Advertisement

ಲೋನವಾಲ ಪರಿಸರದ ಹಿರಿಯ ನಾಗರಿಕರಿಗೆ ಉಚಿತ ಕೋವಿಡ್‌ ಲಸಿಕೆ

03:58 PM Mar 22, 2021 | Team Udayavani |

ಪುಣೆ: ಲೋನವಾಲದ ಬಿಜೆಪಿ ನೇತಾರ, ಲೋನವಾಲ ಎಲ್‌ಎನ್‌ಪಿ ವರಿಷ್ಠ ನಗರ ಸೇವಕ, ಲೋನವಾಲ ನಗರ ಪರಿಷದ್‌ನ ಮಾಜಿ ಉಪಾಧ್ಯಕ್ಷ, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಲೋನವಾಲ ಸ್ಥಳೀಯ ಸಮಿತಿಯ ಗೌರವಾಧ್ಯಕ್ಷ ನಿಟ್ಟೆ ನಡಿಮನೆ ಶ್ರೀಧರ್‌ ಎಸ್‌. ಪೂಜಾರಿ ಅವರ ವತಿಯಿಂದ ಸ್ಥಾನೀಯ ಹಿರಿಯ ನಾಗರಿಕರಿಗೆ ಉಚಿತವಾಗಿ ಸಾವಿರಕ್ಕೂ ಅಧಿಕ ಕೋವಿಡ್‌ ಲಸಿಕೆ ನೀಡಲಾಯಿತು.

Advertisement

ಡಾ| ಅಮೋಲ್‌ ಅಗರ್ವಾಲ್‌ ಮತ್ತು ಸ್ಥಾಪಕ ನಿರ್ದೇಶಕ ರಾಮ್‌ಲಾಲ್‌ ಅಗರ್‌ವಾಲ್‌ ಸಂಜೀವನಿ ವೈದ್ಯಕೀಯ ಪ್ರತಿಷ್ಠಾನದ ಸಹಕಾರದಲ್ಲಿ ಕೋವಿಡ್‌ ವ್ಯಾಕ್ಸಿನೇಷನ್‌ ಡ್ರೈವ್‌ ಅನ್ನು ಲೋನವಾಲದ ಬಿಜೆಪಿ ಮತ್ತು ರಿಪಬ್ಲಿಕನ್‌ ಪಾರ್ಟಿ ಇದರ ಕಾರ್ಯಕರ್ತರು ಆರ್ಥಿಕವಾಗಿ ಹಿಂದುಳಿದ 60ಕ್ಕೂ ಅಧಿಕ ಹಿರಿಯ ನಾಗರಿಕರಿಗೆ ಗುರುವಾರ ಬೆಳಗ್ಗೆಯಿಂದ ಸಂಜೆವರೆಗೆ ನೀಡುವಲ್ಲಿ ಸಹಕರಿಸಿದರು.

ಡಾ| ಅಮೋಲ್‌ ಅಗರ್ವಾಲ್‌ ಅವರ ಸಂಚಾಲಕತ್ವದ ಸಂಜೀವನಿ ಆಸ್ಪತ್ರೆಯಲ್ಲಿ ಶಿಬಿರ ಆಯೋಜಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಪೂರ್ವತಯಾರಿಯಾಗಿಸಿ ನಗರ ಪರಿಷದ್‌ನ ಆಸ್ಪತ್ರೆ ಹಾಗೂ ಬಿಜೆಪಿ ಕಾರ್ಯಾಲಯಗಳಲ್ಲಿ ಫಲಾನುಭವಿಗಳ ಹೆಸರು ನೋಂದಣಿ ಅಭಿಯಾನ ನಡೆಸಲಾಗಿತ್ತು. ಸುಮಾರು 350ಕ್ಕೂ ಅಧಿಕ ಲಸಿಕೆಗಳನ್ನು ನೀಡಲಾಯಿತು.

