Advertisement

ನಾಯಿಗಳಿಗೆ ಪೂರ್ಣ ಪ್ರಮಾಣದ ಟಿಕೆಟ್‌ ದರ

11:47 AM Oct 31, 2022 | Team Udayavani |

ಬೆಂಗಳೂರು: ಸರ್ಕಾರಿ ಬಸ್‌ಗಳಲ್ಲಿ ಪ್ರತಿ ಪ್ರಯಾಣಿಕರಿಗೆ 30 ಕೆಜಿವರೆಗಿನ ಲಗೇಜನ್ನು ಉಚಿತವಾಗಿ ಕೊಂಡೊಯ್ಯಲು ಅವಕಾಶ ಕಲ್ಪಿಸಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳು, ನಾಯಿಗಳಿಗೆ ಪೂರ್ಣ ಪ್ರಮಾಣದ ಟಿಕೆಟ್‌ ದರವನ್ನು ನಿಗದಿಪಡಿಸಿವೆ.

Advertisement

ಈ ಹಿಂದೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಅಗತ್ಯ ಸಾಮಗ್ರಿ ಹೊರತುಪಡಿಸಿ ಇತರೆ ಎಲ್ಲ ಪ್ರಕಾರದ ಲಗೇಜುಗಳಿಗೂ ದರ ವಿಧಿಸಲಾಗುತ್ತಿತ್ತು. ಸದ್ಯ ಲಗೇಜು ಸಾಗಣೆ ನಿಯಮ ಪರಿಷ್ಕರಣೆ ಮಾಡಲಾಗಿದೆ. ಹೊಸ ನಿಯಮದ ಪ್ರಕಾರ, ಪ್ರಯಾಣಿಕರೊಬ್ಬರು 30 ಕೆಜಿವರೆಗಿನ ಲಗೇಜನ್ನು ಉಚಿತವಾಗಿ ಕೊಂಡೊಯ್ಯಬಹುದು.

ಒಂದು ವೇಳೆ ಅದಕ್ಕಿಂತ ಹೆಚ್ಚಿನ ತೂಕದ ಲಗೇಜು ಇದ್ದರೆ, 30 ಕೆಜಿ ಹೊರತುಪಡಿಸಿ ಉಳಿದ ಲಗೇಜುಗೆ ಪ್ರಯಾಣ ದೂರದ ಹಂತಗಳನ್ನು ಅವಲಂಬಿಸಿ ಟಿಕೆಟ್‌ ದರ ವಿಧಿಸಲು ಸೂಚಿಸಲಾಗಿದೆ.

ವೈಯಕ್ತಿಕ ಬ್ಯಾಗ್‌, ಸೂಟ್‌ಕೇಸ್‌, ಕಿಟ್‌ಬ್ಯಾಗ್‌, ದಿನಸಿ, ತೆಂಗಿನ ಕಾಯಿ, ರಾಗಿ, ಅಕ್ಕಿ, ಹಿಟ್ಟು, ತರಕಾರಿ, ಹಣ್ಣು, ಹೂವು, ಒಂದು ಸೀಲಿಂಗ್‌ ಫ್ಯಾನ್‌, ಒಂದು ಮಿಕ್ಸರ್‌ಗಳನ್ನು 30 ಕೆ.ಜಿ ಒಳಗೆ ಪರಿಗಣಿಸುವಂತೆ ತಿಳಿಸಲಾಗಿದೆ.

ಈ ನಿಯಮದಿಂದ ಗ್ರಾಮೀಣ ಭಾಗದ ಜನರಿಗೆ, ಚಿಕ್ಕಪುಟ್ಟ ವ್ಯಾಪಾರಿಗಳಿಗೆ, ದೂರದ ಊರಿಗೆ ಪ್ರಯಾಣ ಬೆಳೆಸುವವರಿಗೆ ಅನುಕೂಲವಾಗಲಿದೆ.

Advertisement

ಇನ್ನು ಪ್ರಯಾಣಿಕರು ತಮ್ಮ ಜತೆ ನಾಯಿಯನ್ನು ಕೊಂಡೊಯ್ಯುವಾಗ ಒಬ್ಬ ವಯಸ್ಕನಂತೆ ಪರಿಗಣಿಸಿ, ಪೂರ್ಣಪ್ರಮಾಣದ ಟಿಕೆಟ್‌, ನಾಯಿ ಮರಿ ಇದ್ದರೆ ಅರ್ಧ ಟಿಕೆಟ್‌ ದರ ಪಡೆಯಬೇಕು. ಸಾಮಾನ್ಯ, ವೇಗದೂತ, ನಗರ, ಹೊರವಲಯ ಬಸ್‌ಗಳಲ್ಲಿ ಮಾತ್ರ ಸಾಗಣೆ ಮಾಡಬೇಕು ಎಂದು ಸೂಚಿಸಲಾಗಿದೆ. ಈ ಮೊದಲು ಕೂಡ ನಾಯಿಗಳನ್ನು ಕೊಂಡೊಯ್ಯಲು ಅವಕಾಶ ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next