ಚಾರ್ಲ್ಸ್ ಗುರುಮುಖ್ ಶೋಭರಾಜ್ ಹಾಟ್‌ಚಂದ್ ಭವಾನಿ… ಇದು ಯಾರ ಹೆಸರು ಎಂದು ಮೂಗಿನ ಮೇಲೆ ಬೆರಳು ಇರಿಸಿಕೊಂಡಿರಾ? ಹೌದು ಆತನೇ ಚಾರ್ಲ್ಸ್ ಶೋಭರಾಜ್. “ಬಿಕಿನಿ ಕಿಲ್ಲರ್’ ಎಂಬ ಕುಖ್ಯಾತಿಯ ಹೆಸರಿನಿಂದ ಕರೆಯಿಸಿಕೊಳ್ಳುವ ಈತನಿಗೆ ಭಾರತದ ಸಂಪರ್ಕವೂ ಇದೆ.
ಶೋಭರಾಜ್ ಹಾಟ್‌ಚಂದ್ ಭವಾನಿ ಮತ್ತು ವಿಯೆಟ್ನಾಂ ಮಹಿಳೆ ತರಣ್ ಲೊವಾಂಗ್ ಫುನ್ ಆತನ ಹೆತ್ತವರು. 1944ರಲ್ಲಿ ಆತನ ಜನನವಾಯಿತು. ಅಂದ ಹಾಗೆ ಆತನ ಹೆತ್ತವರು ಕಾನೂನು ಬದ್ಧವಾಗಿ ದಾಂಪತ್ಯ ಜೀವನ ನಡೆಸಿಯೇ ಇರಲಿಲ್ಲ. ಆತನಿಗೆ ಮೂರು ವರ್ಷವಾಗಿದ್ದಾಗ ಫ್ರಾನ್ಸ್ ಸೇನೆಯ ಹಿರಿಯ ಅಧಿಕಾರಿಯನ್ನು ವಿವಾಹವಾಗಿದ್ದಳು.
ಆತನಿಗೆ ತಂದೆಯ ಪ್ರೀತಿ ಸಿಗಲಿಲ್ಲ ಮತ್ತು ಸೇನಾಧಿಕಾರಿಯ ಜತೆಗೆ ಆತನ ತಾಯಿ ಇದ್ದರೂ ಬಾಲ್ಯದ ಜೀವನ ಕಠಿಣವಾಗಿತ್ತು. ಹೀಗಾಗಿ, ಆತನಿಗೆ ಆರಂಭದಿಂದಲೂ ಕಳವು ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗವಹಿಸಿದ್ದ. ಆತ ಪ್ರಾಪ್ತ ವಯಸ್ಕನಾಗುವ ವರೆಗೆ ಬಾಲಪರಾಧಿಗಳನ್ನು ಇರಿಸುವ ಕೇಂದ್ರದಲ್ಲಿಯೇ ಕಳೆದಿದ್ದ.
ಆತನ ಬಗ್ಗೆ ಪುಸ್ತಕ ಬರೆದ ರಿಚರ್ಡ್ ನೆವಿಲ್ಲೆ ಮತ್ತು ಜ್ಯೂಲಿ ಕ್ಲೆರ್ಕ್ ಅವರ ಪ್ರಕಾರ “ಎರಡು ಖಂಡಗಳ ನಡುವಿನ ಜೀವನದಂತೆ ಶೋಭರಾಜ್‌ನ ಬಾಲ್ಯದ ದಿನಗಳು ಇದ್ದವು’ ಎಂದು ಉಲ್ಲೇಖೀಸಿದ್ದರು. 20ನೇ ವಯಸ್ಸಿಗೇ ಆತನಿಗೆ ಭೂಗತ ಜಗತ್ತಿನ ಪರಿಚಯವೂ ಆಗಿತ್ತು. 1963ರಲ್ಲಿ ಪ್ಯಾರಿಸ್‌ನಲ್ಲಿ ಆತನಿಗೆ ಕಳವು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮೊದಲ ಜೈಲು ಶಿಕ್ಷೆಯೂ ಆಗಿತ್ತು. ಬಿಡುಗಡೆಯ ಒಂದು ಸಂದರ್ಭದಲ್ಲಿ ಚಂತಾಲ್ ಕಂಪಗ್ನಾನ್ ಎಂಬಾಕೆಯ ಜತೆಗೆ ಪ್ರೇಮಾಂಕುರವೂ ಆಯಿತು. ಆಕೆಯ ಜತೆಗಿನ ದಾಂಪತ್ಯದಿಂದ ಉಷಾ ಎಂಬ ಪುತ್ರಿಯೂ ಇದ್ದಾಳೆ.
