ಮುಂಬಯಿ: ಸಿನಿಮಾ ಸೆಲೆಬ್ರಿಟಿಗಳು (Movie Actors) ಐಷಾರಾಮಿ ಜೀವನ ಶೈಲಿಯನ್ನು ಅಳವಡಿಸಿಕೊಂಡಿರುತ್ತಾರೆ. ಪಾರ್ಟಿ, ಮೋಜು ಮಸ್ತಿ ಮಾಡುತ್ತಾ ಕೆಲ ಸ್ಟಾರ್ ಗಳು ಹೈಫೈ ಲೈಫ್ ಎಂಜಾಯ್ ಮಾಡುತ್ತಾರೆ.
ಈ ದುಬಾರಿ ಜೀವನದಲ್ಲಿ ಸ್ಟಾರ್‌ಗಳು ಧೂಮಪಾನ ,ಮದ್ಯಪಾನದಂತಹ ಚಟಕ್ಕೆ ಬೀಳುತ್ತಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಸ್ಮೋಕಿಂಗ್, ಡ್ರಿಂಕ್ಸ್ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಅದು ಅತಿಯಾಗಿ ಮಾಡಿದರೆ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಸೇರಿದ ಉದಾಹರಣೆ ಕೂಡ ಸಿನಿಮಾರಂಗದಲ್ಲಿ.
ಇತ್ತೀಚೆಗೆ ನಟ ಶಾರುಖ್ ಖಾನ್ ಇನ್ಮುಂದೆ ತಾನು ಧೂಮಪಾನ (Smoking) ಮಾಡುವುದಿಲ್ಲವೆಂದು ಘೋಷಿಸಿದ್ದಾರೆ. ಧೂಮಪಾನದ ಚಟವನ್ನು ಬೆಳೆಸಿಕೊಂಡು ಆರೋಗ್ಯ ಸಮಸ್ಯೆಗೆ ಒಳಗಾದವರ ಪಟ್ಟಿಯಲ್ಲಿ ಶಾರುಖ್ ಖಾನ್ ಕೂಡ ಇದ್ದಾರೆ. ಯಾರೆಲ್ಲ ಸ್ಮೋಕಿಂಗ್ ಚಟವನ್ನು ತ್ಯಜಿಸಿದ್ದಾರೆ ಎನ್ನುವುದರ ಕುರಿತ ಒಂದು ವರದಿ ಇಲ್ಲಿದೆ.
ಶಾರುಖ್ ಖಾನ್ :
ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಸ್ಕ್ರೀನ್ ಮೇಲೆ ತನ್ನ ಅಭಿನಯದಿಂದ ಎಷ್ಟು ಖ್ಯಾತಿಯೂ ಆಫ್ ಸ್ಕ್ರೀನ್‌ನಲ್ಲಿ ಕೆಲ ವಿವಾದಗಳಿಂದಲೂ ಸುದ್ದಿಯಾಗಿದ್ದಾರೆ. ಐಪಿಎಲ್ ಪಂದ್ಯವೊಂದರ ಸಂದರ್ಭದಲ್ಲಿ ಮದ್ಯಪಾನ ಮಾಡಿ ಮೈದಾನದಲ್ಲಿ ಅವರು ರಂಪಾಟ ಮಾಡಿದ್ದರು. ಮದ್ಯಪಾನ ಮಾತ್ರವಲ್ಲದೆ ಶಾರುಖ್ ಖಾನ್ ಅವರಿಗೆ ಧೂಮಪಾನದ ಚಟವೂಯಿದೆ.
ಎಲ್ಲಿಯವರೆಗೆ ಅಂದರೆ ಒಂದು ಸಲಿ ಶಾರುಖ್ ಖಾನ್ ದಿನಕ್ಕೆ 100 ಸಿಗರೇಟ್ ಸೇದಿದ್ದ ಕಾರಣ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ದಾಖಲಾಗಿದ್ದರು. ಇತ್ತೀಚೆಗೆ ಶಾರುಖ್ ಖಾನ್ ತಮ್ಮ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಇನ್ಮುಂದೆ ತಾನು ಧೂಮಪಾನ ಮಾಡುವುದಿಲ್ಲ ಅದನ್ನು ತ್ಯಜಿಸಿದ್ದೇನೆ ಎಂದು ಘೋಷಿಸಿದ್ದಾರೆ.
