Advertisement
ಡಾ. ರಾವಳ ತಮ್ಮ ಎಂಟನೇಯ ವಯಸ್ಸಿನಲ್ಲಿ ಯೋಗಾಸನದಲ್ಲಿ ನಿರತರಾಗಿದ್ದಾರೆ. ತಂದೆ ಕಾಡಪ್ಪ ರಾವಳ ಅವರಿಗೆ ಯೋಗ ಗುರುಗಳಾಗಿದ್ದರು. ನಂತರ ಅವರು 7 ದಿನಗಳ ಕಾಲ ಬಾಬಾ ರಾಮದೇವರ ಹರಿದ್ವಾರ ಪತಂಜಲಿ ಯೋಗ ಪೀಠದಲ್ಲಿ ತರಬೇತಿಯನ್ನು ಪಡೆದುಕೊಂಡರು.
Related Articles
Advertisement
ಡಾ.ರಾವಳ ತಮ್ಮಲ್ಲಿ ಬರುವ ರೋಗಿಗಳಿಗೆ ಯೋಗ, ಧ್ಯಾನದ ಮಹತ್ವಗಳನ್ನು ಹೇಳುತ್ತಾರೆ. ಯೋಗದಿಂದ ಶಾಶ್ವತ ರೋಗ ಮುಕ್ತಿಯ ಬಗ್ಗೆ ಮಾಹಿತಿಯನ್ನು ನೀಡುತ್ತ ಬಂದಿದ್ದಾರೆ.ಡಾ.ರಾವಳ ಅವರ ಪ್ರಕಾರ ಯೋಗ ಮತ್ತು ಆರ್ಯುವೇದ ಎರಡು ಕೂಡಾ ಆರೋಗ್ಯದ ಮಾಹಿತಿಯನ್ನು ನೀಡುತ್ತವೆ. ಆದ್ದರಿಂದ ಯೋಗ ಮತ್ತು ಆರ್ಯುವೇದ ಒಂದೇ ನಾಣ್ಯದ ಎರಡು ಮುಖಗಳು ಎನ್ನುತ್ತಾರೆ. ಸದ್ಯ ಡಾ, ರಾವಳ ಆರೋಗ್ಯವೇ ಜೀವನ ಮತ್ತು ರೋಗವೇ ಮರಣ ಎಂಬ ಉದ್ದೇಶವನ್ನಿಟ್ಟುಕೊಂಡು ಆರೋಗ್ಯ ಯೋಗ ಪೀಠ ಪೌಂಡೇಶನ ಎಂಬ ಸಂಸ್ಥೆಯನ್ನು ಆರಂಭಿಸಿದ್ದಾರೆ. ಸಂಸ್ಥೆಯ ಅಡಿಯಲ್ಲಿ ನಿರಂತರ ಯೋಗವನ್ನು ಪ್ರತಿದಿನ 5.30 ರಿಂದ 7 ಗಂಟೆವರೆಗೆ ಉಚಿತವಾಗಿ ಹಮ್ಮಿಕೊಂಡಿದ್ದಾರೆ. ಅಲ್ಲದೇ ಸಂಸ್ಥೆಯ ಆಡಿಯಲ್ಲಿ ಇನ್ನೂ ಅನೇಕ ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವನ್ನು ಹೊಂದಿದ್ದಾರೆ. ಒಟ್ಟಿನಲ್ಲಿ ಪ್ರಾಣಾಯಾಮ ಮತ್ತು ಯೋಗಾಸನವನ್ನು ತಮ್ಮ ಜೀವನದ ಅವಿಭಾಜ್ಯ ದಿನಚರಿಯನ್ನಾಗಿ ಮಾಡಿಕೊಂಡಿರುವ ಡಾ, ರಾವಳ ತರಬೇತಿ ನೀಡುತ್ತಿರುವ ಸಂದರ್ಭದಲ್ಲಿ ಧ್ವನಿ ವರ್ಧಕಗಳನ್ನು ತೆಗೆದುಕೊಂಡು ಬಂದು ಸೇವೆಯನ್ನು ನೀಡುವುದರ ಜೊತೆಗೆ ಸಮಯಕ್ಕೆ ಹೆಚ್ಚಿನ ಮಹತ್ವ ನೀಡಿ ತಾವು ಹೇಳಿದ ಸರಿಯಾದ ಸಮಯಕ್ಕೆ ಮುಂಚಿತವಾಗಿ ಬಂದು ತರಬೇತಿಯನ್ನು ನೀಡುತ್ತಿದ್ದಾರೆ. ಒಟ್ಟಿನಲ್ಲಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಕೊಡುವ ನಿಟ್ಟಿನಲ್ಲಿ ಉಚಿತ ಪ್ರಾಣಾಯಾಮ ಮತ್ತು ಯೋಗಾಸನ ನೀಡುತ್ತಿರುವ ಡಾ. ಪರಶುರಾಮ ರಾವಳ ಅವರ ಕಾರ್ಯ ನಿಜಕ್ಕೂ ಮೆಚ್ಚುವಂತಹದು. – ಕಿರಣ ಶ್ರೀಶೈಲ ಆಳಗಿ