ಮಂಡ್ಯ: ಕುಡಿದ ಮತ್ತಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರಿಬ್ಬರ ನಡುವೆ ಜಗಳವಾಗಿ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕುಮಾರ (30 ವ) ಎನ್ನುವ ವ್ಯಕ್ತಿ ಕೊಲೆಯಾಗಿದ್ದು, ಅದೇ ಗ್ರಾಮದ ಮಹದೇವು ಎನ್ನುವ ಕುಮಾರನ ಸ್ನೇಹಿತ ಕೊಲೆಗೈದ ವ್ಯಕ್ತಿಯಾಗಿದ್ದಾನೆ.
ಇದನ್ನೂ ಓದಿ:ಸುರತ್ಕಲ್: ಬಸ್ ಚಾಲಕ,ನಿರ್ವಾಹಕನಿಂದ ರಿಕ್ಷಾ ಚಾಲಕನಿಗೆ ಯದ್ವಾ ತದ್ವಾ ಹಲ್ಲೆ
ಶನಿವಾರ ರಾತ್ರಿ ಮಹದೇವು ಮನೆಯಲ್ಲಿ ಇಬ್ಬರು ಮದ್ಯ ಸೇವಿಸಿದ್ದಾರೆ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಮಹದೇವು ಕುಮಾರನಿಗೆ ಬಾಟಲಿ ಮತ್ತು ಕಬ್ಬಿಣದ ರಾಡಿನಿಂದು ಹೊಡೆದು ಕೊಲೆ ಮಾಡಿದ್ದಾನೆ.
ಈ ಸಂಬಂಧ ಅರೆಕೆರೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.