Advertisement
ಶೋಭರಾಜ್ ಹಾಟ್‌ಚಂದ್ ಭವಾನಿ ಮತ್ತು ವಿಯೆಟ್ನಾಂ ಮಹಿಳೆ ತರಣ್ ಲೊವಾಂಗ್ ಫುನ್ ಆತನ ಹೆತ್ತವರು. 1944ರಲ್ಲಿ ಆತನ ಜನನವಾಯಿತು. ಅಂದ ಹಾಗೆ ಆತನ ಹೆತ್ತವರು ಕಾನೂನು ಬದ್ಧವಾಗಿ ದಾಂಪತ್ಯ ಜೀವನ ನಡೆಸಿಯೇ ಇರಲಿಲ್ಲ. ಆತನಿಗೆ ಮೂರು ವರ್ಷವಾಗಿದ್ದಾಗ ಫ್ರಾನ್ಸ್ ಸೇನೆಯ ಹಿರಿಯ ಅಧಿಕಾರಿಯನ್ನು ವಿವಾಹವಾಗಿದ್ದಳು.
Related Articles
ತನ್ನ ಜೀವನದ ಅವಧಿಯಲ್ಲಿ ಒಟ್ಟು 24 ಕೊಲೆಗಳನ್ನು ಮಾಡಿದ್ದಾನೆ ಚಾರ್ಲ್ಸ್. ಇರಿತ, ಗುಂಡು ಹಾರಿಸಿ ಹೀಗೆ ಹಲವು ವಿಧಗಳಲ್ಲಿ ಆತ ಕೊಲೆ ಮಾಡಿದ್ದ. 1976ರಿಂದ 1997ರ ವರೆಗೆ ಆತನಿಗೆ ಭಾರತದಲ್ಲಿ ಶಿಕ್ಷೆಯೂ ಆಗಿತ್ತು. 1975ರಲ್ಲಿ ನೇಪಾಳದಲ್ಲಿ ಇಬ್ಬರು ಅಮೆರಿಕದವರನ್ನು ಕೊಲೆ ಮಾಡಿದ್ದಕ್ಕಾಗಿ 2003ರಲ್ಲಿ ಬಂಧನಕ್ಕೆ ಒಳಗಾಗಿ, ಡಿ.23ರಂದು ಬಿಡುಗಡೆಯಾಗಿದ್ದ. ಭಾರತದ ನೆರೆಯ ರಾಷ್ಟ್ರದಲ್ಲಿ 19 ವರ್ಷಗಳ ಶಿಕ್ಷೆ ಅನುಭವಿಸಿದ್ದಾನೆ.
Advertisement
ಈಗ 78:ಸದ್ಯ ನೇಪಾಳ ರಾಜಧಾನಿ ಕಠ್ಮಂಡುವಿನ ಜೈಲಿನಿಂದ ಬಿಡುಗಡೆಯಾಗಿರುವ ಶೋಭರಾಜ್‌ಗೆ 78 ವರ್ಷ. “ನಾನು ಫ್ರಾನ್ಸ್‌ಗೆ ಹೋಗಲು ಇಚ್ಛಿಸುತ್ತೇನೆ. ಮುಂದಿನ ಹಲವು ವರ್ಷಗಳ ಕಾಲ ಕುಟುಂಬದ ಜತೆಗೆ ಜೀವಿಸುತ್ತೇನೆ ಎಂಬ ನಂಬಿಕೆ ನನಗೆ ಇದೆ’ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾನೆ. ಮೂರು ಪುಸ್ತಕಗಳು:
ಶೋಭರಾಜ್‌ನ ಸರಣಿ ಕೊಲೆಗಳನ್ನು ಆಧರಿಸಿ ಪುಸ್ತಕಗಳನ್ನೂ ಬರೆಯಲಾಗಿದೆ. ಈ ಪೈಕಿ ಪ್ರಮುಖವಾದದ್ದು ಎಂದರೆ 1979ರಲ್ಲಿ ಪತ್ರಕರ್ತ-ಲೇಖಕ ಬರೆದ “ಸಪೆìಂಟೈನ್’, 1980ರಲ್ಲಿ ರಿಚರ್ಡ್ ನೆವಿಲ್ಲೆ ಮತ್ತು ಜ್ಯೂಲಿ ಕ್ಲೆರ್ಕ್ ಬರೆದ “ದ ಲೈಫ್ ಆ್ಯಂಡ್ ಕ್ರೈಮ್ಸ್ ಆಫ್ ಚಾರ್ಲ್ಸ್ ಶೋಭರಾಜ್’, ನೊಯೆಲ್ ಬಾರ್ಬರ್ ಬರೆದ “ದ ಬಿಕಿನಿ ಮರ್ಡರ್’ ಹೆಚ್ಚಿನ ಸಂಖ್ಯೆಯಲ್ಲಿ ಜಗತ್ತಿನ ಓದುಗರನ್ನು ಸೆಳೆದಿತ್ತು.