Advertisement
ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗುರುವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ, 2020ರ ಏಪ್ರಿಲ್ 26ರಂದು ಹಾಗೂ ಮೇ 24ರಂದು ಸರಕಾರಿ ಸಾಮೂಹಿಕ ವಿವಾಹ ನಡೆಯಲಿದೆ ಎಂದು ತಿಳಿಸಿದರು.
Related Articles
Advertisement
*ಹುಡುಗ, ಹುಡುಗಿಯ ಪೋಷಕರ ಒಪ್ಪಿಗೆ ಅಗತ್ಯ
. ಪರೋಕ್ಷವಾಗಿ ಪ್ರೀತಿಸಿ ಮದುವೆಯಾಗುವವರಿಗೆ ಅವಕಾಶ ಇಲ್ಲ
*ಯಾವುದೇ ಕಾರಣಕ್ಕೂ ಎರಡನೇ ಮದುವೆಗೆ ಅವಕಾಶ ಇಲ್ಲ.
*ಕುಟುಂಬದ ಸದಸ್ಯರೊಂದಿಗೆ ಇರುವ ಬಗ್ಗೆ ದಾಖಲೆ ಕೊಡಬೇಕು
*ಸ್ಥಳದಲ್ಲಿಯೇ ಮದುವೆ ನೋಂದಣಿ ಪ್ರಕ್ರಿಯೆ ನಡೆಯುತ್ತೆ
ನವಜೋಡಿಗೆ ಸರಕಾರದಿಂದ ಸಿಗುವ ಸೌಲಭ್ಯಗಳೇನು?
*ವರನಿಗೆ 10 ಸಾವಿರ, ವಧುವಿಗೆ 15 ಸಾವಿರ(ಸೀರೆ) ರೂಪಾಯಿ ಅನುದಾನ
*ವಧುವಿಗೆ 40 ಸಾವಿರ ರೂ. ಮೌಲ್ಯದ 8 ಗ್ರಾಂ ಚಿನ್ನದ ತಾಳಿ
*ಒಂದು ಜೋಡಿಗೆ ಒಟ್ಟು 65 ಸಾವಿರ ರೂಪಾಯಿ ಸರಕಾರದ ವತಿಯಿಂದ ಖರ್ಚು
ಎಲ್ಲೆಲ್ಲಿ ಸಾಮೂಹಿಕ ವಿವಾಹ:
ಬೆಂಗಳೂರಿನ ಬನಶಂಕರಿ ದೇವಾಲಯ
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಒಟ್ಟು ನೂರು ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ಕೋಟ ವಿವರಿಸಿದ್ದಾರೆ.