ಉಡುಪಿ: ಆನ್‌ಲೈನ್ ಮೂಲಕ ವ್ಯಕ್ತಿಯೋರ್ವರಿಗೆ ವಂಚಿಸಿದ ಘಟನೆ ನಡೆದಿದೆ.
ಉಡುಪಿಯ ಭರತ ಅವರಿಗೆ ಯಾರೋ ಅಪರಿಚಿತ ವ್ಯಕ್ತಿ ಮೊಬೈಲ್‌ನಿಂದ ಪಾರ್ಟ್‌ಟೈಮ್ ಕೆಲಸದ ಬಗ್ಗೆ ಲಿಂಕ್ ಹಾಕಿ ಸಂದೇಶ ಕಳುಹಿಸಿದ್ದ. ಆ ಲಿಂಕ್ ಕ್ಲಿಕ್ ಮಾಡಿ ಲಾಗಿನ್ ಆಗಿ ಕೆಲವೊಂದು ಅಂಶಗಳನ್ನು ಕ್ಲಿಕ್ ಮಾಡಿದಾಗ ವ್ಯಾಲೆಟ್ ಕ್ರಿಯೆಟ್ ಆಗಿತ್ತು. ಬಳಿಕ ಅದಕ್ಕೆ ಹಣ ಹಾಕುವಂತೆ ತಿಳಿಸಲಾಯಿತು. ಅದರಂತೆ ನ. 29ರಂದು 964 ರೂ.ಹಾಕಿದ್ದು, ಅನಂತರ ಅದೇ ದಿನ 1,330 ರೂ. ವಾಪಸು ಬಂದಿತ್ತು. ಇದನ್ನು ನಂಬಿದ ಅವರು ನ. 30ರಂದು ಗೂಗಲ್ ಪೇ ಮೂಲಕ ಹಂತ ಹಂತವಾಗಿ ಒಟ್ಟು 84,630 ರೂ. ಹಾಗೂ ತನ್ನ ಸ್ನೇಹಿತ ಮನೋಜ್ ಅವರಿಂದ 17,040 ರೂ. ಸಹಿತ ಒಟ್ಟು 1,01,670 ರೂ. ಪಾವತಿಸಿದ್ದರು.
ಆರೋಪಿಗಳು ಪಾರ್ಟ್‌ಟೈಮ್ ಕೆಲಸ ಎಂದು ನಂಬಿಸಿ ನಕಲಿ ಸಂಸ್ಥೆಯನ್ನು ಬಿಂಬಿಸಿ ಒಟ್ಟು 1,01,670 ರೂ. ಪಡೆದು ವಾಪಸು ನೀಡದೆ ಮೋಸ ಮಾಡಿದ್ದಾರೆ. ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.