Advertisement

ಇಂದಿನಿಂದ ನಮೋ ತ್ರಿಪದ; 3ನೇ ಬಾರಿ ಪ್ರಧಾನಿಯಾಗಿ ಇಂದು ಮೋದಿ ಪ್ರಮಾಣ ಸ್ವೀಕಾರ

12:16 AM Jun 09, 2024 | Team Udayavani |

ಹೊಸದಿಲ್ಲಿ: ಬಿಜೆಪಿಯ ಅಗ್ರನಾಯಕ ನರೇಂದ್ರ ಮೋದಿಯವರು ರವಿವಾರ ಸಂಜೆ 7.15ಕ್ಕೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಜವಾಹರ ಲಾಲ್‌ ನೆಹರೂ ಅವರ ಬಳಿಕ ಸತತ 3ನೇ ಬಾರಿಗೆ ಪ್ರಧಾನಿಯಾದ ಮೊದಲಿಗ ಎಂಬ ದಾಖಲೆ ನಿರ್ಮಿಸಲು ಮೋದಿ ಸಜ್ಜಾಗಿದ್ದಾರೆ. “ಮೋದಿ 3.0 ಆಡಳಿತ’ ಆರಂಭದ ಕ್ಷಣಕ್ಕೆ ವಿದೇಶಿ ನಾಯಕರ ಸಹಿತ 8 ಸಾವಿರ ವಿಶೇಷ ಆಹ್ವಾನಿತರು ಸಾಕ್ಷಿಯಾಗಲಿದ್ದಾರೆ. ಮೋದಿ ಜತೆಗೆ ಸಚಿವ ಸಂಪುಟದ ಕೆಲವು ಸದಸ್ಯರು ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Advertisement

2014, 2019ರಲ್ಲಿ ಬಿಜೆಪಿಯ ಭರ್ಜರಿ ಜಯದೊಂದಿಗೆ ಅಧಿಕಾರದ ಗದ್ದುಗೆ ಏರಿದ್ದ ಮೋದಿ ಅವರು ಈ ಬಾರಿ ಎನ್‌ಡಿಎ ಮಿತ್ರ ಪಕ್ಷಗಳ ನೆರವಿನೊಂದಿಗೆ ಆಡ ಳಿತ ನಡೆಸಲಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 240 ಸೀಟು ಗೆದ್ದು ಬಹುಮತದ ಕೊರತೆ ಅನುಭವಿಸಿದ್ದರಿಂದ ಮೋದಿಯವರು ಮೊದಲ ಬಾರಿಗೆ ಸಮ್ಮಿಶ್ರ ಸರಕಾರದ ನೇತೃತ್ವವನ್ನು ವಹಿಸುತ್ತಿದ್ದಾರೆ. ಹಾಗಾಗಿ ಮೋದಿ 3.0 ಆಡಳಿತವು ವಿಶಿಷ್ಟವಾಗಿರಲಿದೆ. ಜೆಡಿಯು, ಟಿಡಿಪಿ ಸಹಿತ ವಿವಿಧ ಪಕ್ಷಗಳ ಬಲದೊಂದಿಗೆ ಎನ್‌ಡಿಎ ಕೂಟದ ಬಲ ಈಗ 300 ದಾಟಿದೆ.

ಎಲ್ಲಿ ಪ್ರಮಾಣ ವಚನ ಸ್ವೀಕಾರ?
ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭವು ಹೊಸದಿಲ್ಲಿಯ ರಾಷ್ಟ್ರಪತಿ ಭವನದ ಮುಂದೆ ನಡೆಯಲಿದ್ದು, ಮೂರು ಸ್ತರಗಳ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಎಸ್‌ಡಬುÉಎಟಿ (ಸ್ವಾಟ್‌) ಮತ್ತು ಎನ್‌ಎಸ್‌ಜಿ ಕಮಾಂಡೋಗಳನ್ನು ನಿಯೋಜಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರವಿವಾರ ಸಂಜೆ 7.15ಕ್ಕೆ ಪ್ರಮಾಣವಚನ ಬೋಧಿಸಲಿದ್ದಾರೆ.

ವಿದೇಶಿ ಗಣ್ಯರ ಉಪಸ್ಥಿತಿ
ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಭಾರತದ ನೆರೆ ರಾಷ್ಟ್ರಗಳಾದ ಶ್ರೀಲಂಕಾ, ಬಾಂಗ್ಲಾದೇಶ, ಭೂತಾನ್‌, ನೇಪಾಲ, ಮಾರಿಷಸ್‌, ಸೀಷೆಲ್ಸ್‌, ಮಾಲ್ದೀವ್ಸ್‌ ಸರಕಾರಗಳ ಮುಖ್ಯಸ್ಥರು ಹಾಜರಾಗಲಿದ್ದಾರೆ.

ಇಂದಿನ ಕಾರ್ಯಕ್ರಮಗಳು
-ರವಿವಾರ ಸಂಜೆ ರೈಸಿನಾ ಹಿಲ್ಸ್‌ ನಲ್ಲಿರುವ ರಾಷ್ಟ್ರಪತಿ ಭವನದಲ್ಲಿ 7.15ರಿಂದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಆರಂಭ
-ಪ್ರಮಾಣವಚನ ಮುಗಿದ ಮೇಲೆ ರಾಷ್ಟ್ರಪತಿ ಭವನದಲ್ಲಿ ಔತಣಕೂಟ
– ಇದರ ನಡುವೆಯೇ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಂದ ಬಿಜೆಪಿ ಸಂಸದರಿಗೆ ಔತಣ

Advertisement

8 ಸಾವಿರ ಮಂದಿ ಸಾಕ್ಷಿ
ವಿವಿಧ ಧರ್ಮಗಳ ಧಾರ್ಮಿಕ ಮುಖಂಡರು, ಪದ್ಮ ಪ್ರಶಸ್ತಿ ಪುರ ಸ್ಕೃತರು ಹಾಗೂ ವಿಶೇಷ ಆಹ್ವಾನಿತರ ಸಹಿತ 8 ಸಾವಿರಕ್ಕೂ ಅಧಿಕ ಗಣ್ಯರು ಪ್ರಮಾಣವಚನ ಸ್ವೀಕಾರಕ್ಕೆ ಸಾಕ್ಷಿಯಾಗ ಲಿದ್ದಾರೆ. ರವಿವಾರ ಅಧಿಕಾರ ಸ್ವೀಕಾರ ಸಮಾರಂಭ ಮುಗಿದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ವಿಶ್ವನಾಯಕರಿಗೆ ವಿಶೇಷ ಔತಣ ಕೂಟ ಏರ್ಪಡಿಸಿದ್ದಾರೆ. ಈ ವೇಳೆ ವಿವಿಧ ನಾಯಕರ ನಡುವೆ ರಾಜತಾಂತ್ರಿಕ ಮಾತುಕತೆಗಳಿಗೆ ಅವಕಾಶ ದೊರೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next