Advertisement

3,451 ಯಾತ್ರಿಕರ ಹೊಸ ತಂಡದ ಅಮರನಾಥ ಯಾತ್ರೆ ಆರಂಭ

11:50 AM Jul 13, 2018 | Team Udayavani |

ಜಮ್ಮು : ಅತ್ಯಂತ ಬಿಗಿ ಭದ್ರತೆಯ ನಡುವೆ ಇಂದು 3,451 ಯಾತ್ರಿಕರನ್ನು ಒಳಗೊಂಡ ತಂಡವು ವಾರ್ಷಿಕ ಅಮರಾನಾಥ ಯಾತ್ರೆಗಾಗಿ ಇಲ್ಲಿಂದ ಕಾಶ್ಮೀರಕ್ಕೆ ಹೊರಟಿತೆಂದು ಪೊಲೀಸರು ತಿಳಿಸಿದ್ದಾರೆ.

Advertisement

ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿ 3,880 ಮೀಟರ್‌ ಎತ್ತರದಲ್ಲಿರುವ ಅಮರನಾಥ ಗುಹಾ ದೇವಾಲಯದ ವಾರ್ಷಿಕ ಯಾತ್ರೆಯ 60 ದಿನಗಳದ್ದಾಗಿದ್ದು ಕಳೆದ ಜೂನ್‌ 28ರಂದು ಆರಂಭಗೊಂಡಿತ್ತು. ಈ ವರೆಗೆ ಈ ಋತುವಿನಲ್ಲಿ 1.51 ಲಕ್ಷ ಯಾತ್ರಿಕರು ಅಮರನಾಥ ಯಾತ್ರೆಯನ್ನು ಕೈಗೊಂಡಿದ್ದಾರೆ. 

ಅಮರನಾಥ ಯಾತ್ರಿಕರು ಇಂದು ಅನಂತನಾಗ್‌ನ ಪೆಹಲ್‌ಗಾಂವ್‌ ಮತ್ತು ಗಂದೇರ್‌ಬಾಲ್‌ ಜಿಲ್ಲೆಯ ಬಲ್‌ತಾಲ್‌ ಮೂಲ  ಅವಳಿ ಶಿಬಿರದೆಡೆಗೆ ಎರಡು ಪ್ರತ್ಯೇಕ ಸರತಿಯ ವಾಹನಗಳಲ್ಲಿ ಇಲ್ಲಿನ ಭಗವತೀ ನಗರದ ಮೂಲ ಶಿಬಿರದಿಂದ ಇಂದು ನಸುಕಿನ ವೇಳೆ ಯಾತ್ರೆಯನ್ನು ಆರಂಭಿಸಿದರು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next