ಬೆಂಗಳೂರು: ದೈಹಿಕ ಸಂಪರ್ಕ ಬೆಳೆಸಿಕೊಂಡು ಬೇರೊಬ್ಬ ಯುವ ತಿಯ ಜತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಆರೋಪಿಸಿ ಸಂತ್ರಸ್ತೆ ಡಿಜೆ ಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಕನಕನಗರದ 27 ವರ್ಷದ ಯುವತಿ ನೀಡಿದ ದೂರಿನ ಆಧಾರದ ಮೇಲೆ ನೋಮನ್ ಶರೀಫ್ ವಿರುದ್ಧ ಕೇಸ್ ದಾಖಲಾಗಿದೆ.
ಸಂತ್ರಸ್ತ ಯುವತಿ ಪಾಲಕರನ್ನು ಕಳೆದುಕೊಂಡು ಮಾವನ ಮನೆಯಲ್ಲಿ ವಾಸವಾಗಿದ್ದಳು. 2021ರಲ್ಲಿ ಮದುವೆ ವಿಚಾರವಾಗಿ ಶಾದಿ ಡಾಟ್ ಕಾಮ್‌ನಲ್ಲಿ ವರನನ್ನು ಹುಡುಕುತ್ತಿದ್ದಳು. ಆ ವೇಳೆ ನೋಮಾನ್ ಶರೀಫ್ ಎಂಬಾತ ಈಕೆಯ ಪ್ರೊಫೈಲ್ ಇಷ್ಟಪಟ್ಟು ತನ್ನ ನಂಬರ್‌ಗೆ ಕರೆ ಮಾಡುವಂತೆ ಸೂಚಿಸಿದ್ದ. ಆತನನ್ನು ನಂಬಿದ ಸಂತ್ರಸ್ತೆ ಕರೆ ಮಾಡಿದ್ದಳು. ಇದಾದ ಕೆಲ ದಿನಗಳವರೆಗೆ ಇಬ್ಬರೂ ಚಾಟಿಂಗ್ ಮಾಡಿಕೊಂಡು ಆತ್ಮೀಯವಾಗಿ ಮಾತನಾಡು ತ್ತಿದ್ದರು. ಈ ನಡುವೆ ಶರೀಫ್ ತನ್ನ ಪಾಲಕರನ್ನು ಪರಿಚಯಿಸುವುದಾಗಿ ಹೆಬ್ಬಾಳದಲ್ಲಿರುವ ಓಯೋ ರೂಂವೊಂದಕ್ಕೆ ಯುವತಿಯನ್ನು ಕರೆಸಿಕೊಂಡಿದ್ದ. ಆತನ ಮಾತಿನ ಮೋಡಿಗೆ ಮರುಳಾದ ಯುವತಿಯು ಒಯೋ ರೂಂಗೆ ಹೋಗಿದ್ದಳು. ಯುವತಿ ರೂಂ ಒಳಗೆ ಪ್ರವೇಶಿಸಿ ನೋಡಿದಾಗ ಆತನ ಪಾಲಕರು ಇರಲಿಲ್ಲ. ಈ ಬಗ್ಗೆ ಯುವತಿ ಪ್ರಶ್ನಿಸುತ್ತಿದ್ದಂತೆ ತನ್ನ ವರಸೆ ಬದಲಿಸಿದ ಶರೀಫ್ ನಾನೇ ನಿನ್ನ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿದ್ದ ಎಂದು ಸಂತ್ರಸ್ತೆ ಎಫ್ಐಆರ್‌ನಲ್ಲಿ ಉಲ್ಲೇಖೀಸಿದ್ದಾಳೆ.
ಸಂಪರ್ಕಕ್ಕೆ ಸಿಗದೇ ಪರಾರಿ: ಇದಾದ ನಂತರವೂ ಸಹ ಮದುವೆಯಾಗುತ್ತೇನೆ ಎಂದು ಪುಸಲಾಯಿಸಿ ಪದೇ ಪದೆ ಹಲವು ಕಡೆ ಕರೆಸಿಕೊಂಡು ದೈಹಿಕ ಸಂಪರ್ಕ ಹೊಂದಿದ್ದ. ಇದಾದ ಬಳಿಕ ಸಹಕರಿಸದಿದ್ದರೆ ತಾನು ಬೇರೆ ಮದುವೆಯಾಗುವುದಾಗಿ ಬೆದರಿಕೆ ಹಾಕುವ ಮೂಲಕ ಅನೇಕ ಬಾರಿ ನನ್ನನ್ನು ದುರ್ಬಳಕೆ ಮಾಡಿಕೊಂಡಿದ್ದ. ತಾನು ಬಾಡಿಗೆ ಮನೆ ಪಡೆಯಲು 50 ಸಾವಿರ ರೂ. ಹಣ ಕೇಳಿದ್ದ. ಆದರೆ, ಸಂತ್ರಸ್ತೆ ಹಣ ನೀಡಿರಲಿಲ್ಲ. ಇದರ ಬಳಿಕ ಬೇರೆ ಯುವತಿಯೊಬ್ಬಳೊಂದಿಗೆ ಶರೀಫ್ ಮದುವೆ ನಿಶ್ಚಿತಾರ್ಥವಾಗಿತ್ತು. ನಿಶ್ಚಿತಾರ್ಥದ ನಂತ ರವೂ ಮನೆಗೆ ಬಂದಿದ್ದ ಆರೋಪಿ, ಪೋಷಕರ ಒತ್ತಾಯಕ್ಕೆ ಮಣಿದು ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ. ನಾನು ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಭರವಸೆ ನೀಡಿದ್ದ. ನಂತರ ಮೊಬೈಲ್ ನಂಬರ್ ಬ್ಲಾಕ್ ಮಾಡಿ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಆಗ ಸಂತ್ರಸ್ತೆಯ ಸಂಬಂಧಿಕರು ಆರೋಪಿಯ ಕಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೆ, ಮದುವೆಗೆ ಒಪ್ಪದೆ ಈ ವಿಚಾರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದರೆ ಯುವತಿ, ಆಕೆ ಕುಟುಂಬದವರನ್ನು ಕೊಲ್ಲುವುದಾಗಿ ಬೆದರಿಸಿದ್ದ