Advertisement

ಮಾಡೆಲಿಂಗ್‌ನಿಂದ ಸಿನಿಮಾಗೆ

11:15 AM Oct 20, 2017 | |

“ಮಾಡೆಲಿಂಗ್‌ ಮಾಡುತ್ತಿದ್ದೆ. ಸಿನಿಮಾದಿಂದ ಆಫ‌ರ್‌ ಬಂತು ಬಂದೆ …’ ಹೀಗೆನ್ನುವ ನಾಯಕಿ ನಟಿಯರಿಗೆ ಕೊರತೆಯಿಲ್ಲ. ಮಾಡೆಲಿಂಗ್‌ನಿಂದ ಬಂದ ನಟಿಯರು ಕ್ರಮೇಣ ಸಿನಿಮಾಕ್ಕೆ ಬಂದೇ ಬರುತ್ತಾರೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ ಸುಶ್ಮಿತಾ ಗೌಡ. ಯಾರು ಈ ಸುಶ್ಮಿತಾ ಎಂದರೆ “ಚಾಣಾಕ್ಷ’ ಸಿನಿಮಾ ಬಗ್ಗೆ ಹೇಳಬೇಕು.

Advertisement

ಈಗಷ್ಟೇ ಚಿತ್ರೀಕರಣ ಮುಗಿಸಿರುವ “ಚಾಣಾಕ್ಷ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ ಸುಶ್ಮಿತಾ. ಈಗಷ್ಟೇ ಡಿಗ್ರಿ ಮುಗಿಸಿರುವ ಸುಶ್ಮಿತಾ ಸುಮಾರು ಮೂರು ವರ್ಷಗಳಿಂದ ತಮ್ಮನ್ನು ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಳ್ಳುವ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ಅವರಿಗೆ ಅನೇಕ ಸಿನಿಮಾಗಳಿಂದ ಆಫ‌ರ್‌ಗಳು ಬಂದಿವೆ.

ಹೀಗೆ ಬಂದ ಅವಕಾಶದಲ್ಲಿ ಸುಶ್ಮಿತಾಗೆ ಇಷ್ಟವಾಗಿದ್ದು “ಚಾಣಾಕ್ಷ’. ಈಗಾಗಲೇ ಚಿತ್ರೀಕರಣ ಕೂಡಾ ಮುಗಿಸಿದ್ದಾರೆ. “ನನಗೆ ಅನೇಕ ಆಫ‌ರ್‌ಗಳು ಬಂದುವು. ಅದರಲ್ಲಿ ಚಾಣಾಕ್ಷ ಚಿತ್ರ ಇಷ್ಟವಾಯಿತು. ಮುಂದೆಯೂ ಚಿತ್ರರಂಗದಲ್ಲಿ ಒಳ್ಳೆಯ ಪಾತ್ರಗಳ ಮೂಲಕ ಗುರುತಿಸಿಕೊಳ್ಳಬೇಕೆಂಬ ಆಸೆ ಇದೆ’ ಎನ್ನುವುದು ಸುಶ್ಮಿತಾ ಮಾತು. ಅಂದಹಾಗೆ, ಸುಶ್ಮಿತಾ ಈಗ “ಚಾಣಾಕ್ಷ’ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.

ಒಂದು ಚಿತ್ರ ಬಿಡುಗಡೆಯಾದರೆ, ಆ ಚಿತ್ರದ ಮೂಲಕ ಗುರುತಿಸಿಕೊಳ್ಳುವ ಜೊತೆಗೆ ಚಿತ್ರರಂಗಕ್ಕೆ ತಮ್ಮ ಪರಿಚಯ ಕೂಡಾ ಆಗುತ್ತದೆ ಎಂಬ ಕಾರಣದಿಂದ ಮೊದಲ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಅಂದಹಾಗೆ, ಸುಶ್ಮಿತಾ ಅವರ ಸಿನಿಕೆರಿಯರ್‌ಗೆ ಅವರ ಕುಟುಂಬದ ಸಂಪೂರ್ಣ ಬೆಂಬಲವಿದೆಯಂತೆ. 

Advertisement

Udayavani is now on Telegram. Click here to join our channel and stay updated with the latest news.

Next