Advertisement

ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಪುನರಾರಂಭ

01:20 AM Aug 27, 2020 | mahesh |

ಬೆಂಗಳೂರು: ಕೋವಿಡ್‌ ಹಿನ್ನೆಲೆಯಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಐದು ತಿಂಗಳಿನಿಂದ ಸ್ಥಗಿತಗೊಂಡಿದ್ದ ಉಚಿತ ಕಣ್ಣಿನ ಪೊರೆ (ಕ್ಯಾಟರ್ಯಾಕ್ಟ್) ಶಸ್ತ್ರಚಿಕಿತ್ಸೆಯನ್ನು ಸೆಪ್ಟಂಬರ್‌ನಲ್ಲಿ ಪುನರಾರಂಭಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಇದರಿಂದ ರಾಜ್ಯದ 1 ಲಕ್ಷಕ್ಕೂ ಅಧಿಕ ಬಡ ವಯೋವೃದ್ಧರಿಗೆ ಅನುಕೂಲವಾಗಲಿದೆ.

Advertisement

ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಮಾರ್ಚ್‌ 2ನೇ ವಾರ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಯುತ್ತಿತ್ತು. ಸರಾಸರಿ 30 ಸಾವಿರ ಫ‌ಲಾನುಭವಿಗಳಿದ್ದರು. ಈಗ ಮತ್ತೆ ಎಲ್ಲ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ಅಗತ್ಯ ತಯಾರಿ ಮಾಡಿಕೊಳ್ಳಲಾಗುತ್ತಿದೆ’ ಎಂದು ಆರೋಗ್ಯ ಇಲಾಖೆ ಹಿರಿಯ ವೈದ್ಯಾಧಿಕಾರಿ ಡಾ| ಜಿ.ಎನ್‌. ರಜನಿ ತಿಳಿಸಿದ್ದಾರೆ.

ಕಾಯುತ್ತಿದ್ದ ಜನತೆ
ಖಾಸಗಿ ಕಣ್ಣಿನ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಲಭ್ಯವಿದ್ದು, ಕನಿಷ್ಠ 20 ಸಾವಿರದಿಂದ ಗರಿಷ್ಠ 1.5 ಲಕ್ಷ ರೂ. ಶುಲ್ಕವಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಇದು ಅಸಾಧ್ಯವಾಗಿದ್ದು, ಸರಕಾರಿ ಆಸ್ಪತ್ರೆಗಳಲ್ಲಿ ಆರಂಭವಾಗುವುದನ್ನೇ ಎದುರು ನೋಡುತ್ತಿದ್ದರು.

ಕಳೆದ ವರ್ಷ ಇದೇ ಅವಧಿಯಲ್ಲಿ 1.61 ಲಕ್ಷ ಶಸ್ತ್ರಚಿಕಿತ್ಸೆ
ರಾಷ್ಟ್ರೀಯ ಅಂಧತ್ವ ನಿವಾರಣೆ ಕಾರ್ಯಕ್ರಮದಡಿ 2019-20ರಲ್ಲಿ ರಾಜ್ಯಾದ್ಯಂತ 3,61,711 ಉಚಿತ ಶಸ್ತ್ರಚಿಕಿತ್ಸೆಗಳು ನಡೆದಿದ್ದವು. 2019ರ ಎಪ್ರಿಲ್‌ನಿಂದ ಆಗಸ್ಟ್‌ ವರೆಗೆ 1,61,067 ಮಂದಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಪ್ರತಿ ತಿಂಗಳು ಸರಾಸರಿ 32 ಸಾವಿರ ಮಂದಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಏನಿದು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ?
ವಯೋಸಹಜ ಅಥವಾ ದೀರ್ಘ‌ ಕಾಲದ ಮಧುಮೇಹದಿಂದ ಬಳಲು ತ್ತಿರು ವವ ರಿಗೆ ಕಣ್ಣಿನ ಮಸೂರ (ಲೆನ್ಸ್‌) ಮಂಜಾಗುವುದನ್ನೇ ಕಣ್ಣಿಗೆ ಪೊರೆ ಬಂದಿರುವುದು ಎನ್ನುತ್ತಾರೆ. ಶಸ್ತ್ರಚಿಕಿತ್ಸೆ ಮೂಲಕ ಮಸೂರ ಭಾಗವನ್ನು ತೆಗೆದು ಕೃತಕ ಮಸೂರ ಅಳವಡಿಸಲಾಗುತ್ತದೆ. ಇದು ಹೆಚ್ಚು ನೋವಿಲ್ಲದ ಶಸ್ತ್ರಚಿಕಿತ್ಸೆಯಾಗಿದ್ದು, ಒಟ್ಟಾರೆ ಪ್ರಕ್ರಿಯೆಗೆ 3-4 ಗಂಟೆ ಸಾಕು. ಶಸ್ತ್ರಚಿಕಿತ್ಸೆಗೊಳಗಾದವರು ಮರುದಿನ ದಿಂದಲೇ ದೈನಂದಿನ ಚಟುವಟಿಕೆ ಆರಂಭಿಸಬಹುದು ಎನ್ನುತ್ತಾರೆ ಕಣ್ಣಿನ ತಜ್ಞರು.

Advertisement

ಕೇಂದ್ರ ಸರಕಾರ ಚಿಕ್ಕ ಪ್ರಮಾಣದ ಡೇ ಕೇರ್‌ ಶಸ್ತ್ರಚಿಕಿತ್ಸೆಗಳಿಗೆ ಅನುಮತಿ ನೀಡಿದೆ. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಡೇ ಕೇರ್‌ ವ್ಯಾಪ್ತಿಗೆ ಬರಲಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಸೆಪ್ಟಂಬರ್‌ನಲ್ಲಿ ಪುನರಾರಂಭಿಸ ಲಾಗುವುದು.
– ಡಾ| ಓಂಪ್ರಕಾಶ್‌ ಪಾಟೀಲ್‌,ನಿರ್ದೇಶಕರು, ಆರೋಗ್ಯ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next