Advertisement

150 ವಿದ್ಯಾರ್ಥಿಗಳಿಗೆ ಉಚಿತ ಐಎಎಸ್‌ ತರಬೇತಿ

05:50 PM Dec 27, 2020 | Suhan S |

ಬಳ್ಳಾರಿ: ಬಡತನ, ಕೀಳರಿಮೆ ಮೆಟ್ಟಿನಿಲ್ಲುವ ಮೂಲಕ ಶ್ರದ್ಧೆ ಮತ್ತು ಸತತ ಪರಿಶ್ರಮದಿಂದ ಮುಂದೆ ಸಾಗಿದರೆ ಯಶಸ್ಸು ನಿಮ್ಮದಾಗಲಿದೆ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಸ್ಪರ್ಧಾಳುಗಳಿಗೆ ಸಲಹೆ ನೀಡಿದರು.

Advertisement

ನಗರದ ವಿಮ್ಸ್‌ ಶಿಕ್ಷಕರ ಭವನದಲ್ಲಿ ಜಿಲ್ಲಾ ಖನಿಜ ನಿಧಿ ಯೋಜನೆಯಡಿ ಜಿಲ್ಲಾಡಳಿತದಿಂದ ಐಎಎಸ್‌, ಕೆಎಎಸ್‌, ಬ್ಯಾಂಕಿಂಗ್‌ ಪರೀಕ್ಷೆಗಳಿಗೆ ತರಬೇತಿ ನೀಡಲು ಏರ್ಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು ಎನ್ನುವ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಒಂದು ಉತ್ತಮ ಅವಕಾಶವನ್ನು ಬಳ್ಳಾರಿಜಿಲ್ಲಾಡಳಿತದಿಂದ ಕಲ್ಪಿಸಲಾಗಿದೆ. ಇದನ್ನುಎಲ್ಲರು ಉಪಯೋಗಿಸಿಕೊಳ್ಳಬೇಕು ಮತ್ತುಸತತ ಪ್ರಯತ್ನ ಮತ್ತುಮಾರ್ಗದರ್ಶನ ಸರಿಯಾಗಿದ್ದರೆ ಸಾಧನೆ ಮಾಡುವುದ ಸುಲಭವಾಗುತ್ತದೆ ಎಂದರು.

ಜಿಲ್ಲಾ ಖನಿಜ ನಿಧಿ ಬಳಸಿಕೊಂಡು ಪ್ರತಿ ವರ್ಷ 150 ಜನ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುತ್ತದೆ. ಇದರ ಮೊದಲಭಾಗವಾಗಿ ಜ. 3ರಂದು ಸರಳಾದೇವಿಕಾಲೇಜಿನಲ್ಲಿ ಪರೀಕ್ಷೆ ಮಾಡಲಾಗುತ್ತದೆ.ಅದರಲ್ಲಿ ಉತ್ತಮ ಅಂಕ ಪಡೆದ 150 ಜನರನ್ನುಕೌನ್ಸೆಲಿಂಗ್‌ ಮೂಲಕ ಆಯ್ಕೆ ಮಾಡಿಕೊಂಡುಅವರಿಗೆ ತರಬೇತಿ ನೀಡಲಾಗುವುದು. ಉಚಿತತರಬೇತಿಯ ತರಗತಿಗಳು ಜನವರಿ 15ರಿಂದಲೇ ಶುರುವಾಗಬಹುದು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅಡಾವತ್‌ ಮಾತನಾಡಿ, ನಾವು ಗ್ರಾಮೀಣ ಭಾಗದವರು, ನಮಗೆ ಇಂಗ್ಲಿಷ್‌ ಮಾತಾಡೋಕೆ ಬರಲ್ಲ, ಇನ್ನು ಐಎಎಸ್‌, ಐಪಿಎಸ್‌ನಂಥ ಉನ್ನತ ಹುದ್ದೆ ನಿರೀಕ್ಷಿಸಲು ಹೇಗೆ ಸಾಧ್ಯ ಎನ್ನುವ ನಿರುತ್ಸಾಹವನ್ನು ನಿಮ್ಮ ತಲೆಯಿಂದ ತೆಗೆದುಹಾಕಿ, ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಇತರರಿಗೆ ಮಾದರಿಯಾಗಬೇಕು ಎಂದುಕೊಂಡವರು ನಿರಂತರವಾಗಿ ಶ್ರಮವಹಿಸಿ, ಪ್ರತಿಕ್ಷಣ ನಿಮ್ಮ ಆ ಕನಸು ನನಸಾಗಲು ಕಷ್ಟಪಡಿ ಆಗ ನಿಮ್ಮ ಗೆಲುವು ನಿಶ್ಚಯವಾಗುತ್ತದೆ ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

