Advertisement

ರೈತರ ದಾಖಲೆಗೆ ‘ಫ‌್ರೂಟ್ಸ್‌’ತಂತ್ರಾಂಶ

03:02 PM May 23, 2019 | Suhan S |

ದೇವನಹಳ್ಳಿ: ಸರ್ಕಾರಿ ಸೌಲಭ್ಯ ಪಡೆಯಲು ರೈತರು ಇನ್ನು ಮುಂದೆ ಪ್ರತಿ ಬಾರಿ ಜಮೀನಿನ ಪಹಣಿ, ಆಧಾರ್‌, ಬ್ಯಾಂಕ್‌ ಖಾತೆ ವಿವರಗಳನ್ನು ಒದಗಿ ಸುವ ಅಗತ್ಯವಿಲ್ಲ. ಕೃಷಿ ಇಲಾಖೆಯೇ ಈಗ ರೈತರ ವಿವರಗಳನ್ನು ಸಂಗ್ರಹಿಸಿ, ‘ಫ‌್ರೂಟ್ಸ್‌’ ತಂತ್ರಾಂಶದಲ್ಲಿ ದಾಖಲೀಕರಣ ಮಾಡಿಕೊಳ್ಳುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಎಂ.ಎನ್‌. ಮಂಜುಳಾ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು, ರಾಜ್ಯದೆಲ್ಲೆಡೆ ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ. ಹೀಗಾಗಿ, ಪ್ರತಿಯೊಬ್ಬ ರೈತರು ಮುಂಗಾರು ಹಂಗಾಮಿನ ಸಹಾಯಧನ ದಲ್ಲಿ ಕೃಷಿ ಸೌಲಭ್ಯ ಪಡೆಯಲು, ಫ‌್ರೂಟ್ಸ್‌ (ಫಾರ್ಮರ್‌ ರಿಜಿಸ್ಟ್ರೇಷನ್‌ ಆ್ಯಂಡ್‌ ಯೂನಿಫೈಡ್‌ ಬೆನಿಫಿಷಿಯರಿ ಇನ್ಫಾ ರ್ಮೇಷನ್‌ ಸಿಸ್ಟಂ) ತಂತ್ರಾಶದಲ್ಲಿ ಕಡ್ಡಾ ಯವಾಗಿ ನೋಂದಣಿ ಮಾಡಿಕೊಳ್ಳಲು. ರೈತರು ‘ಫ‌್ರೂಟ್ಸ್‌’ ತಂತ್ರಾಂಶದಲ್ಲಿ ಕಡ್ಡಾ ಯವಾಗಿ ನೋಂದಣಿ ಮಾಡಿಸಬೇಕು ಎಂದು ಹೇಳಿದರು.

ರಿಯಾಯತಿ ದರದಲ್ಲಿ ಸೌಲಭ್ಯ: ‘ಫ‌್ರೂಟ್ಸ್‌’ ತಂತ್ರಾಂಶದ ಮೂಲಕ ಬಿತ್ತನೆ ಬೀಜ, ಕೀಟನಾಶಕ, ಸಾವಯವ ಗೊಬ್ಬರ, ಕೃಷಿ ಉಪಕರಣ, ಸಸ್ಯ ಸಂರಕ್ಷಣಾ ಉಪ ಕರಣಗಳನ್ನು ಸಹಾಯ ಧನದಲ್ಲಿ ಪಡೆಯಬಹುದು. ಈ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳದ ರೈತರಿಗೆ ಇಲಾ ಖೆಯಿಂದ ಯಾವುದೇ ಸೌಲಭ್ಯಗಳನ್ನು ರಿಯಾಯತಿ ದರದಲ್ಲಿ ನೀಡಲು ಅವ ಕಾಶ ಇರುವುದಿಲ್ಲ ಎಂದು ಹೇಳಿದರು.

ಯೂನಿಕ್‌ ನಂಬರ್‌ ಕಾರ್ಡ್‌: ತಂತ್ರಾಂಶದಲ್ಲಿ ಹೆಸರು ನೋಂದಣಿ ಯಾದ ನಂತರ ರೈತರಿಗೆ ಯೂನಿಕ್‌ ನಂಬರ್‌ ಇರುವ ಕಾರ್ಡ್‌ ನೀಡಲಾಗು ತ್ತದೆ. ರೈತರ ಎಲ್ಲಾ ಮಾಹಿತಿ ಆನ್‌ಲೈನ್‌ನಲ್ಲಿ ನೋಂದಣಿಯಾಗಿರುತ್ತದೆ. ಯೂನಿಕ್‌ ನಂಬರ್‌ ಇದ್ದಲ್ಲಿ ಎಲ್ಲಾ ವಿವರ ಅಲ್ಲಿಯೇ ಸಿಗುತ್ತವೆ. ಇಲಾ ಖೆಯಿಂದ ನೀಡಿರುವ ಎಲ್ಲಾ ಸೌಲಭ್ಯಗಳ ಮಾಹಿತಿ ಇಲ್ಲಿ ಲಭ್ಯ ವಿದೆ. ಇದರಿಂದ ಸೌಲಭ್ಯಗಳ ದುರುಪ ಯೋಗ ತಪ್ಪಲಿದೆ ಎಂದು ತಿಳಿಸಿದರು.

ಹೆಸರು ನೋಂದಾಯಿಸಿಕೊಳ್ಳಿ: ರೈತರು ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಪಹಣಿ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌ ಜೆರಾಕ್ಸ್‌ ಪ್ರತಿ, ಪಾನ್ಪೋರ್ಟ್‌ ಅಳತೆಯ ಫೋಟೋ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರದ ಜೆರಾಕ್ಸ್‌ ಪ್ರತಿ ಸೇರಿದಂತೆ ಸೂಕ್ತ ದಾಖಲೆ ನೀಡಿ ತಮ್ಮ ಹೆಸರು ನೋಂದಾಯಿಸಿ ಕೊಳ್ಳಬೇಕು ಎಂದು ಹೇಳಿದರು.

Advertisement

ಫ‌್ರೂಟ್ಸ್‌ ಏಕೆ: ಕೃಷಿ ಇಲಾಖೆ ಕಳೆದ ಹಲವು ವರ್ಷಗಳಿಂದ ಕೆ-ಕಿಸಾನ್‌ ಯೋಜನೆ ಯಡಿ ನಾನಾ ಸವಲತ್ತುಗಳನ್ನು ನೀಡಲು ದತ್ತಾಂಶವನ್ನು ಕಳೆದ ಮೂರು ವರ್ಷ ಗಳಿಂದ ಸಂಗ್ರಹಿಸುತ್ತಿತ್ತು. ರೈತರ ವಿವರ ಸಂಗ್ರಹಣೆಯಲ್ಲಿ ಸಮಾಧಾನಕರ ಪ್ರಗತಿ ಯಾಗದ ಕಾರಣ ಇ-ಆಡಳಿತ ಇಲಾಖೆ ಯಿಂದ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳಲ್ಲಿ ಏಕರೂಪ ವಾಗಿ ರೈತರ ದತ್ತಾಂಶವನ್ನು ಒಂದು ಬಾರಿ ಸಂಗ್ರಹಿಸಿ ಡಲು ‘ಫ‌್ರೂಟ್ಸ್‌’ ತಂತ್ರಾಂಶ ಅಭಿವೃದ್ಧಿಪ ಡಿಸಲಾಗಿದೆ. ಮುಂಗಾರು ಹಂಗಾಮಿ ಗಾಗಿ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next