Advertisement

ವಿಟ್ಲ : ಆಳವಾದ ಹೊಂಡಕ್ಕೆ ಬಿದ್ದ ಯುವತಿಯನ್ನು ರಕ್ಷಿಸಿದ ಫ್ರೆಂಡ್ಸ್ ವಿಟ್ಲ ತಂಡ

04:29 PM Sep 14, 2022 | Team Udayavani |

ವಿಟ್ಲ : ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಮೂಡಾಯಿಬೆಟ್ಟು ನಿವಾಸಿ ಯುವತಿಯೋರ್ವರು ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ 40-50 ಅಡಿ ಆಳದ ಹೊಂಡಕ್ಕೆ ಬಿದ್ದು, ನರಳಾಡುತ್ತಿದ್ದರು.

Advertisement

ಕ್ಷೀಣವಾದ ಸ್ವರವನ್ನು ಕೇಳಿದ ಸ್ಥಳೀಯರು ಪರಾಂಬರಿಸಿ ನೋಡಿದಾಗ ಯುವತಿ ಹೊಂಡದಲ್ಲಿ ನರಳಾಡುತ್ತಿದ್ದುದು ಗಮನಕ್ಕೆ ಬಂದಿದೆ.

ವಿಟ್ಲ ಸುತ್ತಮುತ್ತ ಯಾವುದೇ ಆಕಸ್ಮಿಕ ಘಟನೆಗಳು ಸಂಭವಿಸಿದಾಗ ಆಪದ್ಭಾಂಧವರಾಗಿ ಬಿಡುವುದು ಮುರಳಿ ವಿಟ್ಲ ನೇತೃತ್ವದ ಫ್ರೆಂಡ್ಸ್ ವಿಟ್ಲ ತಂಡದವರು. ಮಾಹಿತಿ ಸಿಕ್ಕಿದ ಕ್ಷಣದಲ್ಲೇ ಸ್ಥಳಕ್ಕೆ ಧಾವಿಸಿದ ಮುರಳಿ ತಂಡ ಯುವತಿಯನ್ನು ಮೇಲಕ್ಕೆತ್ತಿ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ : ರಾಣಿ ಎಲಿಜಬೆತ್‌ಗೆ ಸ್ವರ್ಗ ಪ್ರಾಪ್ತಿಯಾಗಲೆಂದು ಮೆಕ್ಕಾಗೆ ʼಉಮ್ರಾ ಯಾತ್ರೆʼ ಕೈಗೊಂಡಾತನ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next