ಚಿಕ್ಕಮಗಳೂರು: ಹೊನ್ನಮ್ಮನಹಳ್ಳ ಹಾಗೂ ದಬೆದಬೆ ಜಲಪಾತವನ್ನು ಖಾಸಗಿಯವರಿಂದ ಮುಕ್ತ ಗೊಳಿಸಬೇಕೆಂದು ಒತ್ತಾಯಿಸಿ ಐ.ಡಿ. ಪೀಠದ ಗ್ರಾಮಸ್ಥರು ಜಿಲ್ಲಾ ಧಿಕಾರಿ ಕೆ.ಎನ್. ರಮೇಶ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂಬಂಧ ಮನವಿ ಸಲ್ಲಿಸಿದ ಗ್ರಾಮಸ್ಥರು, ಐ.ಡಿ. ಪೀಠ ಗ್ರಾಮದ ಅತ್ತಿಗುಂಡಿ ಸಮೀಪದ ಹೊನ್ನಮ್ಮನಹಳ್ಳ ಮತ್ತು ದಬೆದಬೆ ಜಲಪಾತ ಆಕರ್ಷಣೀಯ ಸ್ಥಳವಾಗಿದೆ. ಪ್ರತಿ ನಿತ್ಯ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಖಾಸಗಿಯವರು ನಿರ್ವಹಿಸುವ ಮೂಲಕ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲಿ ಶಾಸಕರು ಪ್ರವಾಸಿ ತಾಣಗಳನ್ನು ಗ್ರಾಪಂ ವಶಕ್ಕೆ ಪಡೆದು ನಿರ್ವಹಣೆ ಮಾಡುವಂತೆ ಮೌಖೀಕವಾಗಿ ಸೂಚಿಸಿದ್ದರೂ ಪಂಚಾಯತ್ ಅ ಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ, ಈ ಹಿನ್ನೆಲೆಯಲ್ಲಿ ಖಾಸಗಿಯವರ ಹಿಡಿತದಲ್ಲಿರುವ ದಬೆ ದಬೆ ಜಲಪಾತವನ್ನು ಖಾಸಗಿಯವರಿಂದ ಮುಕ್ತಗೊಳಿಸಿ ಪ್ರವಾಸಿಗರಿಗೆ ಮತ್ತು ಗಾಪಂಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಗ್ರಾಮಸ್ಥರಾದ ಗುರುವೇಶ್, ಮಂಜು, ಚಂಗಣ್ಣ, ಕುಮಾರ್, ಸುರೇಂದ್ರ, ಅಣ್ಣಪ್ಪ ಇತರರು ಇದ್ದರು