Advertisement

ಜೊಕೋ ಆಟ ಮುಗಿಸಿದ ಸೆಶಿನಾಟೊ

06:55 AM Jun 07, 2018 | Team Udayavani |

ಪ್ಯಾರಿಸ್‌: ಮಾಜಿ ಚಾಂಪಿಯನ್‌, ಮಾಜಿ ನಂ.1 ಆಟಗಾರ, 12 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಸರದಾರ ಸರ್ಬಿಯಾದ ನೊವಾಕ್‌ ಜೊಕೋವಿಕ್‌ ಅವರ ಫ್ರೆಂಚ್‌ ಓಪನ್‌ ಅಭಿಯಾನ ಕ್ವಾರ್ಟರ್‌ ಫೈನಲ್‌ ಹಂತದಲ್ಲೇ ಮುಗಿದಿದೆ. 

Advertisement

ಮಂಗಳವಾರ ರಾತ್ರಿಯ ಮುಖಾಮುಖೀಯಲ್ಲಿ ವಿಶ್ವದ 72ನೇ ರ್‍ಯಾಂಕಿಂಗ್‌ನ ಇಟೆಲಿ ಆಟಗಾರ ಮಾರ್ಕೊ ಸೆಶಿನಾಟೊ 6-3, 7-6 (7-4), 1-6, 7-6 (13-11) ಅಂತರದಿಂದ ಜೊಕೋವಿಕ್‌ಗೆ ಆಘಾತವಿಕ್ಕಿದರು. 

ಸ್ವಾರಸ್ಯವೆಂದರೆ, ಈ ಸಲದ ಫ್ರೆಂಚ್‌ ಓಪನ್‌ ಪಂದ್ಯಾವಳಿಗೂ ಮುನ್ನ ಸೆಶಿನಾಟೊ ಯಾವುದೇ ಗ್ರ್ಯಾನ್‌ಸ್ಲಾಮ್‌ ಕೂಟಗಳಲ್ಲಿ ಒಂದೂ ಪಂದ್ಯ ಜಯಿಸಿದವರಲ್ಲ!

ಈವರೆಗೆ ಜೊಕೋವಿಕ್‌ ತನಗಿಂತ ಸಾಕಷ್ಟು ಕೆಳ ಕ್ರಮಾಂಕದ ಆಟಗಾರನ ವಿರುದ್ಧ ಅನುಭವಿಸಿದ 3ನೇ ದೊಡ್ಡ ಸೋಲು ಇದಾಗಿದೆ. ಇದಕ್ಕಿಂತ ಮೊದಲು 2008ರ ವಿಂಬಲ್ಟನ್‌ನಲ್ಲಿ 78ನೇ ರ್‍ಯಾಂಕಿಂಗ್‌ ಆಟಗಾರ ರಶ್ಯದ ಮರಾತ್‌ ಸಫಿನ್‌ ವಿರುದ್ಧ ಹಾಗೂ ಕಳೆದ ವರ್ಷದ ಆಸ್ಟ್ರೇಲಿಯನ್‌ ಓಪನ್‌ನಲ್ಲಿ 117ನೇ ರ್‍ಯಾಂಕಿಂಗ್‌ನ ಡೆನ್ನಿಸ್‌ ಇಸ್ತೋಮಿನ್‌ ವಿರುದ್ಧ ಜೊಕೋ ಆಘಾತ ಅನುಭವಿಸಿದ್ದರು.

ಈ ಸೋಲಿನಿಂದ ಕಂಗೆಟ್ಟಿರುವ ನೊವಾಕ್‌ ಜೊಕೋವಿಕ್‌ ಮುಂಬರುವ ವಿಂಬಲ್ಡನ್‌ ಪಂದ್ಯಾವಳಿಯಲ್ಲಿ ಆಡುವುದಿಲ್ಲ ಎಂಬ ಸೂಚನೆಯೊಂದನ್ನು ರವಾನಿಸಿದ್ದಾರೆ.

Advertisement

ಸೆಶಿನಾಟೊ ಸಾಧನೆ
25ರ ಹರೆಯದ ಸೆಶಿನಾಟೊ ಪಾಲಿಗೆ ಇದು ಮೊದಲ ಗ್ರ್ಯಾನ್‌ಸ್ಲಾಮ್‌ ಸೆಮಿಫೈನಲ್‌. ಅಷ್ಟೇ ಅಲ್ಲ, ಕಳೆದ 40 ವರ್ಷಗಳಲ್ಲಿ ಇಟೆಲಿ ಟೆನಿಸಿಗನೊಬ್ಬ ಗ್ರ್ಯಾನ್‌ಸ್ಲಾಮ್‌ ಸೆಮಿಫೈನಲ್‌ ಪ್ರವೇಶಿಸಿದ ಪ್ರಥಮ ನಿದರ್ಶನವೂ ಇದಾಗಿದೆ.. 1978ರ ಫ್ರೆಂಚ್‌ ಓಪನ್‌ ಪಂದ್ಯಾವಳಿಯಲ್ಲೇ ಇಟೆಲಿಯ ಕೊರಾಡೊ ಬರಝುಟ್ಟಿ ಸೆಮಿಫೈನಲ್‌ ಪ್ರವೇಶಿಸಿದ ಸಾಧನೆಗೈದಿದ್ದರು.

ಶ್ರೇಯಾಂಕ ರಹಿತ ಆಟಗಾರನಾಗಿರುವ ಸೆಶಿನಾಟೊ ಆನಂದಬಾಷ್ಪದೊಂದಿಗೆ ತನ್ನ ಗೆಲುವಿನ ಸಂಭ್ರಮ ಆಚರಿಸಿದ್ದು, ಸೆಮಿಫೈನಲ್‌ನಲ್ಲಿ ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಅವರನ್ನು ಎದುರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next