Advertisement
ಸುಳ್ಯ, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕುಗಳನ್ನು ಒಳಗೊಂಡು ಪುತ್ತೂರು ವಿಭಾಗ ಕಾರ್ಯವ್ಯಾಪ್ತಿಯನ್ನು ಹೊಂದಿರುವ ದ.ಕ. ಜಿಲ್ಲೆಯ 2ನೇ ಮಹಿಳಾ ಪೊಲೀಸ್ ಠಾಣೆ ಇದಾಗಿದ್ದು ಮಂಜೂರಾತಿಗೊಂಡ ಏಳು ವರ್ಷದ ಬಳಿಕ ಹೊಸ ಕಟ್ಟಡ ನಿರ್ಮಾಣಕ್ಕೆ ಸರಕಾರ ಅನುದಾನ ಮಂಜೂರಾತಿ ಮಾಡಿದೆ. ಶಕುಂತಲಾ ಟಿ. ಶೆಟ್ಟಿ ಶಾಸಕರಾಗಿದ್ದ ಎರಡನೇ ಅವಧಿಯಲ್ಲಿ ಪುತ್ತೂರಿಗೆ ಮಹಿಳಾ ಠಾಣೆ ಮಂಜೂರಾಗಿತ್ತು. 2017ರ ಮಾ. 11ರಂದು ಮಹಿಳಾ ಠಾಣೆಯು ಕಾರ್ಯಾರಂಭಿಸಿತ್ತು.
ಈಗ ಮಹಿಳಾ ಠಾಣೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಕಟ್ಟಡ ಬ್ರಿಟಿಷ್ ಕಾಲದ್ದು. ಈ ಹಳೆ ಪೊಲೀಸ್ ಸ್ಟೇಷನ್ ಕಟ್ಟಡ ವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ತೆರವು ಮಾಡುವ ಚಿಂತನೆ ನಡೆದಿತ್ತು. ಇದಕ್ಕೆ ಪೂರಕ ಎಂಬಂತೆ ಮಹಿಳಾ ಠಾಣೆಗೆ ಪ್ರತ್ಯೇಕ ಕಟ್ಟಡಕ್ಕೆ ಅನು ದಾನ ಮಂಜೂರಾತಿಗೆ ಒಪ್ಪಿಗೆ ದೊರೆತಿದೆ. ಪುತ್ತೂರು ದೇವಾಲಯದ ಅಭಿವೃದ್ಧಿಗೆ ಈ ಕಟ್ಟಡ ತೆರವುಗೊಳಿಸಿ ವ್ಯವ ಸ್ಥಿತ ತಾಣ ವಾಗಿ ಪರಿವರ್ತಿಸುವ ಚಿಂತನೆ ಇದೆ. ಪುತ್ತೂರು ನಗರದ ಕೇಂದ್ರ ಭಾಗದಲ್ಲಿರುವ ಪೊಲೀಸ್ ಠಾಣೆ ಹಳೆ ಕಟ್ಟಡಕ್ಕೂ, ಶ್ರೀ ಮಹಾಲಿಂಗೇಶ್ವರ ದೇಗುಲದ ಆಚರಣೆಗೂ ಭಾವನಾತ್ಮಕ ಸಂಬಂಧವಿದೆ. ದೇಗು ಲದಲ್ಲಿ ಯಾವುದೇ ವಾರ್ಷಿಕ ಆಚರಣೆ ನಡೆಯುವ ಮುನ್ನ ಬ್ಯಾಂಡ್ ವಾಲಗದೊಂದಿಗೆ ಹೋಗಿ ಪೊಲೀಸ್ ಠಾಣೆಗೆ ಆಹ್ವಾನ ನೀಡಲಾಗುತ್ತದೆ. ಬಳಿಕವಷ್ಟೇ ದೇಗುಲದಲ್ಲಿ ದೀವಟಿಗೆ ಸಲಾಂ, ಬಲಿ ಉತ್ಸವ ನಡೆಯುತ್ತದೆ. ಹಾಗಾಗಿ ಈ ಕಟ್ಟಡ ತೆರವು ಮಾಡಬಾರದು ಎಂಬ ಕೂಗಿದೆ. 1 ಕೋಟಿ ರೂ.ಘೋಷಣೆ!
ಶಾಸಕ ಅಶೋಕ್ ಕುಮಾರ್ ರೈ ಅವರು ನ.30 ರಂದು ಮಂಗಳೂರಿನಲ್ಲಿ ಪೊಲೀಸ್ ವಸತಿ ಗೃಹ ಉದ್ಘಾಟನ ಸಮಾರಂಭದಲ್ಲಿ ಪುತ್ತೂರಿನ ಮಹಿಳಾ ಠಾಣೆಗೆ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವಂತೆ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು. ಜತೆಗೆ ಭಾಷಣದಲ್ಲಿಯು ಪ್ರಸ್ತಾವಿಸಿದರು. ಇದಕ್ಕೆ ವೇದಿಕೆಯಲ್ಲಿಯೇ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ| ಜಿ. ಪರಮೇಶ್ವರ್ ಜಾಗ ಸಿದ್ಧವಿದ್ದು ಬಿ ಗ್ರೇಡ್ ಪೊಲೀಸ್ ಸ್ಟೇಷನ್‌ಗೆ ಇಲ್ಲೇ 1 ಕೋ.ರೂ.ಅನ್ನು ಮಂಜೂರು ಮಾಡಿದ್ದೇನೆ ಎಂದು ಘೋಷಿಸಿದರು.
Related Articles
– ಅಶೋಕ್ ಕುಮಾರ್ ರೈ, ಶಾಸಕ, ಪುತ್ತೂರು
Advertisement
-ಕಿರಣ್ ಪ್ರಸಾದ್ ಕುಂಡಡ್ಕ