Advertisement

ಪಂ ಸಿಇಓ ಕೆ.ಆರ್‌. ನಂದಿನಿ ಮಾತನಾಡಿ, ನೀವು ಯಾವುದೇ ಒಂದು ವಿಶೇಷ ಕೆಲಸ ಮಾಡಲು ಹೊರಟಾಗ ನಿಮ್ಮ ಸುತ್ತಲಿನ ಜನ ಆ ನಿಮ್ಮ ಕೆಲಸ ಬಗ್ಗೆ ಮಾತನಾಡುತ್ತಾರೆ,ನಂತರ ನಿಮ್ಮನ್ನು ನಗೆಪಾಟಲು ಮಾಡುತ್ತಾರೆ, ನೀವು ಆ ಕೆಲಸದಲ್ಲಿ ಯಶಸ್ಸು ಗಳಿಸಿದ ನಂತರ ಅದೇ ಜನರು ನಿಮ್ಮನ್ನು ಸನ್ಮಾನ ಮಾಡುತ್ತಾರೆ. ಮೊದಲು ಎರಡು ಕಷ್ಟಗಳನ್ನುಅನುಭವಿಸಿದರೆ ಮಾತ್ರ ಸನ್ಮಾನ ಸ್ವೀಕರಿಸಲುನೀವು ಅರ್ಹರಾಗುತ್ತೀರಿ. ಅದಕ್ಕೂ ಮುನ್ನ ನಿಮ್ಮ ತಲೆಯಲ್ಲಿರುವ ತಪ್ಪು ಕಲ್ಪನೆಯನ್ನು ದೂರ ಮಾಡಿ, ಪೂರ್ವಗ್ರಹ ಪೀಡಿತರಾಗಬೇಡಿ ಎಂದು ತಿಳಿಸಿದರು.

ಇಸ್ಪೈಟ್‌ ಆನ್‌ ಇಂಡಿಯಾದ ಸಂಸ್ಥಾಪಕ ವಿನಯ್‌ ಮಾತನಾಡಿ, ನಿಮ್ಮಲ್ಲಿ ಹಲವಾರು ಕನಸುಗಳು ಇರಬಹುದು. ಅವುಗಳಿಗೆ ನೀರೆರೆಯುವ ಕೆಲಸ ನಮ್ಮ ಅಕಾಡೆಮಿಮಾಡುತ್ತದೆ. ಐಎಎಸ್‌ ಆಗಬೇಕು ಎನ್ನುವ ಕನಸು ನಿಮ್ಮ ಮನದಲ್ಲಿ ಮೂಡಬೇಕು. ಅಂತಹ ಕನಸು ಕಾಣಲು ಯಾವುದೇ ಭಯ ಬೇಡ. ನಾವು ನಿಮ್ಮ ಕನಸುಗಳು ನನಸಾಗಲು ಒಂದುಅವಕಾಶ ಕೊಡಬಹುದು. ಆದರೆ, ಯಶಸ್ಸು ನಿಮ್ಮದಾಗಲು ನಿಮ್ಮ ಕಠಿಣ ಪರಿಶ್ರಮ, ಶಿಸ್ತು,ಸಮಯ ಪಾಲನೆ ಅತೀ ಮುಖ್ಯ ಎಂದರು.

ಇಸ್ಪೈಟ್‌ ಆನ್‌ ಇಂಡಿಯಾದ ಪ್ರದೀಪ್‌, ಶಮಂತ್‌, ಐಎಎಸ್‌ ಅಧಿಕಾರಿ ರಾಹುಲ್‌ ಸಂಕನೂರು ಮಾತನಾಡಿದರು. ಸರಳಾದೇವಿ ಕಾಲೇಜಿನ ಪ್ರಾಂಶುಪಾಲ ಪ್ರೊ| ಹೇಮಣ್ಣ, ಉಪನ್ಯಾಸಕ ಡಾ| ಇಸ್ಮಾಯಿಲ್‌ ಮಕಾಂದರ್‌, ಡಾ| ಟಿ. ವೀರಭದ್ರಪ್ಪ, ಡಾ| ಕೆ.ಬಸಪ್ಪ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next