Related Articles
24 ಮರ್ಡರ್:
ತನ್ನ ಜೀವನದ ಅವಧಿಯಲ್ಲಿ ಒಟ್ಟು 24 ಕೊಲೆಗಳನ್ನು ಮಾಡಿದ್ದಾನೆ ಚಾರ್ಲ್ಸ್. ಇರಿತ, ಗುಂಡು ಹಾರಿಸಿ ಹೀಗೆ ಹಲವು ವಿಧಗಳಲ್ಲಿ ಆತ ಕೊಲೆ ಮಾಡಿದ್ದ. 1976ರಿಂದ 1997ರ ವರೆಗೆ ಆತನಿಗೆ ಭಾರತದಲ್ಲಿ ಶಿಕ್ಷೆಯೂ ಆಗಿತ್ತು. 1975ರಲ್ಲಿ ನೇಪಾಳದಲ್ಲಿ ಇಬ್ಬರು ಅಮೆರಿಕದವರನ್ನು ಕೊಲೆ ಮಾಡಿದ್ದಕ್ಕಾಗಿ 2003ರಲ್ಲಿ ಬಂಧನಕ್ಕೆ ಒಳಗಾಗಿ, ಡಿ.23ರಂದು ಬಿಡುಗಡೆಯಾಗಿದ್ದ. ಭಾರತದ ನೆರೆಯ ರಾಷ್ಟ್ರದಲ್ಲಿ 19 ವರ್ಷಗಳ ಶಿಕ್ಷೆ ಅನುಭವಿಸಿದ್ದಾನೆ.
ಈಗ 78:
ಸದ್ಯ ನೇಪಾಳ ರಾಜಧಾನಿ ಕಠ್ಮಂಡುವಿನ ಜೈಲಿನಿಂದ ಬಿಡುಗಡೆಯಾಗಿರುವ ಶೋಭರಾಜ್‌ಗೆ 78 ವರ್ಷ. “ನಾನು ಫ್ರಾನ್ಸ್‌ಗೆ ಹೋಗಲು ಇಚ್ಛಿಸುತ್ತೇನೆ. ಮುಂದಿನ ಹಲವು ವರ್ಷಗಳ ಕಾಲ ಕುಟುಂಬದ ಜತೆಗೆ ಜೀವಿಸುತ್ತೇನೆ ಎಂಬ ನಂಬಿಕೆ ನನಗೆ ಇದೆ’ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾನೆ.
ಮೂರು ಪುಸ್ತಕಗಳು:
ಶೋಭರಾಜ್‌ನ ಸರಣಿ ಕೊಲೆಗಳನ್ನು ಆಧರಿಸಿ ಪುಸ್ತಕಗಳನ್ನೂ ಬರೆಯಲಾಗಿದೆ. ಈ ಪೈಕಿ ಪ್ರಮುಖವಾದದ್ದು ಎಂದರೆ 1979ರಲ್ಲಿ ಪತ್ರಕರ್ತ-ಲೇಖಕ ಬರೆದ “ಸಪೆìಂಟೈನ್’, 1980ರಲ್ಲಿ ರಿಚರ್ಡ್ ನೆವಿಲ್ಲೆ ಮತ್ತು ಜ್ಯೂಲಿ ಕ್ಲೆರ್ಕ್ ಬರೆದ “ದ ಲೈಫ್ ಆ್ಯಂಡ್ ಕ್ರೈಮ್ಸ್ ಆಫ್ ಚಾರ್ಲ್ಸ್ ಶೋಭರಾಜ್’, ನೊಯೆಲ್ ಬಾರ್ಬರ್ ಬರೆದ “ದ ಬಿಕಿನಿ ಮರ್ಡರ್’ ಹೆಚ್ಚಿನ ಸಂಖ್ಯೆಯಲ್ಲಿ ಜಗತ್ತಿನ ಓದುಗರನ್ನು ಸೆಳೆದಿತ್ತು.