Advertisement

ಇನ್ಮುಂದೆ “ಕೂ”ಮಯ : ಮೂಲೆಗೆ ಸರಿಯುತ್ತಾ ಟ್ವೀಟರ್ ?

10:41 AM Feb 11, 2021 | Team Udayavani |

ನವ ದೆಹಲಿ : ಚೀನಿ  ಅಪ್ಲಿಕೇಶನ್ ಗಳು, ಫೇಸ್ಬುಕ್ , ವಾಟ್ಸಾಪ್ ಹಾಗೂ ಡೇಟಾ ಕಳ್ಳತನ, ಗೌಪ್ಯತೆಗೆ ಸಂಬಂಧಿಸಿದ ಕೆಲವು ನೀತಿ ನಿಯಮಗಳಿಂದ ದೇಶದಲ್ಲಿ ಚಾಟಿಂಗ್ ಪ್ಲ್ಯಾಟ್ ಫಾರ್ಮ್ ಗಾಗಿ ಸೂಕ್ತ ಅಪ್ಲಿಕೇಶನ್ ಗಳ ಹುಡುಕಾಟದಲ್ಲಿ ಇಡೀ ಭಾರತ ನಿರತವಾಗಿದೆ. ಇಂತಹ ಸಂದರ್ಭದಲ್ಲಿ ಅದಕ್ಕೆ ಪರ್ಯಾಯವೆಂಬಂತೆ “ಕೂ ಆ್ಯಪ್” ಜನರ ಆಯ್ಕೆಯಲ್ಲಿ ಮೊದಲ ಸ್ಥಾನವನ್ನು ಪಡೆಯುತ್ತಿದೆ.

Advertisement

ಕೇಂದ್ರ ಸಚಿವರಾದ ರವಿ ಶಂಕರ್ ಪ್ರಸಾದ್, ಪಿಯೂಶ್ ಗೋಯಲ್ ಸೇರಿ ಹಲವರು “ಕೂ ಆ್ಯಪ್” (Koo App) ಬಳಸಲು ಪ್ರಾರಂಭಿಸಿದ್ದಾರೆ ಎನ್ನುವುದು ಅದರ ಜನಪ್ರಿಯತೆಗೆ ಸಾಕ್ಷಿಯಾಗುತ್ತಿದೆ.

ಓದಿ : ತೆರೆಮೇಲೆ ಬರಲಿದೆ ‘ಸೈನೈಡ್‌ ಮಲ್ಲಿಕಾ’ ಕ್ರೈಂ ಸ್ಟೋರಿ

ಟ್ವೀಟರ್ ಗೆ ಪರ್ಯಾಯವಾಗುತ್ತಾ “ಕೂ ಆ್ಯಪ್”..!?

“ಕೂ” ಎಂಬುದು ಮೈಕ್ರೋ ಬ್ಲಾಗಿಂಗ್ ಸಾಮಾಜಿಕ ಜಾಲತಾಣವಾಗಿದ್ದು, ಟ್ವೀಟರ್ ನಂತೆಯೇ ಎಲ್ಲಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಹಿಂದಿ, ಇಂಗ್ಲಿಷ್ ಸೇರಿದಂತೆ ಎಂಟು ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. 350 ಪದಗಳ ಮಿತಿಯನ್ನು ಹೊಂದಿರುವ “ಕೂ ಆ್ಯಪ್”, ಟ್ವೀಟರ್ ಗೆ ಹೋಲುವ ಹಾಗೆಯೇ ಇಂಟರ್ ಫೇಸ್ ಹೊಂದಿದೆ.ಅಷ್ಟಲ್ಲದೇ, “ಕೂ ಆ್ಯಪ್” ತನ್ನ ಸರಣಿ ಎ ಫಂಡಿಂಗ್ ನ ಭಾಗವಾಗಿ 30 ಕೋಟಿ ರೂ. ಸಂಗ್ರಹಿಸಿದೆ.

Advertisement

ಕಳೆದ ಕೆಲವು ದಿನಗಳಿಂದ ಟ್ವೀಟರ್ ಹಾಗೂ ಭಾರತ ಸರ್ಕಾರದ ನಡುವೆ ಸಂಘರ್ಷವಿತ್ತು, ಇತ್ತೀಚೆಗೆ ಟ್ವೀಟರ್ ಇಂಡಿಯಾದ ಸಾರ್ವಜನಿಕ ನೀತಿ ನಿರ್ದೇಶಕ ಮಹೀಂದ್ರಾ ಕೌಲ್ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದರು. ಕಳೆದ ವಾರ, ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸರ್ಕಾರ ಟ್ವೀಟರ್ ನಿಂದ ಉತ್ತರವನ್ನು ಕೋರಿತ್ತು.

ಟ್ವೀಟರ್ ಕೇಂದ್ರ ಸರ್ಕಾರ ಕೇಳಿಕೊಂಡ ಹಿನ್ನಲೆಯಲ್ಲಿ, ಕೃಷಿ ಕಾಯ್ದೆಯ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿರುವ ಸುಮಾರು 500 ಖಾತೆಗಳನ್ನು ಅಮಾನತುಗೊಳಿಸಿತ್ತು. ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು, ರಾಜಕಾರಣಿಗಳ ಖಾತೆಗಳನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ತನ್ನ ಬ್ಲಾಗ್ ನಲ್ಲಿ ಹೇಳಿಕೊಂಡಿದೆ.

ಇನ್ನು, “ ನಾನು ಈಗ “ಕೂ” ನಲ್ಲಿ ಇದ್ದೇನೆ. ಪ್ರಸ್ತುತ ವಿಷಯಗಳಿಗಾಗಿ “ಕೂ” ನಲ್ಲಿ ನನ್ನನ್ನು ಸಂಪರ್ಕಿಸಬಹುದು. ನಮ್ಮ ಯೋಚನೆ ಮತ್ತು ಯೋಜನೆಗಳನ್ನು ಇನ್ಮುಂದೆ ಕೂ ನಲ್ಲಿ ಹಂಚಿಕೊಳ್ಳೋಣ ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ ಟ್ವೀಟರ್ ನಲ್ಲಿಯೇ ಟ್ವೀಟರ್ ಗೆ ಟಕ್ಕರ್ ಕೊಡುವಂತೆ “ಕೂ” ಬಗ್ಗೆ ಬರೆದುಕೊಂಡಿದ್ದಾರೆ.

ಓದಿ : ಶಿರೂರು: ಅತೀ ವೇಗದಿಂದ ಬೈಕ್ ಚಲಾಯಿಸಿದ 15ರ ಬಾಲಕ; ಡಿವೈಡರ್ ಗೆ ಢಿಕ್ಕಿ, ಸ್ಥಳದಲ್ಲೇ ಸಾವು!

Advertisement

Udayavani is now on Telegram. Click here to join our channel and stay updated with the latest news.

Next