ಸಿದ್ದಾಪುರ: ಅಂಪಾರು ಗ್ರಾಮದ ಶ್ರೀರಾಮ್ ಕ್ಯಾಶ್ಯೂಸ್ ಸಂಸ್ಥೆಯಲ್ಲಿ ಸಂಸ್ಕರಿಸಿದ ಗೇರು ಬೀಜ ಖರೀದಿಸಿದ ಹಣ ನೀಡದೆ ವಂಚಿಸಿದ ಮುಂಬಯಿ ಮಹಾವೀರ ಟ್ರೇಡಿಂಗ್ ಕಂಪೆನಿಯ ಬಗ್ಗೆ ಶ್ರೀರಾಮ್ ಕ್ಯಾಶ್ಯೂಸ್ ಸಂಸ್ಥೆಯ ಆಡಳಿತ ಪಾಲುದಾರೆ ದಿವ್ಯಾ ಡಿ. ಪ್ರಭು ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮುಂಬಯಿಯಮಹಾವೀರ ಟ್ರೇಡಿಂಗ್ ಕಂಪೆನಿಯ ಆರೋಪಿಗಳಾದ ಭಾರತಿ ನೀಲೇಶ್ ಸಾವ್ಲಾ, ಅವರ ಪತಿ ನೀಲೇಶ್ ನಿರಂಜನ್ ಸಾವ್ಲಾ ಮತ್ತು ಸಂಬಂಧಿ ಪಿಯುಷ್ ಗೋಗ್ರಿ ಅವರು ಅಂಪಾರು ಶ್ರೀರಾಮ್ ಕ್ಯಾಶ್ಯೂಸ್ ಸಂಸ್ಥೆಯಲ್ಲಿ ಸಂಸ್ಕರಿಸಿದ ಗೇರು ಬೀಜ ಖರೀದಿ ಮಾಡಿದ ಹಣ 42,22,890 ರೂ. ನೀಡದೆ ವಂಚಿಸಿದ್ದಾರೆ.
ಆರೋಪಿಗಳು 27,76,830 ರೂ. ಮತ್ತು 15 ಲಕ್ಷ ರೂ. ಮೊತ್ತದ ಚೆಕ್ ನೀಡಿದ್ದರೂ, ಖಾತೆಯಲ್ಲಿ ಹಣ ಇಲ್ಲದೆ ನೀಡಿದ ಚೆಕ್ ಬೌನ್ಸ್ ಆಗಿದೆ. ಮಂಗಳೂರಿನ ನೀತೀಶ್ ಕೆ. ಟಕ್ಕರ್ ಅವರು ದಲ್ಲಾಳಿಯಾಗಿ ವ್ಯವಹಾರ ಕುದುರಿಸಿದ್ದರು ಎಂದು ದಿವ್ಯಾ ಡಿ. ಪ್ರಭು ಅವರು ದೂರಿನಲ್ಲಿ ತಿಳಿಸಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೇರು ಬೀಜ ಖರೀದಿಸಿ 1.71 ಕೋಟಿ ರೂ. ಹಣ ನೀಡದೆ ವಂಚನೆ
ಸಿದ್ದಾಪುರ: ಬೆಳ್ವೆ ಗ್ರಾಮದ ವನಸಿರಿ ಕ್ಯಾಶ್ಯೂಸ್ ಸಂಸ್ಥೆಯಲ್ಲಿ ಸಂಸ್ಕರಿಸಿದ ಗೇರು ಬೀಜ ಖರೀದಿಸಿದ ಹಣ ನೀಡದೆ ವಂಚಿಸಿದ ಮುಂಬಯಿಯ ಮಹಾವೀರ ಟ್ರೇಡಿಂಗ್ ಕಂಪೆನಿಯ ಬಗ್ಗೆ ವನಸಿರಿ ಕ್ಯಾಶ್ಯೂಸ್ ಸಂಸ್ಥೆಯ ಆಡಳಿತ ಪಾಲುದಾರ ನರೇಶ್ ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮುಂಬಯಿಯ ಮಹಾವೀರ ಟ್ರೇಡಿಂಗ್ ಕಂಪೆನಿಯ ಆರೋಪಿಗಳಾದ ಭಾರತಿ ನೀಲೇಶ್ ಸಾವ್ಲಾ, ಅವರ ಪತಿ ನೀಲೇಶ್ ನಿರಂಜನ್ ಸಾವ್ಲಾ ಮತ್ತು ಸಂಬಂಧಿ ಪಿಯುಷ್ ಗೋಗ್ರಿ ಅವರು ಬೆಳ್ವೆ ಗ್ರಾಮದ ವನಸಿರಿ ಕ್ಯಾಶ್ಯೂಸ್ ಸಂಸ್ಥೆಯಲ್ಲಿ ಸಂಸ್ಕರಿಸಿದ ಗೇರು ಬೀಜ ಖರೀದಿ ಮಾಡಿದ ಹಣ 1,71,41,948 ರೂ. ನೀಡದೆ ವಂಚಿಸಿದ್ದಾರೆ. ಮಂಗಳೂರಿನ ನೀತೀಶ್ ಕೆ. ಟಕ್ಕರ್ ಅವರು ದಲ್ಲಾಳಿಯಾಗಿ ವ್ಯವಹಾರ ಕುದುರಿಸಿದ್ದರು ಎಂದು ನರೇಶ್ ಶೆಟ್ಟಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.