Advertisement

ಹುಣ್ಣಿಮೆ ಮಹಾತ್ಮೆ

10:18 AM Jan 10, 2020 | mahesh |

ಪ್ರತೀ ಬ್ಲೂ ಮೂನ್‌ನಂದು ಗ್ರಹಣ ಸಂಭವಿಸುತ್ತದೆಯೆ ಎಂಬ ಪ್ರಶ್ನೆ ನಿಮಲ್ಲಿ ಎದ್ದಿರಬೇಕಲ್ಲ? ಪ್ರತಿ ಹುಣ್ಣಿಮೆಯಂದು ಭೂಮಿ, ಸೂರ್ಯ ಮತ್ತು ಚಂದ್ರರ ನಡುವೆ ಬರುತ್ತದೆಯಾದರೂ ಕಕ್ಷೆಗಳ ಏರಿಳಿತದಿಂದಾಗಿ ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದಿಲ್ಲ. ಹಾಗಾಗಿ, ಗ್ರಹಣ ಸಂಭವಿಸುವುದಿಲ್ಲ.

Advertisement

ಈ ಚಂದ್ರಯಾರು? ಚಂದ್ರ ಭೂಮಿಯ ನೈಸರ್ಗಿಕ ಉಪಗ್ರಹ. ಇವನಿಂದಲೇ ಏಕೆ ಹುಣ್ಣಿಮೆ? ಸೌರಮಂಡಲದ ಅವಿಭಾಜ್ಯ ಅಂಗವಾಗಿ ಸೂರ್ಯ, ಭೂಮಿ ಹಾಗೂ ತನ್ನ ಸುತ್ತಲೂ ಸುತ್ತುತ್ತಾ ತಿಂಗಳಿಗೊಮ್ಮೆ ಭೂಮಿಯ ಜನರಿಗೆ ಹುಣ್ಣಿಮೆಯ ಬೆಳಕನ್ನು ಹಂಚುತ್ತಾನೆ. ವರ್ಷವೊಂದರಲ್ಲಿ 13 ಹುಣ್ಣಿಮೆಗಳು, 3-4 ಸೂಪರ್‌ ಮೂನ್‌ಗಳು ಮತ್ತು 3-4 ಬ್ಲೂ ಮೂನ್‌ಗಳು ಇರುತ್ತವೆ. ಆದರೆ, ಸೂಪರ್‌ ಬ್ಲೂ ಬ್ಲಿಡ್‌ಮೂನ್‌ ಸಂಭವಿಸುವುದು ಸೂರ್ಯ ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದಾಗ, ಚಂದ್ರ ಭೂಮಿಗೆ ಅತಿ ಸಮೀಪ ಬಿಂದುವಿನಲ್ಲಿದ್ದಾಗ. ಈ ರೀತಿ ಚಂದ್ರ ಭೂಮಿಗೆ ಅತೀ ಸಮೀಪ ಬಿಂದುವಿನಲ್ಲಿರುವುದು 18 ವರ್ಷ, 11 ದಿನ ಮತ್ತು 8 ಗಂಟೆಗಳಿಗೊಮ್ಮೆ ಮಾತ್ರ. ಆ ಸಮಯದಲ್ಲಿ ಚಂದ್ರನ ಬಹುಭಾಗ ಭೂಮಿಯ ದಟ್ಟ ನೆರಳಿನಡಿ ಬರುತ್ತದೆ. ಅದನ್ನೇ ವಿಜ್ಞಾನಿಗಳು ಖಗ್ರಾಸ ಗ್ರಹಣ ಅನ್ನೋದು. ಇದಕ್ಕೂ ಚಂದ್ರನೇ ಕಾರಣ. ಈ ಆವರ್ತ ಅವಧಿಯನ್ನು ಖಗೋಳ ಭಾಷೆಯಲ್ಲಿ ಸಾರೋಸ್‌ ಎಂದು ಕರೆಯುತ್ತಾರೆ. ಚಂದ್ರನಿಂದ ಭೂಮಿಗಿರುವ ಸರಾಸರಿ ದೂರ 3,82,900 ಕಿ.ಮೀ.ಗಳು. ಭೂಮಿಯ ಸುತ್ತ ಚಂದ್ರನ ತಿರುಗುವ ಕಕ್ಷೆ ಪೂರ್ಣ ವೃತ್ತಾಕಾರದಲ್ಲಿಲ್ಲವಾದ್ದರಿಂದ ಜನವರಿ 31 ರಂದು ಚಂದ್ರ ಭೂಮಿಯಿಂದ 3,56,565 ಕಿ.ಮಿ.ನಷ್ಟು ದೂರದಲ್ಲಿದ್ದು ಸರಾಸರಿ ದೂರಕ್ಕಿಂತ 26,335 ಕಿ.ಮೀ. ಹತ್ತಿರವಿರುತ್ತಾನೆ.

