ: ಕ್ರಿಕೆಟ್ ಈ ನಿಯಮಗಳ ಬಗ್ಗೆ ನಿಮಗೆಷ್ಟು ಗೊತ್ತು?

09:37 AM Oct 29, 2019 | keerthan |

ಜಂಟಲ್‌ಮನ್‌ ಗೇಮ್ ಕ್ರಿಕೆಟ್ ನ ಮೂಲ ನಿಯಮಾವಳಿಗಳು ಯಾರಿಗೆ ಗೊತ್ತಿಲ್ಲ ಹೇಳಿ. ಸ್ಪರ್ಧಾತ್ಮಕ ಕ್ರಿಕೆಟ್ ಆಯೋಜಿಸಲು ಈ ನಿಯಮಗಳು ಅಗತ್ಯವೂ ಹೌದು. ಐಸಿಸಿಯ ಪರಿಣಿತರ ತಂಡ ಈ ನಿಯಮಗಳನ್ನು ಕಾಲಕಾಲಕ್ಕೆ ಪರಾಮರ್ಶಿಸಿ, ನವೀಕರಿಸುತ್ತವೆ.

Advertisement

ಕೆಲವು ನಿಯಮಗಳು ಹೇಗಿರುತ್ತವೆ ಎಂದರೆ, ಕೇಳಿದರೆ ನಿಮಗೂ ಆಶ್ಚರ್ಯ ಅನಿಸಬಹುದು. ಅದರಲ್ಲಿ ಕೆಲವು ನಿಯಮಗಳು ವಿವಾದಗಳಿಗೂ ಕಾರಣವಾಗುತ್ತದೆ. ಈ ಬಾರಿಯ ವಿಶ್ವಕಪ್ ಫೈನಲ್ ನ ಬೌಂಡರಿ ಕೌಂಟ್ ನಿಯಮ ಅದರಲ್ಲಿ ಒಂದು. ಫೈನಲ್‌ ವಿವಾದದ ನಂತರ ಈ ನಿಯಮವನ್ನು ಐಸಿಸಿ ಕಡೆಗೂ ಬದಲಿಸಿದೆ.

ಅಂತಹ ಕೆಲವು ವಿಚಿತ್ರ ಕ್ರಿಕೆಟ್ ನಿಯಮಾವಳಿಗಳು ಇಲ್ಲಿವೆ.

ಲೆಗ್ ಬಿಫೋರ್ ವಿಕೆಟ್ : ಎಲ್ ಬಿ ಡಬ್ಲ್ಯೂ ಎಂದೇ ಪ್ರಸಿದ್ಧಿಯಾಗಿರುವ ಆ ನಿಯಮದ ಬಗ್ಗೆ ಬಹುತೇಕರಿಗೆ ತಿಳಿಯದ ವಿಷಯವೊಂದಿದೆ. ಇಲ್ಲಿ  ಚೆಂಡು ಕಾಲಿಗೆ ಬಡಿದರೆ ಮಾತ್ರ ಔಟ್ ಎಂದರ್ಥವಲ್ಲ. ವಿಕೆಟ್ ಗೆ ಸ್ಪರ್ಶಿಸಬಹುದಾದ ಚೆಂಡು ದೇಹದ ಯಾವ ಭಾಗಕ್ಕೆ  ತಾಗಿದರೂ ಅದನ್ನು ಔಟ್ ಎಂದು ಘೋಷಿಸಲಾಗುತ್ತದೆ. ಅಂದರೆ ಕಾಲಿಗೆ ತಾಗಿಲ್ಲದೆ ಇದ್ದರೂ ಲೆಗ್ ಬಿಫೋರ್ ವಿಕೆಟ್ ! (ಆಸೀಸ್ ವಿರುದ್ಧ  ಸಚಿನ್ ತೆಂಡೂಲ್ಕರ್ ಗೆ ಅಂಪೈರ್ ಡ್ಯಾರೆಲ್ ಹೇರ್ ನೀಡಿದ ತೀರ್ಪು ನೆನಪಿಸಿಕೊಳ್ಳಿ.)

ಕ್ಯಾಚ್ ಹಿಡಿದರೂ ಔಟ್ ಇಲ್ಲ: ಹೌದು.ಈ ನಿಯಮದ ಪ್ರಕಾರ ಕ್ಯಾಚ್ ಹಿಡಿದರೂ ಆಟಗಾರ ಔಟ್ಎಂದು ಘೋಷಿಸಲಾಗುವುದಿಲ್ಲ. ಬ್ಯಾಟ್ಸ್‌ಮನ್‌ ಬಾರಿಸಿದ  ಚೆಂಡು ಫೀಲ್ಡರ್ ನ ಟೋಪಿ ಅಥವಾ ಹೆಲ್ಮೆಟ್ ತಾಗಿ ಕೈಸೇರಿದರೆ ಅದು ನಾಟ್ ಔಟ್ ಎನ್ನಲಾಗುತ್ತದೆ. ಒಂದು ವೇಳೆ ಹಾಗೆ ಕ್ಯಾಚ್ ಹಿಡಿಯಲು ಅವಕಾಶ ನೀಡಿದರೆ ಫೀಲ್ಡರ್ ಗಳು ಟೋಪಿ, ಹೆಲ್ಮೆಟ್ ನಿಂದಲೇ ಕ್ಯಾಚ್ ಹಿಡಿಯುತ್ತಾರೆ. ಅದು ನ್ಯಾಯಸಮ್ಮತವಲ್ಲ.

