Advertisement

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿ; ಭಯದಲ್ಲಿ ಜನ

08:35 PM Jul 23, 2021 | Team Udayavani |

ಬನಹಟ್ಟಿ : ಕಳೆದ ಒಂದು ವಾರದಿಂದ ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಕೃಷ್ಣೆ ಶುಕ್ರವಾರ ರಬಕವಿ ಬನಹಟ್ಟಿ ಸಮೀಪದ ಮಹೇಷವಾಡಗಿ ಸೇತುವೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

Advertisement

ಹಿಪ್ಪರಗಿ ಜಲಾಶಯದಲ್ಲಿ ಶುಕ್ರವಾರ ೧.೬ ಲಕ್ಷ ಕ್ಯುಸೆಕ್‌ನಷ್ಟು ನೀರು ಹರಿದು ಬರುತ್ತಿದು, ಮಹಾರಾಷ್ಟ್ರದ ರಾಜಾಪುರ ಜಲಾಶಯದಿಂದ ೨ ಲಕ್ಷ ಕ್ಯುಸೆಕ್‌ವರೆಗೆ ನೀರು ಬಿಡುಗಡೆಯಾಗುತ್ತಿರುವ ಹಿನ್ನಲೆ ಬೆಳಗಾವಿ, ಬಾಗಲಕೋಟೆ ಹಾಗು ವಿಜಯಪುರ ಜಿಲ್ಲೆಗಳ ಕೃಷ್ಣಾ ತಟದಲ್ಲಿರುವ ಜನತೆಯು ಮುನ್ನೆಚ್ಚರಿಕಾ ಕ್ರಮವಾಗಿ ಜನ ಜಾನುವಾರುಗಳ ಸಮೇತ ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕೆಂದು ತಾಲೂಕಾ ಆಡಳಿತ ತಿಳಿಸಿದೆ.

ಬೆಳಗಾವಿ ಜಿಲ್ಲೆಯ ಕುಡಚಿ ಸೇತುವೆ ಶುಕ್ರವಾರ ಬೆಳಿಗ್ಗೆಯಿಂದ ಸಂಚಾರ ಬಂದ್‌ ಆಗಿದ್ದು ಜಮಖಂಡಿ ಮಿರಜ ಬಸ್‌ಗಳು ಅಥಣಿ ಮಾರ್ಗವಾಗಿ ಪ್ರಯಾಣ ಬೆಳೆಸುತ್ತಿವೆ ಎಂದು ಜಮಖಂಡಿ ಕೆಎಸ್‌ಆರ್‌ಟಿಸಿ ಡಿಪೊ ಮ್ಯಾನೇಜರ್ ಸಂಗಮೇಶ ಮಟೋಳಿ ತಿಳಿಸಿದರು.

ಕೃಷ್ಣೆ ಮತ್ತು ಘಟಪ್ರಭೆ ಉಕ್ಕಿ ಹರಿಯುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ನೀರಿನ ಹರಿವುಯಿದ್ದು, ಪ್ರತಿ ದಿನ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಮಹಾರಾಷ್ಟçದ ರಾಜಾಪುರ ಜಲಾಶಯದಲ್ಲಿನ ನೀರಿನ ಮಟ್ಟ ದಿನದಿಂದ ದಿನಕ್ಕೆ ಮಾಹಿತಿ ಪಡೆಯಲಾಗುತ್ತಿದೆ. ಪ್ರತಿ ದಿನ ೩ ಲಕ್ಷ ಕ್ಯುಸೆಕ್ ನೀರಿನ ಮಟ್ಟ ಹರಿವಾದರೆ ಸಮಸ್ಯೆಯಾಗುವದು. ಆದಕಾರಣ ತಾಲೂಕಾ ಆಡಳಿತ ಈಗಾಗಲೇ ಪ್ರವಾಹ ಎದುರಿಸಲು ಎಲ್ಲ ತಯಾರಿ ಮಾಡಿಕೊಂಡಿದ್ದೇವೆ ಎಂದು ತಹಸೀಲ್ದಾರ ಸಂಜಯ ಇಂಗಳೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next