Advertisement

ಪ್ರಯಾಣಿಕರ ಬೇಡಿಕೆ ಈಡೇರಿಸಿ

10:52 AM Jan 03, 2019 | |

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ರೈಲು ಪ್ರಯಾಣಿಕರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಮತ್ತು ಏಕಾಏಕಿ ರೈಲು ನಿಲುಗಡೆ ರದ್ದು ಸೇರಿದಂತೆ ಪ್ರಯಾಣಿಕರು ಸಂಚರಿಸುವ ರೈಲಿನಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಶೌಚಾಲಯ, ನೀರಿನ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ದಕ್ಷಿಣ ನೈರುತ್ಯ ರೈಲ್ವೆ ವಲಯದ ವಿಭಾಗೀಯ ರೈಲ್ವೆ ಮ್ಯಾನೇಜರ್‌ ಆರ್‌.ಎನ್‌.ಸೆಕ್ಸೇನಾರಿಗೆ ಮನವಿ ಸಲ್ಲಿಸಲಾಯಿತು.

Advertisement

ಅವಿಭಜಿತ ಕೋಲಾರ ಜಿಲ್ಲೆಯ ರೈಲ್ವೆ ಸಂಚಾರಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. 1915 ರಲ್ಲಿ ಮೈಸೂರು ಸಂಸ್ಥಾನದ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಬೆಂಗಳೂರಿನ ಯಲಹಂಕದಿಂದ ಚಿಕ್ಕಬಳ್ಳಾಪುರ ಚಿಂತಾಮಣಿ – ಶ್ರೀನಿವಾಸಪುರ-ಕೋಲಾರ ಮೂಲಕ ಬಂಗಾರಪೇಟೆ ಜೆಂಕ್ಷನ್‌ನಿಂದ ಅನುಕೂಲಕರವಾಗಿತ್ತು. 1990 ರದಶಕದ ಪ್ರಾರಂಭದಲ್ಲಿ ಈ ಮಾರ್ಗದ ರೈಲುಗಳನ್ನು ರದ್ದುಗೊಳಿಸಿದಾಗ, ರೈಲುಗಳ ಪುನರ್‌ ಆರಂಭಕ್ಕೆ ಒತ್ತಾಯದ ಹೋರಾಟಗಳು ಭುಗಿಲೆದಿದ್ದವು.

ಸುದೀರ್ಘ‌ ಹೋರಾಟ:ಈ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ರೈಲ್ವೆ ಮಂತ್ರಿಯಾಗಿದ್ದ ದಿವಂಗತ ಜಾಫರ್‌ ಷರೀಫ್ ಅವರು ನ್ಯಾರೋಗೇಜ್‌ ಮಾರ್ಗವನ್ನು ಬ್ರಾಡ್‌ಗೆಜ್‌ ಮಾರ್ಗವಾಗಿ ಪರಿವರ್ತಿಸಲು ಬಜೆಟ್‌ನಲ್ಲಿ ಘೋಷಿಸಿದ್ದರು. ಸುದೀರ್ಘ‌ ಹೋರಾಟಗಳ ನಂತರ ಈಗಿನ ಸಂಸದ ಕೆ.ಎಚ್‌.ಮುನಿಯಪ್ಪನವರು ರೈಲ್ವೆರಾಜ್ಯ ಸಚಿವರಾದ ಮೇಲೆ ಈ ಕೆಲಸ ಪೂರ್ಣಗೊಂಡು ಅವಿಭಜಿತ ಕೋಲಾರ ಜಿಲ್ಲೆಯ ಜನರ ಬದುಕಿನ ಭಾಗವಾಗಿದ್ದ ಈ ರೈಲು ಮಾರ್ಗ ಐದು ವರ್ಷಗಳ ಹಿಂದೆ ಸಂಚಾರ ಪಡೆದುಕೊಂಡಿತ್ತು.

ರದ್ದುಗೊಳಿಸಲಾಗಿದೆ: ರೈಲ್ವೆ ಇಲಾಖೆಯವರು ಸ್ವಷ್ಟವಾದ ಕಾರಣವಿಲ್ಲದೆ ಮೂರು ತಿಂಗಳ ಅವಧಿಗೆ ಕೋಲಾರ- ಶ್ರೀನಿವಾಸಪುರ ನಡುವೆ ಬರುವ ಜನ್ನಘಟ್ಟ, ಗೊಟ್ಟಿಹಳ್ಳಿ, ದಳಸನೂರು, ಶ್ರೀನಿವಾಪುರ-ಚಿಂತಾಮಣಿ ನಡುವೆ ಬರುವ ದೊಡ್ಡನತ್ತ, ಶಿಡ್ಲಘಟ್ಟ – ಚಿಕ್ಕಬಳ್ಳಾಪುರ ನಡುವಿನ ಗಿಡ್ನಹಳ್ಳಿ, ರೈಲ್ವೆ ನಿಲ್ದಾಣಗಳಲ್ಲಿ 2018 ಅ.7 ರಿಂದ 3 ತಿಂಗಳ ಅವಧಿಗೆ ತತ್ಕಾಲಿಕವಾಗಿ ರೈಲು ನಿಲುಗಡೆ ದ್ದುಗೊಳಿಸಲಾಗಿದೆ. ಅದರೆ ಮುಂದಿನ ದಿನಗಳಲ್ಲಿ ಈ ರೈಲು ನಿಲ್ದಾಣಗಳಲ್ಲಿ ರೈಲು ನಿಲುಗಡೆ ಪುನರಾರಂಭಿಸುವ ಕುರಿತು ರೈಲ್ವೆ ಇಲಾಖೆಯಲ್ಲಿ ಯಾವುದೇ ಪ್ರಕ್ರಿಯೆ ನಡೆದಿರುವ ಬಗ್ಗೆ ಸಾರ್ವಜನಿಕರಿಗೆ ಗೊತ್ತಾಗುತ್ತಿಲ್ಲ. ಏಕಾ ಏಕಿ ರೈಲು ನಿಲುಗಡೆ ರದ್ದು ಕುರಿತು ಮತ್ತು ಪ್ರಯಾಣಿಕರು ಸಂಚರಿಸುವ ರೈಲು-ನಿಲ್ದಾಣಗಳಲ್ಲಿ ಶೌಚಾಲಯ, ನೀರಿನ ಸಮಸ್ಯೆ ಹಾಗೂ ಈ ಮಾರ್ಗದಲ್ಲಿ ಮತ್ತೆರಡು ರೈಲು ಓಡಿಸುವ ಬಗ್ಗೆ ಈ ಭಾಗದ ಇಬ್ಬರು ಸಂಸತ್‌ ಸದಸ್ಯರಿಗೂ, ರಾಜ್ಯ ಸರ್ಕಾರದ ಈ ಭಾಗದ ಜನಪ್ರತಿನಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೆಲವು ಪ್ರಯಾಣಿಕರು ರೈಲ್ವೆ ಡಿವಿಜಲ್‌ ಮ್ಯಾನೇಜರ್‌ಗೆ ನೇರವಾಗಿ ಪತ್ರ ಬರೆದರೂ ಈ ಸಮಸ್ಯೆಗಳು ಸರಿಪಡಿಸಲು ಗಮನ ಕೊಡುತ್ತಿಲ್ಲ ಎಂದು ರೈತ ಸಂಘ ತಿಳಿಸಿದೆ. 

ನಿಯೋಗದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ ಬಯ್ನಾರೆಡ್ಡಿ, ಜಿಲ್ಲಾಧ್ಯಕ್ಷ ಪಿ.ಆರ್‌. ಸೂರ್ಯನಾರಾಯಣ, ಕಾರ್ಯದರ್ಶಿ ಟಿ.ಎಂ.ವೆಂಕಟೇಶ್‌, ವಕೀಲ ಡಿ.ಎನ್‌. ವೆಂಕಟರೆಡ್ಡಿ, ವಿಶ್ವನಾಥ್‌, ಚೌಡಪ್ಪ, ಶ್ರೀನಿವಾಸ್‌, ಅಶ್ವತ್ಥಪ್ಪ, ಬಾಬು ಇದ್ದರು. 

Advertisement

ಪ್ರಮುಖ ಬೇಡಿಕೆಗಳು ಏನೇನು?
ಜನಘಟ್ಟ, ಗೊಟ್ಟಹಳ್ಳಿ, ದಳಸನೂರು, ದೊಡ್ಡನತ್ತ ಮತ್ತು ಗಿಡ್ನಹಳ್ಳಿ ರೈಲ್ವೆ ನಿಲ್ದಾಣಗಳಲ್ಲಿ ರೈಲುಗಳನ್ನು ನಿಲುಗಡೆ ಮಾಡಬೇಕು, ಗೊಟ್ಟಹಳ್ಳಿ ರೈಲ್ವೆನಿಲ್ದಾಣ ತುರಾಂಡಹಳ್ಳಿ ಕಂದಾಯ ಗ್ರಾಮದಲ್ಲಿರುವುದರಿಂದ ನಿಲ್ದಾಣದ ಹೆಸರು ತುರಾಂಡಹಳ್ಳಿ ರೈಲ್ವೆ ನಿಲ್ದಾಣವೆಂದು ಬದಲಿಸಬೇಕು.

ಈ ಮಾರ್ಗ ಮಧ್ಯೆ ಓಡಾಡುವ ರೈಲುಗಳಲ್ಲಿ ಶೌಚಾಲಯಗಳ ಸಮಸ್ಯೆ ನಿವಾರಿಸಬೇಕು. ಕೋಲಾರದಿಂದ ಬಂಗಾರಪೇಟೆ (ಕೇವಲ 18 ಕಿ.ಮೀ)ಗೆ ಬೆಳಗ್ಗೆ 6ಕ್ಕೆ ಸಂಚರಿಸುವ ರೈಲಿನಲ್ಲಿ ಪ್ರಯಾಣಿಕರ್ಯಾರು ಹೋಗುತ್ತಿಲ್ಲ. ಇದು ಇಲಾಖೆಗೆ ತುಂಬಾ ನಷ್ಟವಾಗುತ್ತಿದೆ. ಈ ರೈಲನ್ನು ರಾತ್ರಿ ಶ್ರೀನಿವಾಸಪುರ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಿ ಬೆಳಗ್ಗೆ 6ಕ್ಕೆ ಶ್ರೀನಿವಾಸಪುರ ಬಿಟ್ಟು ಕೋಲಾರ-ಬಂಗಾರಪೇಟೆ-ಬೆಂಗಳೂರು ಮಾರ್ಗವಾಗಿ ಸಂಚರಿಸಬೇಕು.

ಈ ವರ್ಷದ (2019) ಬಜೆಟ್‌ನಲ್ಲಿ ಕೋಲಾರದಿಂದ ಮುಳಬಾಗಿಲು, ಶ್ರೀನಿವಾಸಪುರದಿಂದ ಆಂಧ್ರದ ಮದನಪಲ್ಲಿ ಮೂಲಕ ತಿರುಪತಿಗೆ ಲಿಂಕ್‌ ಮಾಡುವ ಮಾರ್ಗಗಳಿಗೆ ಆದ್ಯತೆ ಕೊಡಬೇಕು ಎಂದು ಒತ್ತಾಯಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next