Advertisement

ರೈತನಿಗೆ ಮಾಜಿ ಶಾಸಕರಿಂದ ಧನಸಹಾಯ

10:11 PM Jan 18, 2022 | Team Udayavani |

ಗಜೇಂದ್ರಗಡ: ನಾಗೇಂದ್ರಗಡ ಭಾಗದ ಗುಡ್ಡದಲ್ಲಿನ ಚಿರತೆ ಸೆರೆ ಹಿಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ತ್ವರಿತಗತಿಯ ಕಾರ್ಯಚರಣೆಗೆ ಮುಂದಾಗಿ, ಚಿರತೆಯನ್ನು ಸೆರೆ ಹಿಡಿದು ಗ್ರಾಮಸ್ಥರಲ್ಲಿನ ಭೀತಿ ದೂರ ಮಾಡಲು ಮುಂದಾಗಬೇಕು ಎಂದು ಮಾಜಿ ಶಾಸಕ ಜಿ.ಎಸ್‌. ಪಾಟೀಲ ಒತ್ತಾಯಿಸಿದರು.

Advertisement

ನಾಗೇಂದ್ರಗಡದ ರೈತ ನಿಂಗಪ್ಪ ಹಂಡಿ ಯವರಿಗೆ ಸೇರಿದ ಆಕಳನ್ನು ಚಿರತೆ ಕೊಂದ ಹಿನ್ನೆಲೆಯಲ್ಲಿ ಪಶುವಿನ ಮಾಲೀಕರಿಗೆ ಸಹಾ ಯಧನ ನೀಡಿ ಮಾತನಾಡಿದ ಅವರು, ಈಗಾಗಲೇ ಕಳೆದೊಂದು ತಿಂಗಳಿಂದ ಈ ಭಾಗದಲ್ಲಿ ಚಿರತೆಯ ಭೀತಿ ಶುರುವಾಗಿದೆ. ಹಲವಾರು ಪ್ರಾಣಿಗಳ ಸಾವು-ನೋವು ಸಹ ಸಂಭವಿಸಿದೆ. ಆದರೂ ಅರಣ್ಯ ಇಲಾಖೆ ಚಿರತೆ ಹಿಡಿಯಲು ಕೈಗೊಳ್ಳಬೇಕಾದ ಕ್ಷಿಪ್ರ ಕಾರ್ಯಾಚರಣೆ ನಡೆಸಿಲ್ಲ.

ಮನೆ ಮುಂದೆ ಕಟ್ಟಿರುವ ಮೆಕೆ, ಹಸು, ಕುದುರೆಗಳ ಮಾರಣಹೋಮವಾಗುತ್ತಿದೆ. ಸರ್ಕಾರ ಕೂಡಲೇ ರೈತ ಕುಟುಂಬಕ್ಕೆ ಪರಿಹಾರ ನೀಡಲು ಮುಂದಾಗಬೇಕು ಎಂದರು. ವೈಯಕ್ತಿಕವಾಗಿ 10 ಸಾವಿರ ರೂ. ಸಹಾಯಧನ ನೀಡಿದರು. ರೋಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವೀರಣ್ಣ ಶೆಟ್ಟರ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ ವಿ.ಬಿ. ಸೋಮನಕಟ್ಟಿಮಠ, ಭೀಮಪ್ಪ ಹಂಡಿ ಇನ್ನಿತರರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next