Advertisement

‘Friends’ ಖ್ಯಾತಿಯ ನಟ ಮ್ಯಾಥ್ಯೂ ಪೆರ್ರಿ ಇನ್ನಿಲ್ಲ; ಹಾಟ್ ಟಬ್ ನಲ್ಲಿ ಶವವಾಗಿ ಪತ್ತೆ

09:22 AM Oct 29, 2023 | Team Udayavani |

ಲಾಸ್ ಏಂಜಲೀಸ್: ‘ಫ್ರೆಂಡ್ಸ್’ ಖ್ಯಾತಿಯ ನಟ 54 ವರ್ಷದ ಮ್ಯಾಥ್ಯೂ ಪೆರ್ರಿ ನಿಧನರಾಗಿದ್ದಾರೆ. ಲಾಸ್ ಏಂಜಲೀಸ್ ನ ತನ್ನ ಮನೆಯಲ್ಲಿ ಹಾಟ್ ಟಬ್ ನಲ್ಲಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ಯುಎಸ್ ಮಾಧ್ಯಮಗಳು ವರದಿ ಮಾಡಿದೆ.

Advertisement

ಮ್ಯಾಸಚೂಸೆಟ್ಸ್‌ ನಲ್ಲಿ ಕೆನಡಿಯನ್ ಮತ್ತು ಅಮೇರಿಕನ್ ಪೋಷಕರಿಗೆ ಜನಿಸಿದ ಮ್ಯಾಥ್ಯೂ ಪೆರ್ರಿ ಲಾಸ್ ಏಂಜಲೀಸ್‌ ಗೆ ತೆರಳುವ ಮೊದಲು ಕೆನಡಾದಲ್ಲಿ ಬೆಳೆದರು.

ಹತ್ತು ಸೀಸನ್ ಗಳಲ್ಲಿ ಪ್ರಸಾರವಾದ ಟಿವಿ ಶೋ ‘ಫ್ರೆಂಡ್ಸ್’ ನಿಂದ ಪೆರ್ರಿ ಅವರು ಪ್ರಸಿದ್ಧರಾಗಿದ್ದರು. ಈ ಶೋ 1994ರಿಂದ 2004ರವರೆಗೆ ನಡೆದಿತ್ತು.

ಪೆರ್ರಿ ಅವರು ಪೈನ್ ಕಿಲ್ಲರ್ ಗಳು ಮತ್ತು ಮದ್ಯದ ಚಟದೊಂದಿಗೆ ವರ್ಷಗಳ ಕಾಲ ಹೋರಾಡಿದರು. ಅಲ್ಲದೆ ಅನೇಕ ಸಂದರ್ಭಗಳಲ್ಲಿ ಪುನರ್ವಸತಿ ಕೇಂದ್ರಗಳಿಗೆ ಹಾಜರಾಗಿದ್ದರು.

ಪೆರ್ರಿ ಅವರು 2018 ರಲ್ಲಿ ಅತಿಯಾದ ಡ್ರಗ್ ಬಳಕೆಯಿಂದಾಗಿ ಬರ್ಸ್ಟ್ ಕೊಲೊನ್ ಸೇರಿದಂತೆ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದ್ದರು. ಇದಕ್ಕಾಗಿ ಅವರು ಏಳು ಗಂಟೆಗಳ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next