ಸಲ್ಮಾನ್ ಖಾನ್: ಬಾಲಿವುಡ್ ʼಟೈಗರ್ʼ ಸಲ್ಮಾನ್ ಖಾನ್ (Salman Khan) ಒಂದು ಕಾಲದಲ್ಲಿ ಚೈನ್ ಸ್ಮೋಕರ್ ಆಗಿದ್ದರು. ಧೂಮಪಾನ ಹೆಚ್ಚಾದ ಕಾರಣದಿಂದ ಅವರಿಗೆ ಅನೇಕ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು. ಟ್ರೈಜಿಮಿನಲ್ ನ್ಯೂರಾಲ್ಜಿಯಾ ಎಂದು ಕರೆಯಲ್ಪಡುವ ಕಾಯಿಲೆ ಅವರನ್ನು ಕಾಡಿತ್ತು. ಇದರಿಂದಾಗಿ ಅವರು ಸಲ್ಮಾನ್ ಮುಂದೆ ಆರೋಗ್ಯದತ್ತ ಗಮನ ಹರಿಸುವ ನಿಟ್ಟಿನಲ್ಲಿ ಧೂಮಪಾನವನ್ನು ತ್ಯಜಿಸಿದರು.
ಹೃತಿಕ್ ರೋಷನ್: ಬಾಲಿವುಡ್‌ನ ಸ್ಟಾರ್ ಹೃತಿಕ್ ರೋಷನ್ (Hrithik Roshan) ವಿಪರೀತವಾಗಿ ಸಿಗರೇಟ್ ಸೇದುತ್ತಿದ್ದರು. 2020ರಲ್ಲಿ ಹೃತಿಕ್ ಅವರು ಧೂಮಪಾನ ಚಟದಿಂದ ಹೊರಬಂದಿದ್ದರು. ಅವರು ʼಸಿಗರೇಟ್ʼ ಒಂದು ವೈರಲ್ ಎಂದು ಹೇಳಿದ್ದರು.
ಸೈಪ್ ಅಲಿ ಖಾನ್: ನಟ ಸೈಫ್ ಅಲಿ ಖಾನ್ (Saif Ali Khan) ಒಂದು ಕಾಲದಲ್ಲಿ ಅತಿಯಾದ ಧೂಮಪಾನ ಮಾಡುತ್ತಿದ್ದರು. ಇದರಿಂದಾಗಿ 2007ರಲ್ಲಿ ಅವರಿಗೆ ಎದೆನೋವು ಉಂಟಾಗಿ ಹೃದಯಘಾತವಾಗಿತ್ತು. ಇದರಿಂದ ಹೊರಬಂದ ಬಳಿಕ ಅವರು ಧೂಮಪಾನ, ಮದ್ಯಪಾನವನ್ನು ತ್ಯಜಿಸಿ ಆರೋಗ್ಯಕಜರ ಲೈಫ್ ಸ್ಟೈಲ್ ಅಳವಡಿಸಿಕೊಂಡರು.
ಅರ್ಜುನ್ ರಾಂಪಾಲ್: ಬಾಲಿವುಡ್ ನಟ (Arjun Rampal) ಶಾಲಾ ದಿನಗಳಿಂದಲೇ ಧೂಮಪಾನದ ಚಟಕ್ಕೆ ಬಿದ್ದಿದ್ದರು. ದಿನಕ್ಕೆ ಹತ್ತಾರು ಸಿಗರೇಟ್ ಗಳನ್ನು ಎಳೆಯುತ್ತಿದ್ದ 2020ರ ಕೋವಿಡ್ ಸಂದರ್ಭದಲ್ಲಿ ಧೂಮಪಾನ ತ್ಯಜಿಸಿದರು. ತಮ್ಮ ಅರಿಕ್ ಅವರಿಗಾಗಿ ರಾಂಪಾಲ್ ಧೂಮಪಾನ ತ್ಯಜಿಸಿದರು.
ಕೊಂಕಣ ಸೇನ್ ಶರ್ಮಾ: ಬಾಲಿವುಡ್ ನಟಿ ಕೊಂಕಣ ಸೇನ್ ಶರ್ಮಾ (Konkona Sen Sharma) ಅವರಿಗೆ ಅತಿಯಾದ ಧೂಮಪಾನ ಅಭ್ಯಾಸವಿತ್ತು. ಆದರೆ 2011ರಲ್ಲಿ ಅವರಿಗೆ ಮಗ ಹುಟ್ಟಿದ ಬಳಿಕ ತಾಯ್ತನದ ದೃಷ್ಟಿಯಿಂದ ಅವರು ಧೂಮಪಾನವನ್ನು ತ್ಯಜಿಸಿ ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಂಡರು.