Advertisement
ಕೇವಲ 20ರೂ.!ಚಳಿಗಾಲದಲ್ಲೂ ಉಡುಪಿ ನಗರದಲ್ಲಿ 36 ಡಿಗ್ರಿ ಉಷ್ಣಾಂಶವಿದ್ದು, ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಎಳನೀರಿನ ಮೂಲಕ ಮಾಲ್‌ಗಳು ಜನರನ್ನು ಆಕರ್ಷಿಸುತ್ತಿವೆ. ಒಂದಕ್ಕೆ 20 ರೂ.ಗಳಂತೆ ಮಾರಾಟವಾಗುತ್ತಿದ್ದು, ಸಾಫ್ಟ್ ಡ್ರಿಂಕ್ಸ್‌ಗಳಿಗೆ ಪೈಪೋಟಿ ಒಡ್ಡಿವೆ. ನಗರದ ಇತರ ಕಡೆಗಳಲ್ಲಿ ಎಳನೀರು ದರ 35 ರೂ. ಆಗಿದೆ.
ಜನರಿಂದ ಉತ್ತಮ ಬೇಡಿಕೆ ಕಂಡುಬಂದಿದೆ. ಆರಂಭದಲ್ಲಿ ಎಳನೀರನ್ನು ಸ್ಥಳದಲ್ಲೆ ಕುಡಿಯಲು ನೀಡಲಾಗುತ್ತಿತ್ತು ಈಗ ಮನೆಗೂ ಕೊಂಡೊಯ್ಯಲು ಅವಕಾಶವಿದೆ. ಯಾವುದೇ ಲಾಭಾಂಶವಿಲ್ಲದೆ ನೇರ ಬೆಲೆಯಲ್ಲಿ ಗ್ರಾಹಕರಿಗೆ ಕೊಡಲಾಗುತ್ತಿದೆ. ಕಳೆದ 15 ದಿನದಿಂದ ಹೀಗೆ ವ್ಯಾಪಾರ ಮಾಡುತ್ತಿರುವುದಾಗಿ ಮಾಲ್ ಒಂದರ ವ್ಯವಸ್ಥಾಪಕರು ಹೇಳಿದ್ದಾರೆ. ಮಂಡ್ಯ ಭಾಗದಿಂದ ಪೂರೈಕೆ
ಮಂಡ್ಯ, ಮದ್ದೂರು ಹೊಳೆನರಸೀಪುರ, ಮಳವಳ್ಳಿ ಭಾಗಗಳಿಂದ ಎಳನೀರನ್ನು ತರಿಸಿ ಮಾಲ್‌ಗಳಿಗೆ ಪೂರೈಸಲಾಗುತ್ತಿದೆ. ಮುಂಬಯಿ, ಹೊಸದಿಲ್ಲಿ, ರಾಜಸ್ತಾನ, ಪುಣೆ, ಗುಜರಾತ್, ಕೊಚ್ಚಿ, ಮೊದಲಾದ ಭಾಗಗಳಿಗೂ ಪೂರೈಕೆ ಮಾಡಲಾಗುತ್ತಿದೆ.
Related Articles
ಮಾಲ್‌ಗಳಲ್ಲಿ ಅಗ್ಗದ ಬೆಲೆಯಲ್ಲಿ ಎಳನೀರು ಲಭ್ಯವಾಗುತ್ತಿದೆ. ಮೂರು ದಿನಗಳಿಂದ ಖರೀದಿಸುತ್ತಿದ್ದೇನೆ. ಆರೋಗ್ಯದ ದೃಷ್ಟಿಯಿಂದ ಎಳನೀರು ಸೇವನೆ ಉತ್ತಮವಾಗಿದ್ದು, ಕಡಿಮೆ ದರಕ್ಕೆ ಮಾರಾಟ ಮಾಡುತ್ತಿರುವುದು ಉತ್ತಮ ಬೆಳವಣಿಗೆ.
-ಕೇಶವ್ ಕಾಮತ್ ,
ಸ್ಥಳೀಯರು
Advertisement
ಬೇಡಿಕೆ ಹೆಚ್ಚಳ19-20 ರೂ.ಗೆ ಉಡುಪಿ ಮಂಗಳೂರು ಪುತ್ತೂರು ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಗೆ ಈ ಎಳನೀರನ್ನು ಪೂರೈಕೆ ಮಾಡಲಾಗುತ್ತಿದೆ. ಈಗ ಬೇಡಿಕೆಯೂ ಹೆಚ್ಚಿದೆ. ಹೋಲ್‌ಸೇಲ್ ಮೂಲಕ ಪೂರೈಕೆ ಮಾಡುವ ಕಾರಣ ನಮಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗುವುದಿಲ್ಲ.
-ಸತೀಶ್, ಎಳನೀರು ಪೂರೈಕೆದಾರರು ಕೆಆರ್‌ಪೇಟೆ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟ
ಒಂದು ಲೋಡ್ ಲಾರಿಯಲ್ಲಿ 5 ಸಾವಿರದಷ್ಟು ಎಳನೀರುಗಳಿರುತ್ತವೆ. ನಗರದ ವಿವಿಧ ಮಾಲ್‌ಗಳಿಗೆ ಒಂದು ವಾರದಿಂದ 2ರಿಂದ3 ಲೋಡ್‌ಗಳಷ್ಟು ಎಳನೀರು ಸರಬರಾಜು ಆಗಿವೆ. ಮಾಲ್‌ಗಳಲ್ಲಿ ದಿನವೊಂದಕ್ಕೆ 500ರಿಂದ 800ರಷ್ಟು ಎಳನೀರು ಬಿಕರಿಯಾಗುತ್ತವೆ. ಕೆಲವರು 5-10 ಎಳನೀರು ಕೊಂಡೊಯ್ಯುವುದೂ ಇದೆ.