ಪಾಟ್ನಾ: ವಿವಿಧ ರೀತಿಯ ತತ್ವಾದರ್ಶಗಳನ್ನು ಹೊಂದಿದವರು ದೇಶದ ಕಾರಣಕ್ಕಾಗಿ ಒಂದಾಗಿ ನಿಲ್ಲುತ್ತಾರೆ. ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ನಡೆಸಿದವರು ಈ ಅಂಶವನ್ನು ತೋರಿಸಿಕೊಟ್ಟಿದ್ದಾರೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
Advertisement
ಬಿಹಾರದ ಸರನ್ ಜಿಲ್ಲೆಯ ಗ್ರಾಮವೊಂದರಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾಗವತ್ ಅವರು ಹಿರಿಯ ಪತ್ರಕರ್ತ ರವೀಂದ್ರ ಕುಮಾರ್ ಬರೆದ ಪುಸ್ತಕವನ್ನೂ ಬಿಡುಗಡೆ ಮಾಡಿದ್ದಾರೆ. ಆರ್‌ಎಸ್‌ಎಸ್ ಮುಖ್ಯಸ್ಥರು ನಾಲ್ಕು ದಿನಗಳ ಬಿಹಾರ ಪ್ರವಾಸದಲ್ಲಿ ಇದ್ದಾರೆ.