Advertisement
2019ರಲ್ಲಿ ಪ್ರಶಸ್ತಿ ಎತ್ತಿದ ಬಳಿಕ ಆ್ಯಶ್ಲಿ ಬಾರ್ಟಿ ಫ್ರೆಂಚ್ ಓಪನ್‌ನಲ್ಲಿ ಕಣಕ್ಕಿಳಿದದ್ದು ಇದೇ ಮೊದಲು.ಎಲಿನಾ ಸ್ವಿಟೋಲಿನಾ, ಮರಿಯಾ ಸಕ್ಕರಿ ಕೂಡ ಮೊದಲ ಸುತ್ತಿನಲ್ಲಿ ಗೆಲುವು ಕಂಡಿದ್ದಾರೆ. ಸೋಮವಾರ ರಾತ್ರಿಯ ಮುಖಾಮುಖೀಯಲ್ಲಿ ಸೆರೆನಾ ವಿಲಿಯಮ್ಸ್ ಕೂಡ ಜಯದ ಆರಂಭ ಪಡೆದರು.
ರಶ್ಯದ ಆಟಗಾರ, 7ನೇ ಶ್ರೇಯಾಂಕದ ಆ್ಯಂಡ್ರೆ ರುಬ್ಲೇವ್ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದು ಮಂಗಳವಾರದ ಅಚ್ಚರಿಯ ಫಲಿತಾಂಶ ಎನಿಸಿತು. ಜರ್ಮನಿಯ ಜಾನ್ ಲೆನಾರ್ಡ್ ಸ್ಟ್ರಫ್ 6-3, 7-6 (8-6), 4-6, 3-6, 6-4ರಿಂದ ರುಬ್ಲೇವ್‌ಗೆ ಸೋಲುಣಿಸಿ ದೊಡ್ಡ ಬೇಟೆಯಾಡಿದರು. ಇದನ್ನೂ ಓದಿ :ಶಫಾಲಿ ಆಯ್ಕೆಯಿಂದ ತಂಡಕ್ಕೆ ಲಾಭ: ನಾಯಕಿ ಮಿಥಾಲಿ ರಾಜ್
Related Articles
ಪುರುಷರ ಡಬಲ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಗೆಲುವಿನ ಆರಂಭ ಪಡೆದಿದ್ದಾರೆ. ಕ್ರೊವೇಶಿಯಾದ ಜತೆಗಾರ ಫ್ರಾಂಕೊ ಸ್ಕಾಗರ್ ಅವರೊಡಗೂಡಿ ಆಡಲಿಳಿದಿರುವ ಬೋಪಣ್ಣ, ಮಂಗಳವಾರದ ಮೊದಲ ಸುತ್ತಿನ ಮುಖಾಮುಖೀಯಲ್ಲಿ ನಿಕೋಲಸ್ ಬಸಿಲಶ್ವಿಲಿ (ಜಾರ್ಜಿಯಾ)-ಆ್ಯಂಡ್ರೆ ಬಿಗೆಮನ್ (ಜರ್ಮನಿ) ವಿರುದ್ಧ 6-4, 6-2 ನೇರ ಸೆಟ್‌ಗಳ ಜಯ ಸಾಧಿಸಿದರು. ಭಾರತದ ಮತ್ತೋರ್ವ ಡಬಲ್ಸ್ ಆಟಗಾರ ದಿವಿಜ್ ಶರಣ್ ಬುಧವಾರ ಕಣಕ್ಕಿಳಿಯಲಿದ್ದಾರೆ. ಆರ್ಜೆಂಟೀನಾದ ಫೆಡ್ರಿಕೊ ಡೆಲ್ಬೊನಿಸ್ ಇವರ ಜತೆಗಾರ. ಇವರ ಮೊದಲ ಸುತ್ತಿನ ಎದುರಾಳಿ ಮ್ಯಾಟ್ ರೇಡಿ ಮತ್ತು ಅಲೆಕ್ಸ್ ಮಿನೌರ್.
Advertisement