Advertisement

ಕೋವಿಡ್‌ನಿಂದ ಪಾಲಕರ ಕಳೆದುಕೊಂಡವರಿಗೆ ಉಚಿತ ಪ್ರವೇಶ

05:19 PM Jul 20, 2021 | Team Udayavani |

ಧಾರವಾಡ: ಕೋವಿಡ್‌ ಸೋಂಕಿನಿಂದ ಮೃತಪಟ್ಟವರ ಮಕ್ಕಳಿಗೆ ದಿ| ಶಂಕರ ಪಾಟೀಲ ಅವರ ಜನ್ಮದಿನದ ಪ್ರಯುಕ್ತ ಪವನ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಉಚಿತ ಪ್ರವೇಶ ನೀಡಲು ನಿರ್ಧರಿಸಲಾಗಿದೆ ಎಂದು ಶಾಲೆಯ ಉಪಾಧ್ಯಕ್ಷೆ ರತ್ನಾ ಶಂಕರ ಪಾಟೀಲ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಕಳಕಳಿ ಹೊಂದಿದ್ದ ಶಾಲೆಯ ಮುಖ್ಯಸ್ಥರಾಗಿದ್ದ ದಿ| ಶಂಕರ ಪಾಟೀಲರು ಅರ್ಹ ಬಡ ಮಕ್ಕಳಿಗೆ ಉಚಿತವಾಗಿ ಪ್ರವೇಶ ನೀಡಿದ್ದರು. ಅನಿರೀಕ್ಷಿತವಾಗಿ ಕೋವಿಡ್‌ಗೆ ಅವರು ಮೃತಪಟ್ಟಿದ್ದು, ಇದೀಗ ಅವರ ಜನ್ಮದಿನದ ನಿಮಿತ್ತ ಕೋವಿಡ್‌ನಿಂದ ಮೃತಪಟ್ಟವರ 20 ಮಕ್ಕಳಿಗೆ ಉಚಿತ ಪ್ರವೇಶ ನೀಡಲು ತೀರ್ಮಾನಿಸಲಾಗಿದೆ. ಯಾವುದೇ ವರ್ಗದಲ್ಲೂ ಪ್ರವೇಶ ಪಡೆಯಲಿದ್ದು, ಶಾಲೆಯಲ್ಲಿ 10ನೇ ತರಗತಿವರೆಗೂ ಅವರಿಗೆ ಪ್ರವೇಶ ಶುಲ್ಕ ಆಕರಣೆ ಇಲ್ಲ. ಪ್ರವೇಶ ಮಾತ್ರವಲ್ಲದೇ ಪುಸ್ತಕದ ವ್ಯವಸ್ಥೆ ಮಾಡಲಿದ್ದೇವೆ ಎಂದು ತಿಳಿಸಿದರು.

ಶಾಲೆಯ ಕಾರ್ಯದರ್ಶಿ ಮಹೇಶ ಪಾಟೀಲ ಹಾಗೂ ಅಕ್ಷತಾ ಪಾಟೀಲ ಮಾತನಾಡಿ, ಧಾರವಾಡದಲ್ಲಿ ಪವನ ಶಾಲೆಗೆ ಉತ್ತಮ ಹೆಸರಿದೆ. ಶಾಲೆಯ ಶ್ರೇಯೋಭಿವೃದ್ಧಿಗೆ ತಂದೆಯವರಾದ ಶಂಕರ ಪಾಟೀಲರು ತುಂಬ ಶ್ರಮಿಸಿದ್ದಾರೆ. ಹೀಗಾಗಿ ಅವರ ಹೆಸರಿನಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುವ ಉದ್ದೇಶವಿದೆ. ಆದರೆ, ಕೋವಿಡ್‌ ಸೋಂಕು ನಮ್ಮನ್ನು ಕಟ್ಟಿ ಹಾಕಿದೆ. ಸದ್ಯಕ್ಕೆ ತಂದೆಯವರ ಜನ್ಮದಿನದ ನಿಮಿತ್ತ 20 ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗುತ್ತಿದೆ ಎಂದರು.

ಈ ಬಾರಿ ಶಾಲೆಯ 200 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದು, ಉತ್ತಮ ಫಲಿತಾಂಶದ ನಿರೀಕ್ಷೆ ಇದೆ. ವಿದ್ಯಾರ್ಥಿಗಳು ಬರೀ ಸ್ಥಳೀಯವಾಗಿರದೇ ಜಾಗತಿಕವಾಗಿ ಶೈಕ್ಷಣಿಕ, ಔದ್ಯೋಗಿಕ ಅವಕಾಶಗಳನ್ನು ಪಡೆಯಲೆಂದು ಸ್ಕೂಲ್‌ ಐಕಾನ್‌ ಆನ್‌ಲೈನ್‌ ವೇದಿಕೆಯೊಂದನ್ನು ರಚಿಸಿದ್ದು ಯಶಸ್ವಿಯಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಕರಾದ ಅಶ್ವಿ‌ನಿ ಕುಂಬಾರಗೌಡರ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next