Advertisement
ಪ್ರಸಕ್ತ ಸಾಲಿನ ಅಭಿಯಾನದಲ್ಲಿ ಶತಾಯಗತಾಯ ಉತ್ತಮ ರ್‍ಯಾಂಕಿಂಗ್ ಪಡೆಯಬೇಕೆಂದು ಪಾಲಿಕೆ ಅಧಿಕಾರಿಗಳು ನಿರ್ಧರಿಸಿದ್ದು, ಆ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಮುಂದುವರಿದು ಪಾಲಿಕೆಯ 198 ವಾರ್ಡ್‌ಗಳು ಬಯಲು ಶೌಚ ಮುಕ್ತ (ಒಡಿಎಫ್)ವಾಗಿರುವ ವಿಷಯಕ್ಕೆ ಪಾಲಿಕೆಯ ಕೌನ್ಸಿಲ್ ಸಭೆಯ ಅನುಮೋದನೆ ನಡೆದಿದೆ.
Related Articles
Advertisement
ಇದೀಗ ಪಾಲಿಕೆ ತನ್ನೆಲ್ಲಾ ವಾರ್ಡ್‌ಗಳನ್ನು ಒಡಿಎಫ್ ಎಂದು ಘೋಷಿಸಿಕೊಂಡಿರುವ ಕಾರಣ 400 ಅಂಕಗಳು ದೊರೆಯಲಿವೆ. ಇನ್ನು ಕೇಂದ್ರ ಸರ್ಕಾರ ನಿಯೋಜಿಸಿರುವ ಏಜೆನ್ಸಿಗಳು ಬಂದು ಪರಿಶೀಲಿಸಿ ಒಡಿಎಫ್ ಪ್ರಮಾಣ ಪತ್ರ ನೀಡಿದರೆ ಇನ್ನೂ ಹೆಚ್ಚಿನ ಅಂಕಗಳು ದೊರೆಯಲಿವೆ. ಅದನ್ನರಿತ ಅಧಿಕಾರಿಗಳು ಪಾಲಿಕೆ ಸದಸ್ಯರ ಮನವೊಲಿಸಿ ವಾರ್ಡ್‌ಗಳನ್ನು ಬಯಲು ಶೌಚ ಮುಕ್ತವೆಂದು ಘೋಷಿಸಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ವತ್ಛ ಸವೇಕ್ಷಣ್ ಸ್ಪರ್ಧೆ ನಡೆಯುವುದೇಗೆ?: ಸ್ವತ್ಛ ಸವೇಕ್ಷಣ್ ಅಭಿಯಾನದಲ್ಲಿ 1 ಲಕ್ಷಕ್ಕಿಂತ ಕಡಿಮೆ ಹಾಗೂ 1 ಲಕ್ಷಕ್ಕಿಂತ ಹೆಚ್ಚಿನ ಜನ ಸಂಖ್ಯೆ ಹೊಂದಿರುವ ನಗರಗಳ ನಡುವೆ ಸ್ಪರ್ಧೆ ನಡೆಯುತ್ತದೆ. ಸ್ವತ್ಛತೆಗೆ ಕೈಗೊಂಡಿರುವ ಕ್ರಮಗಳ ಆಧಾರದ ಮೇಲೆ ನಗರಗಳಿಗೆ ಅಂಕ ನೀಡಲಾಗುತ್ತದೆ. ಜತೆಗೆ ಕೇಂದ್ರ ಸರ್ಕಾರದ ಪರಿಣಿತರ ತಂಡ ನಗರಕ್ಕೆ ಭೇಟಿ ನೀಡಿ ಪಾಲಿಕೆಯಿಂದ ನೀಡಿದ ಮಾಹಿತಿ ಹಾಗೂ ದಾಖಲೆಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಿ ಅಂಕಗಳನ್ನು ನೀಡುತ್ತದೆ.
ಪಾಲಿಕೆಯ 198 ಸದಸ್ಯರು ತಮ್ಮ ವಾರ್ಡ್‌ಗಳನ್ನು ಬಯಲು ಶೌಚ ಮುಕ್ತ ಎಂದು ಘೋಷಿಸಿಕೊಂಡಿದ್ದಾರೆ. ಸ್ವಯಂಘೋಷಣೆಗೆ 25 ಅಂಕಗಳು ಹಾಗೂ 2 ಸ್ಟಾರ್ ರೇಟಿಂಗ್ ಪಾಲಿಕೆಗೆ ಬರುವುದರಿಂದ 400 ಅಂಕಗಳು ದೊರೆಯಲಿವೆ. ಕೇಂದ್ರ ನಿಯೋಜಿತ ಏಜೆನ್ಸಿಗಳು ಜನವರಿಯಲ್ಲಿ ನಗರಕ್ಕೆ ಭೇಟಿ ನೀಡಲಿದ್ದು, ಪಾಲಿಕೆ ನೀಡಿದ ದಾಖಲೆಗಳನ್ನು ಪರಿಶೀಲಿಸಿ ಒಡಿಎಫ್ ಪ್ರಮಾಣಪತ್ರ ನೀಡಿದರೆ ಉತ್ತಮ ರ್‍ಯಾಂಕ್ ಪಡೆಯಬಹುದು. -ರಂದೀಪ್, ವಿಶೇಷ ಆಯುಕ್ತರು (ಘನತ್ಯಾಜ್ಯ ನಿರ್ವಹಣೆ ವಿಭಾಗ)