Advertisement

ಮುಕ್ತ ವ್ಯಾಪಾರ ಒಪ್ಪಂದದ ನಿರ್ಧಾರ; ದೀಪಾವಳಿ ವೇಳೆಗೆ ಭಾರತ-ಯುಕೆ ಸಹಿ

08:15 AM Apr 23, 2022 | Team Udayavani |

ನವದೆಹಲಿ: ಹೆಚ್ಚುತ್ತಿರುವ ಜಾಗತಿಕ ತಲ್ಲಣಗಳ ನಡುವೆಯೇ ಭಾರತ ಮತ್ತು ಬ್ರಿಟನ್‌ ಹೊಸ ಮತ್ತು ವಿಸ್ತೃತ ರಕ್ಷಣಾ ಪಾಲುದಾರಿಕೆಯತ್ತ ಹೆಜ್ಜೆಯಿಟ್ಟಿದ್ದು, ದೀಪಾವಳಿ ವೇಳೆಗೆ ಮಹತ್ವಾಕಾಂಕ್ಷೆಯ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ವಾಗ್ಧಾನವನ್ನು ಮಾಡಿಕೊಂಡಿವೆ.

Advertisement

ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ಭಾರತ ಭೇಟಿಯ ಕೊನೆಯ ದಿನವಾದ ಶುಕ್ರವಾರ ಪ್ರಧಾನಿ ಮೋದಿ ಹಾಗೂ ಬೋರಿಸ್‌ ನಡುವೆ ನಡೆದ ಮಾತುಕತೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಅಕ್ಟೋಬರ್‌ ತಿಂಗಳೊಳಗಾಗಿ ಮುಕ್ತ ವ್ಯಾಪಾರ ಒಪ್ಪಂದ ಏರ್ಪಡಲಿದೆ. ಆದಷ್ಟು ಬೇಗ ಈ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜತೆಗೆ, ಭಾರತಕ್ಕೆಂದೇ “ಮುಕ್ತ ರಫ್ತು ಪರವಾನಗಿ’ಯನ್ನು ಯುಕೆ ನೀಡಲಿದ್ದು, ಅದರಿಂದಾಗಿ ಭಾರತಕ್ಕೆ ರಕ್ಷಣಾ ಸಾಮಗ್ರಿಗಳನ್ನು ಸುಲಭವಾಗಿ ಆಮದು ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಬೋರಿಸ್‌ ಹೇಳಿದ್ದಾರೆ.

ಇದನ್ನೂ ಓದಿ:ರಾಜಸ್ಥಾನ: 300 ವರ್ಷಗಳಷ್ಟು ಹಳೆಯ ದೇವಸ್ಥಾನ ಬುಲ್ಡೋಜರ್ ಬಳಸಿ ಧ್ವಂಸ

ರಷ್ಯಾ ಅವಲಂಬನೆ ತಗ್ಗಿಸುವ ಯತ್ನ:
ಹೊಸ ಯುದ್ಧ ವಿಮಾನ ತಯಾರಿಕೆಯ ತಂತ್ರಜ್ಞಾನಗಳನ್ನು ಯುಕೆ ಭಾರತದೊಂದಿಗೆ ಹಂಚಿಕೊಳ್ಳಲಿದೆ ಎಂದೂ ಬೋರಿಸ್‌ ಜಾನ್ಸನ್‌ ಘೋಷಿಸಿದ್ದಾರೆ. ಭಾರತವು ಅರ್ಧಕ್ಕಿಂತಲೂ ಹೆಚ್ಚು ಸೇನಾ ಸಲಕರಣೆಗಳನ್ನು ರಷ್ಯಾದಿಂದಲೇ ಆಮದು ಮಾಡಿಕೊಳ್ಳುತ್ತಿದೆ. ರಷ್ಯಾ ಮೇಲೆ ಭಾರತದ ಈ ಅವಲಂಬನೆ ತಗ್ಗಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿರುವುದು ಬೋರಿಸ್‌ ಮಾತಿನಿಂದ ಸ್ಪಷ್ಟವಾಗಿದೆ. ಇನ್ನು ನೀವು ರಷ್ಯಾದಿಂದ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಬೇಕಾಗಿಲ್ಲ. ಭಾರತದಲ್ಲಿ ನೀವು ನಿಮ್ಮದೇ ಯುದ್ಧ ವಿಮಾನ ನಿರ್ಮಿಸಲು ಬೇಕಾದ ತಂತ್ರಜ್ಞಾನಗಳನ್ನು ನಾವು ಒದಗಿಸುತ್ತೇವೆ ಎಂದಿದ್ದಾರೆ.

Advertisement

ಮೋದಿ ಅವರು ನನ್ನ ಖಾಸಾ ದೋಸ್ತ್. ಇಂದು ನಾವು ಹೊಸ ಮತ್ತು ವಿಸ್ತೃತ ರಕ್ಷಣಾ, ಭದ್ರತಾ ಪಾಲುದಾರಿಕೆಗೆ ಸಮ್ಮತಿಸಿದ್ದೇವೆ. ಇದು ನಮ್ಮ ಸಂಬಂಧವನ್ನು ಬಲಿಷ್ಠಗೊಳಿಸುವುದರ ಜೊತೆಗೆ, ಭಾರತವನ್ನು “ಮೇಕ್‌ ಇನ್‌ ಇಂಡಿಯಾದ ನರೇಂದ್ರ’ವಾಗಿಸುವ ನಿಮ್ಮ ಗುರಿಯೂ ಈಡೇರಲಿದೆ.
– ಬೋರಿಸ್‌ ಜಾನ್ಸನ್‌, ಯುಕೆ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next