ಪ್ಯಾರಿಸ್: ವಿಶ್ವದ ಎರಡನೇ ರ್‍ಯಾಂಕಿನ ಬೆಲರೂಸ್‌ನ ಅರಿನಾ ಸೆಬಲೆಂಕಾ ಅವರನ್ನು ಮೂರು ಸೆಟ್‌ಗಳ ಕಠಿನ ಹೋರಾಟದಲ್ಲಿ ಸೋಲಿಸಿದ ಜೆಕ್ ಗಣರಾಜ್ಯದ ಕ್ಯಾರೋಲಿನಾ ಮುಸ್ಕೋವಾ ಅವರು ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಕೂಟದ ವನಿತೆಯರ ವಿಭಾಗದಲ್ಲಿ ಫೈನಲ್ ಹಂತಕ್ಕೇರಿದರು. 7-6 (7-5), 6-7 (5-7), 7-5 ಸೆಟ್‌ಗಳಿಂದ ಜಯ ಸಾಧಿಸಿದ ಮುಕ್ಸೋವಾ ಶನಿವಾರ ನಡೆಯುವ ಫೈನಲ್ ಹೋರಾಟದಲ್ಲಿ ಇನ್ನೊಂದು ಸೆಮಿಫೈನಲ್ ಹೋರಾಟದ ವಿಜೇತರನ್ನು ಎದುರಿಸಲಿದ್ದಾರೆ. ಇನ್ನೊಂದು ಸೆಮಿಫೈನಲ್ ಸ್ವಿಯಾಟೆಕ್ ಮತ್ತು ಹದ್ದಾದ್ ಮಯಾ ನಡುವೆ ನಡೆಯಲಿದೆ.
ಮೊದಲ ಸೆಟ್‌ನಲ್ಲಿ ಟೈಬ್ರೇಕರ್‌ನಲ್ಲಿ ಜಯ ಸಾಧಿಸಿದ್ದ ಮುಕ್ಸೋವಾ ದ್ವಿತೀಯ ಸೆಟ್‌ನಲ್ಲಿ ಟೈಬ್ರೇಕರ್‌ನಲ್ಲಿ ಸೋತಿದ್ದರು. ನಿರ್ಣಾಯಕ ಸೆಟ್‌ನಲ್ಲಿ ಸಬಲೆಂಕಾ 5-3 ಮುನ್ನಡೆಯಲ್ಲಿದ್ದರು. ಅಲ್ಲಿಂದ ಪಂದ್ಯ ನಾಟಕೀಯ ತಿರುವು ಪಡೆಯಿತು. ಭರ್ಜರಿ ಆಟದ ಪ್ರದರ್ಶನ ನೀಡಿದ ಮುಕ್ಸೋವಾ ಸತತ ನಾಲ್ಕು ಗೇಮ್ ಗೆದ್ದು ಪಂದ್ಯವನ್ನು ಜಯಿಸಿ ಸಂಭ್ರಮಿಸಿದರು. ಮುಕ್ಸೋವಾ ಅವರ ಆಟವನ್ನು ನೋಡಿ ಸಬಲೆಂಕಾ ಆಘಾತ ಅನುಭವಿಸಬೇಕಾಯಿತು.
ರೂಡ್ ಸೆಮಿಫೈನಲಿಗೆ
ನಾಲ್ಕನೇ ಶ್ರೇಯಾಂಕದ ಕ್ಯಾಸ್ಪರ್ ರೂಡ್ ಕಠಿನ ಹೋರಾಟದಲ್ಲಿ 20ರ ಹರೆಯದ ಹೋಲ್ಗರ್ ರೂನೆ ಅವರನ್ನು ಸೋಲಿಸಿ ಸತತ ಎರಡನೇ ವರ್ಷ ಸೆಮಿಫೈನಲ್ ತಲುಪಿದ ಸಾಧನೆ ಮಾಡಿದ್ದಾರೆ.
ರೂನೆ ಅವರನ್ನು 6-1, 6-2, 3-6, 6-3 ಸೆಟ್‌ಗಳಿಂದ ಸೋಲಿಸಿದ ರೂಡ್ ಸೆಮಿಫೈನಲ್‌ನಲ್ಲಿ ಅಲೆಕ್ಸಾಂಡರ್ ಜ್ವೆರೇವ್ ಅವರ ಸವಾಲನ್ನು ಎದುರಿಸಲಿದ್ದಾರೆ. ಜ್ವೆರೇವ್ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಆರ್ಜೆಂಟೀನಾದ ಥಾಮಸ್ ಮಾರ್ಟಿನ್ ಎಶೆವರಿ ಅವರನ್ನು 6-4, 3-6, 6-3, 6-4 ಸೆಟ್‌ಗಳಿಂದ ಸೋಲಿಸಿದ್ದರು.
ರೂಡ್ ಮತ್ತು ರೂನೆ ಅವರು 2022ರಲ್ಲಿ ಒಮ್ಮೆ ಎದುರಾಗಿದ್ದರು. ಈ ವೇಳೆ ನಾರ್ವೆಯ ರೂಡ್ ಅವರು ನಾಲ್ಕು ಸೆಟ್‌ಗಳ ಸೆಣಸಾಟದಲ್ಲಿ ರೂನೆ ಅವರನ್ನು ಸೋಲಿಸಿದ್ದರು. ಆದರೆ ರೂಡ್ ಅಂತಿಮವಾಗಿ ಫೈನಲ್‌ನಲ್ಲಿ ರಫೆಲ್ ನಡಾಲ್ ಅವರಿಗೆ ಶರಣಾಗಿದ್ದರು.
Related Articles
ಗೆಲುವು ಸಾಧಿಸಿದ್ದರಿಂದ ನನಗೆ ಸಮಾಧಾನವಾಯಿತು. ಯಾವುದೇ ಒತ್ತಡವಿಲ್ಲದೇ ಆಡಬೇಕೆಂದು ನಾನು ಬಯ ಸಿದ್ದೆ. ಆದೆ ಹೋಲ್ಗರ್ ರೂನೆ ಆಕ್ರಮಣಕಾರಿಯಾಗಿ ಆಡಿದ್ದರಿಂದ ನಾನು ಬಹಳಷ್ಟು ಶ್ರಮ ವಹಿಸಬೇಕಾ ಯಿತು ಎಂದು ರೂಡ್ ಹೇಳಿದರು.
ಮಿಕ್ಸೆಡ್ ಡಬಲ್ಸ್
ಜಪಾನಿನ ಮಿಯು ಕಾಟೊ ಮತ್ತು ಜರ್ಮನಿಯ ಟಿಮ್ ಪ್ಯುಟ್ಜ್ ಅವರು ಮಿಕ್ಸೆಡ್ ಡಬಲ್ಸ್$° ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅವರು ಫೈನಲ್‌ನಲಿಜ ಕೆನಡದ ಬಿಯಾನ್ಕಾ ಆ್ಯಡ್ರೆಸ್ಕಾ ಮತ್ತು ನ್ಯೂಜಿಲ್ಯಾಂಡಿನ ಮೈಕಲ್ ವೆನುಸ್ ಅವರನ್ನು 4-6, 6-4, 1-0 (10-6) ಸೆಟ್‌ಗಳಿಂದ ಸೋಲಿಸಿದರು.