ಹಾವೇರಿ: ಸತ್ಯ ಮತ್ತು ಸುಳ್ಳಿನಲ್ಲಿ ಹಲವು ಪ್ರಕಾರಗಳಿದ್ದು, ಸತ್ಯ ಅಂದ್ರೆ ಕಠೋರ , ಇಂತಹ ಕಠೋರ ಸತ್ಯವನ್ನ ಸಮಾಜಕ್ಕೆ ತಿಳಿಸಲು ಯಾರಾದರು ಇದ್ದರು ಅಂತಾದರೆ ಅದು ಅಂಬಿಗರ ಚೌಡಯ್ಯ ಎಂದು ಬಸವರಾಜ್ ಬೊಮ್ಮಾಯಿ ಭಾನುವಾರ ಹೇಳಿಕೆ ನೀಡಿದ್ದಾರೆ.
ತಾಲೂಕಿನ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶರಣ ಸಂಸ್ಕೃತಿ ಉತ್ಸವ ಹಾಗೂ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಿಎಂ,
ಅಂಬಿಗರ ಚೌಡಯ್ಯ ಅಂದ್ರೆ ಕಟು ಸತ್ಯವನ್ನ ನುಡಿಯುವಂತ ಶರಣ. ಇವರನ್ನ ನಿಜ ಶರಣರು ಎಂದು ಕರೆದರು. ವಚನಗಳು ಇವತ್ತಿಗೂ ಜೀವಂತವಾಗಿರಲು ಅಂಬಿಗರ ಚೌಡಯ್ಯ ನವರ ಪಾತ್ರ ದೊಡ್ಡದು.ಭೂಮಂಡಲದ ಬದುಕನ್ನ ದಡ ಸೇರಿಸುವವ ಅಂಬಿಗ ಅವರು ಎಂದರು.
ನಾನು ಸಹ ಗಂಗಾಮಾತೆಯ ಮಗ, ನಾನು ಸಹ ನಿಮ್ಮವನೆ, ನನ್ನ ತಾಯಿ ಗಂಗಮ್ಮ.ತಾಯಿ ಆಶೀರ್ವಾದದಲ್ಲಿ ದೊಡ್ಡ ಶಕ್ತಿಯಿದೆ. ಎಲ್ಲಾ ಸಮಾಜದ ಆಶೋತ್ತರ ಇವತ್ತು ಹೆಚ್ಚಾಗುತ್ತಿದೆ ಎಂದರು.
Related Articles
ಗಂಗಾಮತ ಸಮಾಜ ಎಸ್ ಟಿಗೆ ಸೇರಿಸುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ರಿಜಿಸ್ಟರ್ ಜನರಲ್ ಆಪ್ ಇಂಡಿಯಾ ಅಲ್ಲಿ ನಿಮ್ಮ ಸಮಾಜದ ಫೈಲ್ ಒದೆ. ಎರಡು ಸಲ ಕೇಂದ್ರ ಮಂತ್ರಿಗಳನ್ನ ಭೇಟಿ ಮಾಡಿದ್ದೇನೆ. ಎಸ್ ಟಿಗೆ ಸೇರಿಸಲು ಪೂರ್ಣ ರೀತಿಯ ಸಹಕಾರ ಮಾಡುತ್ತೇನೆ. ಐದು ಕೋಟಿ ರೂ. ಬಿಡುಗಡೆ ಮಾಡುತ್ತೇವೆ, ಹಿಂದೆ ಎರಡು ಕೋಟಿ ಕೊಡೋದಾಗಿ ಹೇಳಿದ್ದೆ,ಅದನ್ನು ಸಹ ಬಿಡುಗಡೆ ಮಾಡುತ್ತೇನೆ ಎಂದರು.