ಹುಣ್ಣಿಮೆ ಅಂತರ
ಚಾಂದ್ರ ಕ್ಯಾಲೆಂಡರ್‌ನ ಪ್ರಕಾರ ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆಗೆ ಇರುವ ಅಂತರ 29.5 ದಿನಗಳು ಮಾತ್ರ. ಆದರೆ ವಿಶ್ವಾದ್ಯಂತ ಬಳಸಲ್ಪಟುವ ಗ್ರಿಗೇರಿಯನ್‌ ಕ್ಯಾಲೆಂಡರ್‌ ಪ್ರಕಾರ ಈ ಅವಧಿ 28 ರಿಂದ 31 ದಿನಗಳು. ಹಾಗಾಗಿಯೇ ತಿಂಗಳೊಂದರಲ್ಲಿ ಎರಡು ಹುಣ್ಣಿಮೆಗಳೂ ಬರಲು ಸಾಧ್ಯ. ಆ ಎರಡನೆ ಹುಣ್ಣಿಮೆಯನ್ನೇ ನಾವು ಬ್ಲೂಮೂನ್‌ ಅನ್ನೋದು. ಹಾಗಾದರೆ ಪ್ರತೀ ಬ್ಲೂ ಮೂನ್‌ನಂದು ಗ್ರಹಣ ಸಂಭವಿಸುತ್ತದೆಯೆ ಎಂಬ ಪ್ರಶ್ನೆ ನಿಮಲ್ಲಿ ಎದ್ದಿರಬೇಕಲ್ಲ? ಇಲ್ಲ. ಹಾಗಾಗದಿರಲು ಕಾರಣವಿದೆ. ಭೂಮಿಯ ಸೌರಕಕ್ಷೆ ಮತ್ತು ಚಂದ್ರ ಭೂಮಿಯ ಸುತ್ತಲು ಬಳಸುವ ಕಕ್ಷೆಗಳ ನಡುವೆ 5 ಡಿಗ್ರಿಗಳ ವ್ಯತ್ಯಾಸವಿದೆ.

ಪ್ರತಿ ಹುಣ್ಣಿಮೆಯಂದು ಭೂಮಿ, ಸೂರ್ಯ ಮತ್ತು ಚಂದ್ರರ ನಡುವೆ ಬರುತ್ತದೆಯಾದರೂ ಕಕ್ಷೆಗಳ ಏರಿಳಿತದಿಂದಾಗಿ ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದಿಲ್ಲ. ಹಾಗಾಗಿ, ಗ್ರಹಣ ಸಂಭವಿಸುವುದಿಲ್ಲ. ಚಂದ್ರ ಭೂಮಿಯ ನೆರಳಿನ ಮೇಲೆ ಅಥವಾ ಕೆಳಗೆ ಇರುವುದರಿಂದ ಚಂದ್ರನ ಮೇಲೆ ತಲುಪುವ ಸೂರ್ಯನ ಬೆಳಕಿಗೆ ಭೂಮಿ ಅಡ್ಡಬರುವುದಿಲ್ಲ. ಆದ್ದರಿಂದ ಆಗಲೂ ಗ್ರಹಣ ಸಂಭವಿಸುವುದಿಲ್ಲ. ವರ್ಷ ವೊಂದರಲ್ಲಿ ಸುಮಾರು 13 ಹುಣ್ಣಿಮೆಗಳು ಬಂದರೂ ಚಂದ್ರಗ್ರಹಣಗಳ ಸಂಖ್ಯೆ 3 ಕ್ಕಿಂತ ಹೆಚ್ಚಿರುವುದಿಲ್ಲ.

ಚಂದ್ರನ ಬಣ್ಣಕ್ಕೆ ಕಾರಣ ಏನು?
ಸಾಮಾನ್ಯವಾಗಿ ಗ್ರಹಣ ಸಂಭವಿಸಿದಾಗ ಗ್ರಹಣಗ್ರಸ್ತ ಆಕಾಶಕಾಯ ಕಪ್ಪಾಗಿ ಕಾಣಿಸುತ್ತದೆ. ಇಲ್ಲಿ ಹಾಗಾಗದೆ ಗ್ರಹಣಗ್ರಸ್ತ ಚಂದ್ರ ಕೆಂಪಾದ ತಾಮ್ರವರ್ಣಧಾರಿಯಾಗಿ ಕಂಗೊಳಿಸುತ್ತದೆ. ಇದಕ್ಕೆ ಕಾರಣ ಭೂಮಿಯ ವಾತಾವರಣ. ಚಂದ್ರಗ್ರಹಣದ ಸಮಯದಲ್ಲಿ ಭೂಮಿಯ ಘನಭಾಗ ಸೂರ್ಯನ ಬೆಳಕನ್ನು ತಡೆಹಿಡಿಯುತ್ತದಾದರೂ ಭೂಮಿಯ ಮೇಲಿನ ಪಾರದರ್ಶಕ ವಾತಾವರಣ ಸ್ವಲ್ಪ ಮಟ್ಟಿನ ಸೂರ್ಯನ ಬೆಳಕನ್ನು ಹಾಯಲುಬಿಡುತ್ತದೆ. ಆಗ ಸೂರ್ಯನ ಬೆಳಕಿನಲ್ಲಿರುವ ನೀಲಿಯ ಬಣ್ಣ ಚದುರಿ ಹೋಗಿ, ಕೆಂಪು ಬಣ್ಣದ ಬೆಳಕು ಚಂದ್ರನ ಮೇಲೆ ಬೀಳುತ್ತದೆ. ಆಗ ಚಂದ್ರ ದಟ್ಟವಾದ ತಾಮ್ರದ ಕೆಂಬಣ್ಣದಿಂದ ಹೊಳೆಯುತ್ತಾನೆ.

Advertisement

ಆ ಕಡು ತಾಮ್ರವರ್ಣದ ಚಂದ್ರನನ್ನು ಬ್ಲಿಡ್‌ ಮೂನ್‌ ಎನ್ನುತ್ತಾರೆ.

ಗುರುರಾಜ್‌ ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next