Advertisement

ಸಿಕ್ಸ್ ಹೋದರು ಡೆಡ್ ಬಾಲ್: ಕೆಲವು  ಪಂದ್ಯದಲ್ಲಿ ನೇರ ಪ್ರಸಾರದ ಉದ್ದೇಶದಿಂದ ಏರಿಯಲ್ ಕ್ಯಾಮೆರಾಗಳನ್ನು ಬಳಸುತ್ತಾರೆ. ಐಪಿಎಲ್ ನಲ್ಲಿ ನೀವು ಇದನ್ನು ಗಮನಿಸಿರಬಹುದು. ಇಂತಹ ಸಮಯದಲ್ಲಿ ಬ್ಯಾಟ್ಸ್‌ಮನ್‌ ಹೊಡೆದ ಚೆಂಡು ಈ ಏರಿಯಲ್ ಕ್ಯಾಮ್ ಗೆ ತಾಗಿದರೆ ಅದು ಡೆಡ್ ಬಾಲ್ ಎಂದು ಘೋಷಿಸಲಾಗುತ್ತದೆ. ಮೇಲ್ಛಾವಣಿ ಇರುವ ಮೈದಾನದಲ್ಲಿ ಕೂಡ ಇದೇ ನಿಯಮ. ಅದು ಬೇಕಾದರೆ ಸಿಕ್ಸ್ ಹೋಗಲಿ ಅಥವಾ ಔಟ್ ಆಗಲಿ ಅದಕ್ಕಿಂತ ಮೊದಲು ಇತರ ವಸ್ತುವಿನ ಸ್ಪರ್ಶವಾದರೆ ಅದು ಡೆಡ್ ಬಾಲ್.

ಕ್ರಿಕೆಟ್ ನ ಪೆನಾಲ್ಟಿ : ಫುಟ್‌ಬಾಲ್‌, ಹಾಕಿಗಳಲ್ಲಿ ಪೆನಾಲ್ಟಿಯ ಬಗ್ಗೆ ಕೇಳಿರಬಹುದು. ಕ್ರಿಕೆಟ್ ನಲ್ಲೂ ಪೆನಾಲ್ಟಿ ಇದೆಯೆಂದರೆ ನಂಬುತ್ತಾರೆ. ವೇಗಿಗಳ ಬೌಲಿಂಗ್ ಗೆ ವಿಕೆಟ್ ಕೀಪರ್ ಗಳು ಸಾಮಾನ್ಯವಾಗಿ ಟೋಪಿ ಹಾಕಿ ಕೊಂಡಿರುತ್ತಾರೆ.  ಆ ಸಮಯದಲ್ಲಿ ತಮ್ಮ ಹೆಲ್ಮೆಟ್ ನ್ನು ತಮ್ಮ ಹಿಂದುಗಡೆ ಇಟ್ಟಿರುತ್ತಾರೆ. ಪಂದ್ಯದಲ್ಲಿ ಒಂದು ವೇಳೆ ಬಾಲ್ ಆ ಹೆಲ್ಮೆಟ್ ತಾಗಿ ನಿಂತರೆ ಅದಕ್ಕೆ ಪೆನಾಲ್ಟಿ ಹಾಕಲಾಗುತ್ತದೆ. ಅಂದರೆ ಬ್ಯಾಟಿಂಗ್ ಮಾಡುವ ತಂಡಕ್ಕೆ ಐದು ಹೆಚ್ಚುವರಿ ರನ್ ಗಳನ್ನು ನೀಡಲಾಗುತ್ತದೆ.

 ಮೂರು ನಿಮಿಷದ ನಿಯಮ: ಒಬ್ಬ ಆಟಗಾರ ಔಟ್ ಆದ ಮೂರು ನಿಮಿಷದ ಮೊದಲ ಮತ್ತೋರ್ವ ಆಟಗಾರ ಪಿಚ್ ಗೆ ಬಂದಿರಬೇಕು. ಒಂದು ವೇಳೆ ಆ ಬ್ಯಾಟ್ಸಮನ್ ಮೂರು ನಿಮಿಷದ ಒಳಗೆ ಪಿಚ್ ಗೆ ಆಗಮಿಸದೇ ಇದ್ದರೆ ಇಂತಹ ಆಟಗಾರನನ್ನು ನಿವೃತ್ತಿ ( ರಿಟೈರ್ಡ್ ಹರ್ಟ್ ) ಎಂದು ಘೋಷಿಸಿ ಔಟ್ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next