Advertisement

Electoral Bonds ಕುರಿತ ಸುಪ್ರೀಂ ತೀರ್ಪನ್ನು ಗೌರವಿಸ್ತೇನೆ…ಆದರೆ… ಶಾ ಹೇಳಿದ್ದೇನು?

10:43 AM Mar 16, 2024 | Team Udayavani |

ನವದೆಹಲಿ: ಚುನಾವಣಾ ಬ್ಯಾಂಡ್‌ ಗಳ ಕುರಿತು ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ಸಂಪೂರ್ಣವಾಗಿ ಗೌರವಿಸುತ್ತೇನೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಈ ಯೋಜನೆಯನ್ನು ರಾಜಕಾರಣದಲ್ಲಿನ ಕಪ್ಪು ಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾರಿಗೆ ತರಲಾಗಿತ್ತು. ಆದರೆ ಈ ಯೋಜನೆಯನ್ನು ರದ್ದುಪಡಿಸುವ ಬದಲು ಸುಧಾರಣೆಯ ಮಾರ್ಗವನ್ನು ಸೂಚಿಸಬಹುದಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ.

Advertisement

ಇದನ್ನೂ ಓದಿ:Bangalore: ಮಾರಾಟಕ್ಕೆ ಬಾಲಕಿಯರನ್ನು ಬೆಳೆಸುತ್ತಿರುವ ಅನಾಥಾಶ್ರಮಕ್ಕೆ ಮಕ್ಕಳ ಆಯೋಗ ದಾಳಿ

ಒಂದು ರಾಷ್ಟ್ರ, ಒಂದು ಚುನಾವಣೆ ಎಂಬುದು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆಯಾಗಿದೆ. ಇದು ದೇಶದಲ್ಲಿ ಅನುಷ್ಠಾನಗೊಂಡರೆ ಇದರಿಂದ ಅಭಿವೃದ್ಧಿ ವೇಗವಾಗಿ ಆಗಲಿದ್ದು, ಅನಾವಶ್ಯಕ ಖರ್ಚುಗಳಿಗೆ ಕೊನೆ ಹಾಡಲಿದೆ ಎಂದು ಶಾ ಹೇಳಿದರು.

ಭಾರತದ ರಾಜಕೀಯದಲ್ಲಿನ ಕಪ್ಪು ಹಣದ ಚಲಾವಣೆಯನ್ನು ತಡೆಯಲು ಚುನಾವಣಾ ಬಾಂಡ್‌ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಈ ಬಗ್ಗೆ ಸುಪ್ರೀಂಕೋರ್ಟ್‌ ನೀಡಿರುವ ಆದೇಶವನ್ನು ಪ್ರತಿಯೊಬ್ಬರು ಒಪ್ಪಿಕೊಳ್ಳುತ್ತಾರೆ. ಆದರೆ ನನ್ನ ಭಾವನೆ ಪ್ರಕಾರ, ಅದನ್ನು ರದ್ದುಪಡಿಸದೇ, ಸುಧಾರಣೆಯ ಮಾರ್ಗವನ್ನು ಸೂಚಿಸಬಹುದಿತ್ತು ಎಂದು ಇಂಡಿಯಾ ಟುಡೇ ಕನ್‌ ಕ್ಲೇವ್‌ ನಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ವಿರೋಧ ಪಕ್ಷಗಳು ರಾಜಕೀಯ ದೇಣಿಗೆಯನ್ನು ನಗದು ರೂಪದಲ್ಲಿ ತೆಗೆದುಕೊಳ್ಳುತ್ತಿದ್ದರು, ಏಕೆಂದರೆ 1,100 ರೂಪಾಯಿ ದೇಣಿಗೆಯಲ್ಲಿ 100 ರೂಪಾಯಿಯನ್ನು ಪಕ್ಷದ ಹೆಸರಿನಲ್ಲಿ ಠೇವಣಿ ಇಟ್ಟು, 1,000 ರೂಪಾಯಿಯನ್ನು ಜೇಬಿಗೆ ಇಳಿಸುತ್ತಿದ್ದರು ಎಂದು ಶಾ ಆರೋಪಿಸಿದರು.

Advertisement

ಹಲವಾರು ವರ್ಷಗಳಿಂದ ಕಾಂಗ್ರೆಸ್‌ ಪಕ್ಷ ಈ ವ್ಯವಸ್ಥೆಯನ್ನು ನಡೆಸಿಕೊಂಡು ಬರುತ್ತಿತ್ತು. ನಾನು ಚುನಾವಣಾ ಬ್ಯಾಂಡ್‌ ಗಳ ಕುರಿತು ನನ್ನ ನಿಲುವನ್ನು ಸ್ಪಷ್ಟಪಡಿಸುತ್ತೇನೆ, 20,000 ಸಾವಿರ ಚುನಾವಣಾ ಬಾಂಡ್‌ ಗಳ ಪೈಕಿ, ಭಾರತೀಯ ಜನತಾ ಪಕ್ಷ ಅಂದಾಜು 6,000 ಕೋಟಿ ದೇಣಿಗೆ ಪಡೆದಿದೆ. ಉಳಿದ ಬಾಂಡ್‌ ಗಳು ಯಾರಿಗೆ ಸೇರಿವೆ? ಟಿಎಂಸಿ 1,600 ಕೋಟಿ ರೂಪಾಯಿ, ಕಾಂಗ್ರೆಸ್‌ 1,400 ಕೋಟಿ, ಬಿಆರ್‌ ಎಸ್‌ 1,200 ಕೋಟಿ, ಬಿಜೆಡಿ 750 ಕೋಟಿ ಮತ್ತು ಡಿಎಂಕೆಗೆ 639 ಕೋಟಿ ರೂ. ಪಡೆದಿವೆ.

303 ಸಂಸದರನ್ನು ಹೊಂದಿರುವ ಬಿಜೆಪಿ 6,000 ಕೋಟಿ ರೂ. ದೇಣಿಗೆ ಪಡೆದಿದ್ದರೆ, ಉಳಿದ 14,000 ಕೋಟಿ ಚುನಾವಣಾ ಬಾಂಡ್‌ ಗಳನ್ನು 242 ಸಂಸದರಿರುವ ಪಕ್ಷಗಳು ಪಡೆದಿವೆ. ಇದರಲ್ಲಿ ಬೊಬ್ಬೆ ಹೊಡೆಯುವುದು ಏನಿದೆ? ಒಮ್ಮೆ ಖಾತೆಗಳಿಂದ ಹಣ ಪಡೆದ ನಂತರ ಅವರು ನಿಮ್ಮೆಲ್ಲರನ್ನು ಎದುರಿಸಲು ಸಾಧ್ಯವಾಗುವುದಿಲ್ಲ ಎಂದು ನಾನು ಹೇಳಬಲ್ಲೆ ಎಂಬುದಾಗಿ ಶಾ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next