Advertisement

ನೀರವ್ ಮೋದಿ ಬಂಧನ ಅವಧಿ ಆಗಸ್ಟ್ 22ರವರೆಗೆ ವಿಸ್ತರಣೆ

08:25 AM Jul 26, 2019 | Team Udayavani |

ಲಂಡನ್ : ಭಾರತೀಯ ಬ್ಯಾಂಕಿಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿ ಲಂಡನ್ ಗೆ ಪರಾರಿಯಾಗಿ ಬಳಿಕ ಅಲ್ಲಿ ಸೆರೆಯಾಗಿ ಇದೀಗ ಕಾರಾಗೃಹದಲ್ಲಿರುವ ಬಹುಕೋಟಿ ವಜ್ರ ವ್ಯಾಪಾರಿ ನೀರವ್ ಮೋದಿ ಅವರ ಬಂಧನದ ಅವಧಿಯನ್ನು ಲಂಡನ್ ನ್ಯಾಯಾಲಯವು ಆಗಸ್ಟ್ 22ರವರೆಗೆ ವಿಸ್ತರಿಸಿದೆ.

Advertisement

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,700 ಕೋಟಿ ರೂಪಾಯಿಗಳನ್ನು ವಂಚಿಸಿ ದೇಶದಿಂದ ಪಲಾಯನ ಮಾಡಿರುವ ಉದ್ಯಮಿಗೆ ಲಂಡನ್ ನ್ಯಾಯಾಲಯದ ಈ ನಿರ್ಧಾರದಿಂದಾಗಿ ಹಿನ್ನಡೆ ಉಂಟಾದಂತಾಗಿದೆ.

ನೀರವ್ ಮೋದಿ ಅವರನ್ನು ಮಾರ್ಚ್ 19ರಿಂದ ವಾಂಡ್ಸ್ ವರ್ತ್ ಜೈಲಿನಲ್ಲಿ ಇರಿಸಲಾಗಿದೆ. ಅಂದಿನಿಂದಲೂ ಮೋದಿ ಅವರು ಜಾಮೀನು ಪಡೆಯಲು ಸತತ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ ಮತ್ತು ಈ ಎಲ್ಲಾ ಪ್ರಯತ್ನಗಳಲ್ಲೂ ಅವರು ಜಾಮೀನು ಪಡೆಯಲು ವಿಫಲರಾಗಿದ್ದಾರೆ.

ನೀರವ್ ಮೋದಿಯನ್ನು ದೇಶಕ್ಕೆ ಗಡೀಪಾರು ಮಾಡುವಂತೆ ಭಾರತ ಸರಕಾರವು ಇಂಗ್ಲಂಡ್ ಸರಕಾರಕ್ಕೆ ಮನವಿ ಮಾಡಿದ ಆಧಾರದಲ್ಲಿ ಹಾಗೂ ಸಿಬಿಐ ಪ್ರಕಟಿಸಿದ್ದ ರೆಡ್ ಕಾರ್ನರ್ ನೋಟೀಸ್ ಆಧಾರದಲ್ಲಿ ನೀರವ್ ಮೋದಿ ಬಂಧನವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next