Advertisement

ಗೊರವನಹಳ್ಳಿಯಲ್ಲಿ ಉಚಿತ ಕಣ್ಣಿನ ಪರೀಕ್ಷೆ ಮತ್ತು ಶಸ್ತ್ರ ಚಿಕತ್ಸಾ ಶಿಬಿರ

05:59 PM Mar 27, 2023 | Team Udayavani |

ಕೊರಟಗೆರೆ: ಪ್ರವಾಸಿ ಕೇಂದ್ರ ಹಾಗೂ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮಾ.27 ರಂದು ಸೋಮವಾರ ಏರ್ಪಡಿಸಿದ್ದ ಉಚಿತ ನೇತ್ರ ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಸುತ್ತಮುತ್ತಲ ಗ್ರಾಮೀಣ ಭಾಗದ ಸುಮಾರು 300 ಕ್ಕೂ ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಿ 30 ಮಂದಿಗೆ ಕಣ್ಣಿನ ಚಿಕಿತ್ಸೆಗೆ ಬೆಂಗಳೂರು ಆಸ್ಪತ್ರೆಗೆ ಕರೆದೊಯ್ದು ಶಿಬಿರ ಯಶಸ್ವಿಗೊಳಿಸಿದ್ದಾರೆ.

Advertisement

ಕೊರಗಟೆರೆ ತಾಲೂಕಿನ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯದ ಆಡಳಿತ ಮಂಡಲಿಯಾದ ಶ್ರೀಮಹಾಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್, ಬೆಂಗಳೂರು ಗಿರಿನಗರದ ವೈಷ್ಣವಿ ಲಯನ್ಸ್ ಐ ಕೇರ್ ಸೆಂಟರ್ ಹಾಗೂ ಬೆಂಗಳೂರು ಸಪ್ತಗಿರಿ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಗೋರವನಹಳ್ಳಿ ಶ್ರೀಮಹಾಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಶಿಬಿರದಲ್ಲಿ ಅವಶ್ಯಕತೆ ಇರುವವರನ್ನು ಗುರುತಿಸಿ ಬೆಂಗಳೂರಿನ ಗಿರಿನಗರದಲ್ಲಿರುವ ಸುಸಜ್ಜಿತ ವೈಷ್ಣವಿ ಆಸ್ಪತ್ರೆಗೆ ಕರೆದೊಯ್ಯದು ಶಸ್ತ್ರಚಿಕತ್ಸೆಗೆ ಒಳಪಡಿಸುವ ಮೂಲಕ ಶಿಬಿರ ಯಶಸ್ವಿಗೊಳಿಸಿದ್ದಾರೆ.
ಇದರೊಂದಿಗೆ ಕಣ್ಣಿನ ಅಲ್ಪ ಸ್ವಲ್ಪ ದೋಶ ಕಂಡು ಬಂದವರಿಗೆ ಸ್ಥಳದಲ್ಲಿಯೇ ಚಿಕಿತ್ಸೆ ನೀಡಿ ಉಚಿತವಾಗಿ ಕನ್ನಡಕ ಹಾಗೂ ಔಷಧಿಗಳನ್ನು ವಿತರಿಸಿದರು.

ಶಿಬಿರದಲ್ಲಿ ವೈಷ್ಣವಿ ಐ ಕೇರ್ ಸೆಂಟರ್‌ನ ಡಾ.ರಂಗಸ್ವಾಮಿ ನೇತೃತ್ವದ ವೈದ್ಯರ ತಂಡ ಹಾಗೂ ಬೆಂಗಳೂರು ಸಪ್ತಗಿರಿ ಆಸ್ಪತ್ರೆಯ ವೈದ್ಯರ ತಂಡ ಹಾಗೂ ಶ್ರೀ ಮಹಾ ಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ.ಜಿ.ವಾಸುದೇವ್, ಕಾರ್ಯದರ್ಶಿ ಚಿಕ್ಕನರಸಯ್ಯ, ಖಜಾಂಚಿ ಬಿ.ಎಲ್.ಮಂಜುನಾಥ್, ಧರ್ಮದಶಿಗಳಾದ ಜಗದೀಶ್, ನಟರಾಜು, ಲಕ್ಷ್ಮೀ ನರಸಯ್ಯ, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ, ಲಕ್ಷ್ಮಣ್ ಸೇರಿದಂತೆ ಸಿಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next