Advertisement
ವೀರಸಾಗರ ಮಹಾರಾಜರ ಭವ್ಯ ಮಂಗಲ ವೃತಾಚರಣೆಯ ಪ್ರಯುಕ್ತ ಮಂಗಲ ಕಲಶ ಸ್ಥಾಪನೆ ಇಂದು ಬೆಳಗ್ಗೆ 9 ಗಂಟೆಗೆ ನೆರವೇರಲಿದೆ. ಅದಕ್ಕೂ ಮೊದಲು 7 ಗಂಟೆಗೆ ನಗರದ ಹಿರಿಯಂಗಡಿ ಹಿರೇ ಬಸದಿ ಶ್ರೀ ನೇಮಿನಾಥ ಸ್ವಾಮಿ ಬಸದಿಯಿಂದ ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಜಿನಬಿಂಬದೊಂದಿಗೆ ಮೆರವಣಿಗೆ ನಡೆಯಲಿದೆ.
ಮಠದಲ್ಲಿ ಇಂದಿನಿಂದ ಧಾರ್ಮಿಕ ಪ್ರವಚನ ನಡೆಯಲಿದೆ. ಜೈನ ಧರ್ಮದ ಶ್ರಾವಕರಿಗೋಸ್ಕರ ನಿತ್ಯದೇವಪೂಜೆ, ಗುರುಪಾಸ್ತಿ, ಸ್ವಾಧ್ಯಾಯ, ಸಂಯಮ, ತಪ ಮತ್ತು ದಾನ ಇವು ಆರು ಪ್ರಕಾರದ ಶತಕ್ರಿಯೆಗಳು ನಡೆಯಲಿದೆ. ನಿತ್ಯ ಅಭಿಷೇಕ, ಪ್ರತೀ ರವಿವಾರ ಭಗವಂತ ಆರಾಧನೆ, ಪ್ರವಚನ, ಚರ್ಚೆ ನಡೆಯಲಿದೆ. ಅಲ್ಲದೇ ಮುಕುಟ ಸಪ್ತಮಿ, ರಕ್ಷಾಬಂಧನ, ದಶಲಕ್ಷಣ ಪರ್ವಾರಂಭ ವಿಜಯದಶಮಿ ಹೀಗೆ ವಿವಿಧ ಆಚರಣೆಗಳು ಮುನಿಮಹಾರಾಜರ ಮಾರ್ಗದರ್ಶನದಲ್ಲಿ ನಡೆಯಲಿವೆ.
Related Articles
ಇಂದು ಅಪರಾಹ್ನ 2.30ರಿಂದ ದಾನಶಾಲೆ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಧರ್ಮಸಭೆಯಲ್ಲಿ ಕಾರ್ಕಳ ಜೈನಮಠದ ಶ್ರೀ ರಾಜಗುರು ಧ್ಯಾನಯೋಗಿ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಆರ್ಶೀವಚನ ನೀಡಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಗೌರವ ಉಪಸ್ಥಿತಿ ಇರಲಿದ್ದು, ಮುಖ್ಯ ಅತಿಥಿಗಳಾಗಿ ಮಾಚಿ ಸಚಿವ ಕೆ. ಅಭಯಚಂದ್ರ ಜೈನ್, ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ಉಪಸ್ಥಿತರಿರಲಿದ್ದಾರೆ.
Advertisement