Advertisement
ಇದು ಉಳ್ಳಾಲ ದರ್ಗಾ ಬಳಿ ವಾಸವಾಗಿರುವ 70ರ ಹರೆಯದ ಅಬ್ದುಲ್ ರವೂಫ್ ಮುಸ್ಲಿಯಾರ್ ಅವರೇ ನೀರನ್ನು ದಾನ ಮಾಡುತ್ತಿರುವ ಸಾಹೇಬರು. ಉಳ್ಳಾಲ ಸೈಯದ್ ಮದನಿ ದರ್ಗಾದಲ್ಲಿ ಸಹಾ ಯಕ ಧರ್ಮಗುರುಗಳಾಗಿ 47 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅವರು ಧಾರ್ಮಿಕವಾಗಿ ಸೇವೆ ಸಲ್ಲಿಸುವುದರೊಂದಿಗೆ ಊರಿನ ಜನರಿಗೆ ತನ್ನ ಕೊಳವೆ ಬಾವಿಯ ನೀರನ್ನು ದಾನ ಮಾಡುವ ಮೂಲಕ ನೀರಿನ ಸಂತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಉಳ್ಳಾಲದಾದ್ಯಂತ ನೀರಿನ ಸಮಸ್ಯೆಗೆ ಪರಿಹಾರವಾಗಿ ಉಳ್ಳಾಲ ನಗರಸಭೆ ನೀರು ಸರಬರಾಜು ಮಾಡುವ ಕಾರ್ಯ ನಡೆಸುತ್ತಿದೆ. ಉಳ್ಳಾಲ ದರ್ಗಾ ಬಾವಿಯಿಂದ ನಿರಂತ ರವಾಗಿ ನೀರು ಸರಬರಾಜು ನಡೆಯುತ್ತಿದ್ದರೆ, ಅಬ್ದುಲ್ ರವೂಫ್ ಮುಸ್ಲಿಯಾರ್ ಅವರ ಕೊಳವೆ ಬಾವಿ ಯಿಂದ ದಿನವೊಂದಕ್ಕೆ 150 ಟ್ಯಾಂಕರ್ ನೀರು ಸರಬರಾಜು ಆಗುತ್ತಿದೆ. ಬಾವಿಯಲ್ಲಿ ನೀರು ಇರುವವರು ಪ್ರತೀ ಟ್ಯಾಂಕರ್‌ಗೆ 50 ರೂ. ಶುಲ್ಕ ತೆಗೆದರೆ ಉಳ್ಳಾಲದ ಮುಸ್ಲಿಯಾರ್ ಯಾವುದೇ ಶುಲ್ಕವನ್ನು ಪಡೆಯುತ್ತಿಲ್ಲ. ಬೆಳಗ್ಗೆ 5 ಗಂಟೆಯಿಂದ ತಡರಾತ್ರಿ 2 ಗಂಟೆ ತನಕ ನಿರಂತರವಾಗಿ ನೀರು ಪೂರೈಕೆಯಾಗುತ್ತದೆ. ಬೆಳಗ್ಗಿಂದ ರಾತ್ರಿ ತನಕ ಕೊಳವೆ ಬಾವಿ ಮೋಟಾರ್ ಚಾಲು ಆಗಿರುತ್ತದೆ. ರವೂಫ್ ಸಾಹೇಬರು ನೀರಿನ ಹಣವು ಪಡೆಯುವುದಿಲ್ಲ, ಇನ್ನೂ ವಿದ್ಯುತ್ ಬಿಲ್ ಕೂಡ ಅವರೇ ಪಾವತಿಸುತ್ತಾರೆ. ಕಳೆದ ಮೂರು ವರ್ಷಗಳಿಂದ ರವೂಫ್ ಸಾಹೇಬರ ಮನೆಯಿಂದ ಉಚಿತವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿದೆ.
Related Articles
ಅಬ್ದುಲ್ ರವೂಫ್ ಮುಸ್ಲಿಯಾರ್ ಅವರ ತಂದೆ ಯೂಸುಫ್ ಮುಸ್ಲಿಯಾರ್ ದರ್ಗಾದ ಖತೀಬರಾಗಿ, ಹೆಸರುವಾಸಿಯಾದ ವಿದ್ವಾಂಸರು. ಅವರ ಪುತ್ರ ಅಬ್ದುಲ್ ರವೂಫ್ ಮುಸ್ಲಿಯಾರ್ ಖತೀಬರಾಗಿ ಸಹಾಯಕ ಖಾಝಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಧಾರ್ಮಿಕತೆಯೊಂದಿಗೆ ಸಾಮಾಜಿಕ ಕಳಕಳಿ ಶ್ಲಾಘನೀಯ.
– ರಶೀದ್ ಉಳ್ಳಾಲ್, ಉಳ್ಳಾಲ ದರ್ಗಾ ಅಧ್ಯಕ್ಷರು.
Advertisement
ಪೂರ್ವಜರಿಗೆ ಸಂತೃಪ್ತಿನೀರು ದೇವರಿಗೆ ಸೇರಿದ್ದು, ಅದೇನೂ ನನ್ನದಲ್ಲ, ಎಲ್ಲರಿಗೂ ಸೇರಿದ್ದು, ಈ ಒಂದು ಸಣ್ಣ ಸೇವೆಯಿಂದ ನನ್ನ ಹಿರಿಯರಿಗೆ, ಪೂರ್ವಜರಿಗೆ ಸಂತೃಪ್ತಿಯಾಗಬಹುದು ಎಂದು ನನ್ನ ನಂಬಿಕೆ.
– ಅಬ್ದುಲ್ ರವೂಫ್ ಮುಸ್ಲಿಯಾರ್