ಈ ಸೌಲಭ್ಯವನ್ನು 60 ವರ್ಷ ಮೇಲ್ಪಟ್ಟ ಬಿಪಿಎಲ್‌ ಗುಂಪಿನ ಕನಿಷ್ಠ 1,000 ಫಲಾನುಭವಿಗಳಿಗೆ ಒದಗಿ ಸುವ ಉದ್ದೇಶವನ್ನು ವ್ಯಕ್ತಪಡಿಸಿದ ಶ್ರೀಧರ ಪೂಜಾರಿ ಅವರು, ಪ್ರತೀ ನಾಗರಿಕರಿಗೆ ಎರಡು ಹಂತಗಳಲ್ಲಿ ಡೋಸ್‌ ನೀಡಲಾಗುತ್ತಿದ್ದು ಮೊದಲ ಹಂತದ ಡೋಸ್‌ ಒಂದೆರಡು ದಿನಗಳಲ್ಲಿ ಪೂರೈಸಿ ಎರಡನೇ ಡೋಸ್‌ನ್ನು 28 ದಿನಗಳ ಬಳಿಕ ನೀಡಲಾ ಗುವುದು. ಮುಂದಿನ ದಿನಗಳಲ್ಲಿ ಎಲ್ಲ ಫಲಾನುಭವಿಗಳಿಗೆ ಮೊದಲ ಹಂತ ಮತ್ತು 2ನೇ ಹಂತದಲ್ಲೂ ಸಂಪೂರ್ಣವಾಗಿ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದರು.

ಲೋನವಾಲ ನಗರ ಪರಿಷತ್‌ನ ನಗರಾಧ್ಯಕ್ಷೆ ಸುರೇಖಾ ಜಾಧವ್‌, ಆರ್‌ಪಿಐ ಪುಣೆ ಜಿಲ್ಲಾಧ್ಯಕ್ಷ ಆಯು. ಸೂರ್ಯನಂತ್‌ ಜಿ.ವಾಘ್ಮೆರೆ, ಬಿಜೆಪಿ ಲೋನವಾಲ ಅಧ್ಯಕ್ಷ ರಾಮ್‌ವಿಲಾಸ್‌ ಖಂಡೇಲ್ವಾಲ್‌, ಆರ್‌ಪಿಐ ಲೋನವಾಲ ಅಧ್ಯಕ್ಷ ಎ.ಕಮಲ್‌ಶೀಲ್‌ ಮಾಸ್ಕೆನ್‌ ಕೌನ್ಸಿಲರ್‌ ರಾಜಭೌ ಖಲಡ್ಕರ್‌ ಉಪಸ್ಥಿತಿಯಲ್ಲಿ ಬಿಜೆಪಿಯ ಹಿರಿಯ ಮುಖಂಡ ಅರವಿಂದ್‌ ಕುಲಕರ್ಣಿ ಅವರು ಅಭಿಯಾನಕ್ಕೆ ಚಾಲನೆ ನೀಡಿದರು.

Advertisement

ಮಾಜಿ ನಗರ ಸೇವಕ ಬಾಲಾಸಾ ಹೇಬ್‌ ಜಾಧವ್‌, ದಿಲೀಪ್‌ ಮನ್ಕಾಮೆ,

ಮಹಿಳಾ ಮೋರ್ಚಾ ಅಧ್ಯಕ್ಷ ಯೋಗಿ ತಾ ಕೊಕ್ರೆ, ಯುವ ಮೋರ್ಚಾ ಅಧ್ಯಕ್ಷ ಶುಭಮ್‌ ಮನ್ಕಾಮೆ, ಗಣೇಶ್‌ ಗಾಯಕ್ವಾಡ್‌, ಚೈತನ್ಯ ದಳ್ವಿ, ಶ್ರವಾಣ್‌ ಚಿಕ್ನೆ, ಸಂಕೇತ್‌ ನಿಕುಡೆ, ವಿಕಯ್‌ ಸಕಾತ್‌, ಯಶ್‌ ಪಾಲೌRಡ್‌. ಸುಜಾತಾ ಮೆಹ್ತಾ ನಂದು ಜೋಶಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

 

-ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next