Advertisement
ಮರ್ಸಿಡೆಸ್ ಬೆಂಜ್‌ನಿಂದ ಮಾರುತಿ ಸುಜುಕಿ ಬ್ರೆಜಾ ಮತ್ತು ಕೊನೇಗೆ ಬೈಕ್ ಏರಿ ಪರಾರಿಯಾಗಿದ್ದಾನೆ. ಇಷ್ಟು ಮಾತ್ರವಲ್ಲ ಸಿಖ್ ಸಮುದಾಯದ ಧಾರ್ಮಿಕ ವಸ್ತ್ರಗಳನ್ನು ಧರಿಸುತ್ತಿದ್ದ ಆತ ಕೊನೆಗೆ ಬಾಲಿವುಡ್ ನಟನನ್ನೂ ಮೀರಿಸುವಂತೆ ಚಂದವಾಗಿ ಪ್ಯಾಂಟ್ ಶರ್ಟ್ ಧರಿಸಿದ್ದಾನೆ. ಆತನ ಡ್ರೆಸ್ ಮತ್ತು ಮುಖ ಬದಲಾವಣೆಯ ಏಳು ಸರಣಿ ಫೋಟೋಗಳನ್ನೂ ಪೊಲೀಸರು ಬಿಡುಗಡೆ ಮಾಡಿದ್ದಾರೆ.
Related Articles
Advertisement
ನೆರವಿತ್ತ ನಾಲ್ವರು ಸೆರೆ:ಪಾಲ್ ಪರಾರಿಯಾಗಲು ನೆರವಾದ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳವಾರ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಜತೆಗೆ ಬ್ರೆಜಾ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಆತನನ್ನು ಚೇಸ್ ಮಾಡುವ ವೇಳೆ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆಸಿದ್ದಾರೆ. ಪರಾರಿಯಾಗಿರುವ ಸಾಧ್ಯತೆ:
ಎಂಭತ್ತು ಸಾವಿರ ಮಂದಿ ಪಂಜಾಬ್ ಪೊಲೀಸರು ಹಗಲಿರುಳು ಅಮೃತ್ ಪಾಲ್‌ಗಾಗಿ ಶೋಧ ಕಾರ್ಯ ನಡೆಸುತ್ತಿರುವಂತೆಯೇ ಹೊಸತೊಂದು ಮಾಹಿತಿ ಹೊರಬಿದ್ದಿದೆ. ಆತ ರಾಜ್ಯದಿಂದ ಪರಾರಿಯಾಗಿರುವ ಸಾಧ್ಯತೆ ಇದೆ. ಈ ಬಗ್ಗಿ ಅಲ್ಲಿನ ಪೊಲೀಸರೇ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಮೂವರು:
ಖಲಿಸ್ತಾನ ಬೆಂಬಲಿಗ ನಾಯಕ ಅಮೃತ್ ಪಾಲ್ ಸಿಂಗ್‌ನ ಇನ್ನೂ ಮೂವರು ಬೆಂಬಲಿಗರನ್ನು ಅಸ್ಸಾಂ ದಿಬ್ರೂಗಡ ಜೈಲಿಗೆ ಮಂಗಳವಾರ ಕರೆತರಲಾಗಿದೆ. ಈ ಪೈಕಿ ಆತನ ಸಂಬಂಧಿ ಹರ್ಜಿತ್ ಸಿಂಗ್ ಕೂಡ ಸೇರಿದ್ದಾನೆ. ಇದುವರೆಗೆ ಒಟ್ಟು ಏಳು ಮಂದಿಯನ್ನು ಅಸ್ಸಾಂಗೆ ತಂದಂತೆ ಆಗಿದೆ. 80 ಸಾವಿರ ಪೊಲೀಸರು ಏನು ಮಾಡುತ್ತಿದ್ದರು?
“ಪಂಜಾಬ್‌ನ 80 ಸಾವಿರ ಪೊಲೀಸರು ಏನು ಮಾಡುತ್ತಿದ್ದರು. ಇದೊಂದು ಗುಪ್ತಚರ ವೈಫಲ್ಯವಲ್ಲವೇ?’ ಹೀಗೆಂದು ಪಂಜಾಬ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡದ್ದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್. ಅಮೃತ್‌ಪಾಲ್ ಸಿಂಗ್‌ನನ್ನು ಹುಡುಕಿ ಕೊಡಬೇಕು ಎಂದು ಆತನ “ವಾರಿಯರ್ಸ್ ಡೆ ಪಂಜಾಬ್’ ಸಂಘಟನೆಯ ಕಾನೂನು ಸಲಹೆಗಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, ಪಂಜಾಬ್‌ನ ಅಡ್ವೊಕೇಟ್ ಜನರಲ್ ಅವರನ್ನು ತರಾಟೆಗೆ ತೆಗೆದುಕೊಂಡಿತು. ನ್ಯಾ.ಎನ್.ಎಸ್.ಶೆಖಾವತ್ ನೇತೃತ್ವದ ನ್ಯಾಯಪೀಠ ರಾಜ್ಯ ಪೊಲೀಸರು ಹೊಂದಿರುವ ಗುಪ್ತ ಮಾಹಿತಿ ವ್ಯವಸ್ಥೆಯ ವೈಫಲ್ಯವಿದು. ಅಮೃತ್‌ಪಾಲ್ ಸಿಂಗ್ ಹೊರತು ಪಡಿಸಿ ಉಳಿದ 114 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳುತ್ತೀರಿ. ಹಾಗಿದ್ದರೆ 80 ಸಾವಿರ ಪೊಲೀಸರು ಏನು ಮಾಡುತ್ತಿದ್ದರು ಎಂದು ಪ್ರಶ್ನೆ ಮಾಡಿತು. ಜತೆಗೆ ಅಮೃತಸರ ಗ್ರಾಮೀಣ ಪೊಲೀಸ್ ವಿಭಾಗದ ಎಸ್‌ಪಿ ಸಲ್ಲಿಸಿದ “ಅಮೃತ್‌ಪಾಲ್‌ನನ್ನು ಬಂಧಿಸಲಾಗಿಲ್ಲ ಅಥವಾ ವಶದಲ್ಲಿ ಇರಿಸಿಕೊಳ್ಳಲಾಗಿಲ್ಲ’ ಎಂಬ ಪ್ರಮಾಣಪತ್ರವನ್ನೂ ಒಪ್ಪಿಕೊಂಡಿತು. ಅದರಲ್ಲಿ ಆತ ಧಾರ್ಮಿಕ ಪ್ರತ್ಯೇಕತಾವಾದವನ್ನು ಪ್ರಚಾರ ಮಾಡುತ್ತಿದ್ದ ಎಂದೂ ಆರೋಪಿಸಲಾಗಿದೆ.