Advertisement

ಇಂದು ಫ‌ುಟ್ಬಾಲ್‌ಗೆ ಇಳಿಯುವ ಬೋಲ್ಟ್

07:30 AM Mar 23, 2018 | Team Udayavani |

ಬರ್ಲಿನ್‌: ವಿಶ್ವದಾಖಲೆಯ ಮಿಂಚಿನ ಓಟಗಾರ ಜಮೈಕಾದ ಉಸೇನ್‌ ಬೋಲ್ಟ್ 31ರ ಹರೆಯದಲ್ಲಿ ಫ‌ುಟ್ಬಾಲ್‌ ಆಟದತ್ತ ಒಲವು ತಾಳಿದ್ದಾರೆ. ಫ‌ುಟ್ಬಾಲ್‌ ವೃತ್ತಿ ಜೀವನ ಆರಂಭಿಸಲು ಯೋಚಿಸಿರುವ ಅವರು ತರಬೇತಿಗಾಗಿ ಮಾ. 23ರಂದು ಬೊರುಸ್ಸಿಯ ಡಾರ್ಟ್‌ ಮಂಡನ್‌ ಕ್ಲಬ್‌ನೊಂದಿಗೆ ಮೈದಾನಕ್ಕಿಳಿಯಲಿದ್ದಾರೆ. ಬರ್ಲಿನ್‌ನ ಬುಂಡೆಸ್ಲಿಗಾ ಕ್ಲಬ್‌ ಈ ವಿಚಾರ ತಿಳಿಸಿದೆ.

Advertisement

ಬುಂಡೆಸ್ಲಿಗಾ ಕ್ಲಬ್‌ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಬೋಲ್ಟ್ ತರಬೇತಿಗಾಗಿ ಆಗಮಿಸುವುದನ್ನು ತಿಳಿಸಿದೆ. “ಬೋಲ್ಟ್ ಬರಲಿದ್ದಾರೆ’ ಎಂಬ ಕ್ಲಬ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬೋಲ್ಟ್, “ಬೊರುಸ್ಸಿಯ ಡಾರ್ಟ್‌ಮಂಡನ್‌ ಶುಕ್ರವಾರ ತಯಾರಾಗಿರಲಿ’ ಎಂದು ಬರೆದಿದ್ದಾರೆ.

ತರಬೇತಿ ಆರಂಭ ಸಮಯವನ್ನು ಬೆಳಗ್ಗೆ 9.30 ಎಂದು ನಿಗದಿಪಡಿಸಲಾಗಿದ್ದು, ಪ್ರೇಕ್ಷಕರು ಮತ್ತು ಮಾಧ್ಯಮದವರು ದೊಡ್ಡ ಸಂಖ್ಯೆಯಲ್ಲಿ ಸೇರುವುದನ್ನು ನಿರೀಕ್ಷಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next