Advertisement
ಪುತ್ತೂರಿನ ಮಾಧವಿ ಮನೋಹರ್ ರೈ ವಂಚನೆಗೆ ಒಳಗಾದವರು. ತನಿಶಾ ಶರ್ಮ ಎಂಬ ಹೆಸರಿನಿಂದ ಕರೆ ಮಾಡಿದ ವ್ಯಕ್ತಿ ವಂಚಿಸಿದವರು. ವಂಚನೆಯ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
“ಹಲೋ’ ಅನ್ನುವ ಸಂದೇಶದೊಂದಿಗೆ 919257384546 ಸಂಖ್ಯೆಯಿಂದ ಬ್ಯೂಟಿಪಾರ್ಲರ್‌ನ ಮಾಲಕಿಗೆ ವಾಟ್ಸ್ ಆ್ಯಪ್ ಸಂದೇಶ ಬಂದಿತ್ತು. ಡಿ.10ರಂದು ಮದುಮಗಳ ಶೃಂಗಾರ ಇದೆ. ಬೇರೆ ಬುಕ್ಕಿಂಗ್ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಇಲ್ಲವೆಂದು ಮಾಧವಿ ಹೇಳಿದಾಗ ಹಾಗಾದರೆ ಬುಕ್ಕಿಂಗ್ ಮಾಡಿ ಎಂದು ಅತ್ತ ಕಡೆಯಿಂದ ಸಂದೇಶ ಬಂದಿದೆ. ಬುಕ್ಕಿಂಗ್ ಚಾರ್ಜ್ 1000 ರೂ. ಪಾವತಿಸುವಂತೆ ಮಾಲಕಿ ಸಂದೇಶ ಕಳುಹಿಸಿದ್ದಾರೆ. 9 ಸಾವಿರ ರೂ. ವಂಚನೆ
ಬುಕ್ಕಿಂಗ್ ಹಣ ಪಾವತಿಸಲು ಗೂಗುಲ್ ಪೇ ವಿವರ ಕೇಳಿದ ಕೆಲವೇ ನಿಮಿಷಗಳಲ್ಲಿ ಅಪರಿಚಿತ ನಂಬರ್‌ನಿಂದ ಮತ್ತೂಂದು ಸಂದೇಶ ಬಂದಿದೆ. ಗೂಗುಲ್ ಪೇ ಮೂಲಕ ಮಾಧವಿ ಅವರ ನಂಬರ್‌ಗೆ 10 ಸಾವಿರ ರೂ. ರವಾನೆ ಆಗಿರುವ ಸ್ಕ್ರೀನ್ ಪ್ರತಿ ಕಳುಹಿಸಿ, ಸಾವಿರದ ಬದಲು ತಪ್ಪಿ 10 ಸಾವಿರ ರೂ. ಕಳುಹಿಸಿದ್ದು ದಯವಿಟ್ಟು 9 ಸಾವಿರ ರೂ. ಮರಳಿಸುವಂತೆ ವಿನಂತಿಸಲಾಗಿತ್ತು. ಸ್ಕ್ರೀನ್ ಪ್ರತಿ ನೋಡಿ ನಂಬಿದ ಮಾಧವಿ ರೈ ಇದು ನಿಜವೆಂದು ನಂಬಿ ಕಳುಹಿಸುತ್ತೇನೆ ಎಂದಿದ್ದಾರೆ. ಆಗ ಅತ್ತ ಕಡೆಯಿಂದ ಸ್ಕ್ಯಾನರ್ ಕೋಡ್ ಕಳಿಸಿದ್ದು ಅದರ ಮೂಲಕ ಮಾಧವಿ ರೈ 9 ಸಾವಿರ ರೂ. ಕಳುಹಿಸಿದ್ದಾರೆ.
Related Articles
ಕೆಲವು ಹೊತ್ತಿನ ಬಳಿಕ ಮತ್ತೂಂದು ಸಂದೇಶ ಬಂದಿದ್ದು ತಪ್ಪಿ 18,500 ರೂ. ಹಣ ನಿಮ್ಮ ಖಾತೆಗೆ ಜಮೆ ಆಗಿದ್ದು ಮರಳಿ ನೀಡುವಂತೆ ತಿಳಿಸಲಾಗಿತ್ತು. ಇದರಿಂದ ಅನುಮಾನಗೊಂಡ ಮಾಧವಿ ರೈ ಅವರು ಖಾತೆ ಪರಿಶೀಲಿಸಿದಾಗ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ.
Advertisement