Advertisement
ಅರಣ್ಯ ಇಲಾಖೆಯಿಂದ ತಾಲೂಕಿನಲ್ಲಿ ಪ.ಜಾ., ಪ.ಪಂ.ದ ಫಲಾನುಭವಿಗಳಿಗೆ ಮಾತ್ರ ಅಡುಗೆ ಅನಿಲ ವಿತರಿಸಲಾಗಿದ್ದು, ಪ್ರಸ್ತುತ ಅದೇ ಫಲಾನುಭವಿಗಳಿಗೆ ಅನಿಲ ತುಂಬಿಸಿಕೊಳ್ಳುವುದಕ್ಕೆ ಅನುದಾನ ಬರುತ್ತಿದೆ. ಆದರೆ ಪ್ರತೀ ವರ್ಷವೂ ಎಲ್ಲ ಫಲಾನುಭವಿಗಳಿಗೆ ಉಚಿತ ಅನಿಲ ಸಿಗುತ್ತದೆ ಎಂದು ಹೇಳುವಂತಿಲ್ಲ. ಅಂದರೆ ಅನುದಾನ ಬಂದಂತೆ ಆ ಸಮಯದ ಅಡುಗೆ ಅನಿಲದ ಬೆಲೆಯನ್ನು ಆಧರಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರಣ್ಯ ಇಲಾಖೆಯಿಂದ ಉಚಿತ ಅಡುಗೆ ಅನಿಲ ಸಂಪರ್ಕ ಪಡೆದ ಫಲಾನುಭವಿಗಳಿಗೆ ಪ್ರತೀ ವರ್ಷ ಒಂದು ಬಾರಿ ಅನಿಲ ತುಂಬಿಸಿ ಕೊಳ್ಳುವುದಕ್ಕೆ ಇಲಾಖೆ ಅನುದಾನ ನೀಡುತ್ತಿದೆ. ಪ್ರತೀ ವರ್ಷ ಇಂತಿಷ್ಟೇ ಅನುದಾನ ಬರು ತ್ತದೆ ಎಂದು ಹೇಳುವಂತಿಲ್ಲ. ಅನು ದಾನ ಮೊತ್ತವನ್ನು ಆಧರಿಸಿ ನಾವು ಏಜೆನ್ಸಿಯವರ ಮೂಲಕ ಅನಿಲ ತುಂಬಿಸಿಕೊಳ್ಳುವುದಕ್ಕೆ ಫಲಾನುಭವಿ ಗಳಿಗೆ ತಿಳಿಸುತ್ತೇವೆ. -ರಾಜೇಶ್ ಬಳಿಗಾರ್, ವಲಯ ಅರಣ್ಯಾಧಿಕಾರಿ, ಬಂಟ್ವಾಳ
Related Articles
ಅಡುಗೆ ಅನಿಲ ತುಂಬಿಸಿಕೊಳ್ಳುವುದಕ್ಕಾಗಿ ಸರಕಾರದಿಂದ ಬಂದ ಅನುದಾನವನ್ನು ಅರಣ್ಯ ಇಲಾಖೆಯು ಫಲಾನುಭವಿಗಳಿಗೆ ನೀಡುತ್ತಿಲ್ಲ. ಬದಲಾಗಿ ಗ್ಯಾಸ್ ಏಜೆನ್ಸಿಯವರಿಂದ ಫಲಾನುಭವಿಗಳ ಪಟ್ಟಿಯನ್ನು ತರಿಸಿಕೊಂಡು ಅದರ ಆಧಾರದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ. ಬಳಿಕ ಆಯ್ಕೆಯಾದ ಫಲಾನುಭವಿಗಳಿಗೆ ಅಡುಗೆ ಅನಿಲ ತುಂಬಿಸಿಕೊಳ್ಳುವ ಕುರಿತು ಮಾಹಿತಿ ನೀಡಲಾಗುತ್ತದೆ. ಅವರು ತಮ್ಮಲ್ಲಿ ಗ್ಯಾಸ್ ಖಾಲಿಯಾದಾಗ ಏಜೆನ್ಸಿಯವರನ್ನು ಸಂಪರ್ಕಿಸಿ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳುತ್ತಾರೆ. ಬಳಿಕ ಅರಣ್ಯ ಇಲಾಖೆಯಿಂದ ನೇರವಾಗಿ ಏಜೆನ್ಸಿಗೆ ಅನುದಾನವನ್ನು ಪಾವತಿ ಮಾಡಲಾಗುತ್ತದೆ.
Advertisement